Marakkar : Lion of the Arabian Sea ಬಿಡುಗಡೆಗೂ ಮುನ್ನವೇ 100 ಕೋಟಿ ಗಳಿಸಿದ ಮರಕ್ಕಾರ್! ಕನ್ನಡದ ಟ್ರೇಲರ್‌ ಇಲ್ಲಿ ವೀಕ್ಷಿಸಿ

ಮರಕ್ಕಾರ್! ಚಿತ್ರಪ್ರೇಮಿಗಳನ್ನು ಕೇಳಿದರೆ ನಿದ್ದೆಗಣ್ಣಿನಲ್ಲೂ ಗುನುಗುವ ಹೆಸರೇ ಮರಕ್ಕಾರ್! (Marakkar) ಬಿಡುಗಡೆಗೂ ಮುನ್ನವೇ ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡು ಕ್ಲಾಸ್ ಆಡಿಯೆನ್ಸ್ ಹೃದಯದಲ್ಲಿ ನೆಲೆನಿಂತಿರುವ ಮೋಹನ್‌ಲಾಲ್ ನಟನೆಯ ಈ ಚಿತ್ರ ಇದೀಗ ತನ್ನ ಟ್ರೇಲರ್‌ನಿಂದ ಮಾಸ್ ಪ್ರಿಯ ವೀಕ್ಷಕರ ಹೃದಯಕ್ಕೂ ಲಗ್ಗೆಯಿಟ್ಟಿದೆ. ಅಲ್ಲದೇ ‘ಅರೇಬಿಯನ್ ಸಮುದ್ರದ ಸಿಂಹ’ ದ ರೋಚಕ ಸಂಭಾಷಣೆಗಳನ್ನು ಕಕನ್ನಡದಲ್ಲೇ ಕೇಳಿದ ಕನ್ನಡಿಗರು ಪುಳಕಿತಗೊಂಡಿದ್ದಾರೆ. ಈ ಚಿತ್ರದ ಕುರಿತು ಹೇಳಹೊರಟರೇ ಮುಗಿಯಲಾರದಷ್ಟು ವಿಷಯಗಳಿವೆ.

ಅಂದಹಾಗೆ ಪೋರ್ಚುಗೀಸರ ವಿರುದ್ಧ ಹೋರಾಡುವ ಕಥಾ ಹಂದರವುಳ್ಳ ಈ ಚಿತ್ರ ಕನ್ನಡದಲ್ಲಿಯೂ ತೆರೆಕಾಣಲಿದೆ. ಕನ್ನಡದಲ್ಲಿ ಪರಂವಾ ಸ್ಟುಡಿಯೋಸ್ ಮರಕ್ಕಾರ್ ಅನ್ನು ಪ್ರಸ್ತುತಪಡಿಸಲಿದೆ. ಜೊತೆಜೊತೆಗೆ ಮರಕ್ಕಾರ್ ಚಿತ್ರವು ಮಲಯಾಳಂ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್​ನಲ್ಲಿ ಚಿತ್ರವು ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ವಿಶ್ವದ  4100 ಚಿತ್ರಪರದೆಗಳಿಂದ 16,000 ಶೋಗಳು ಚಿತ್ರಪ್ರೇಮಿಗಳಿಗಾಗಿ ದೊರೆಯಲಿವೆ ಎಂದು ಸ್ವತಃ ಮೋಹನ್‌ಲಾಲ್ ಟ್ವೀಟ್ ಮಾಡಿದ್ದಾರೆ.

ಚಿತ್ರ ಡಿಸೆಂಬರ್ 2ರಂದು ಅಂದರೆ ನಾಳೆಯೇ ಬಿಡುಗಡೆಯಾಗಲಿದೆ. ಆದರೆ ಬಿಡುಗಡೆಗೂ ಮುನ್ನವೇ ಬುಕಿಂಗ್‌ನಿಂದ 100 ಕೋಟಿ ಹಣವನ್ನು ಚಿತ್ರ ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಚಿತ್ರದ ಬಜೆಟ್ 100 ಕೋಟಿಗೂ ಮಿಗಿಲಂತೆ, ಚಿತ್ರ ತೆರೆಕಾಣುವ ಮುನ್ನವೇ ಬಹುತೇಕ ಹಣವನ್ನು ಚಿತ್ರ ಬಾಚಿಕೊಂಡಿರುವುದಂತೂ ಸತ್ಯ.

ಮರಕ್ಕಾರ್ ಚಿತ್ರವು 2020ರ ಮಾರ್ಚ್​ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಕೊವಿಡ್ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿತು. ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆದರೆ ಕೇರಳ ಸರ್ಕಾರ ಹಾಗೂ ಕೆಲವು ಪ್ರಮುಖ ವ್ಯಕ್ತಿಗಳ ಆಗ್ರಹದ ಮೇರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Rachita Ram : ಫರ್ಸ್ಟ್ ನೈಟ್ ನಲ್ಲಿ ಏನು ಮಾಡ್ತಾರೇ? ಅದನ್ನೇ ಸಿನಿಮಾದಲ್ಲಿ ಮಾಡಿದ್ದೇವೆ: ರಚಿತಾ ಬೋಲ್ಡ್ ಆನ್ಸರ್

( Marakkar Mohanlal film Kannada trailer released here you can watch)

Comments are closed.