ಸೋಮವಾರ, ಜೂನ್ 16, 2025
Homeಮಿಸ್ ಮಾಡಬೇಡಿSignature : ನೀವು ಮಾಡುವ ಸಹಿ ಏನೆಲ್ಲಾ ಹೇಳುತ್ತದೆ ಗೊತ್ತಾ?

Signature : ನೀವು ಮಾಡುವ ಸಹಿ ಏನೆಲ್ಲಾ ಹೇಳುತ್ತದೆ ಗೊತ್ತಾ?

- Advertisement -

ಸಹಿ(Signature) ಎಂದರೆ ಕಾಗದದ ಮೇಲಿನ ವಿಧಿ(Destiny) ಅನ್ನಬಹುದಾಗಿದೆ. ಪ್ರತಿಯೊಬ್ಬರ ಸಹಿಯೂ ಭಿನ್ನವಾಗಿರುತ್ತದೆ(Different). ಯಾವುದೇ ಎರಡು ಸಹಿಗಳ ಶೈಲಿ (Signature Style) ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಂದು ಸಹಿಯೂ ಒಂದು ಗುಪ್ತ ಸಂದೇಶವೇ (Hidden message). ನಾವು ಮಾಡುವ ಸ್ಪಷ್ಟ ಸಹಿಯಿಂದಲೇ ನಮ್ಮ ವ್ಯಕ್ತಿತ್ವವನ್ನು ಹೇಳಬಹುದಂತೆ. ವ್ಯಕ್ತಿಯ ವ್ಯಕ್ತಿತ್ವ, ಆದ್ಯತೆಗಳು, ಸಾಮಾಜಿಕ ಜೀವನ, ಆಯ್ಕೆಗಳು, ಯೋಗ್ಯತೆ ಮತ್ತು ಜೀವನದ ಬಗ್ಗೆ ನಮ್ಮ ಮನೋಭಾವವನ್ನು ಸೂಚಿಸುತ್ತದೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಚಿತ್ರಿಸಬಲ್ಲದು. ಒತ್ತಡ ಮತ್ತು ಒತ್ತಡಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯ ಎಲ್ಲವೂ ಸಹಿಯಲ್ಲಡಗಿದೆ.

ನಿಮ್ಮ ಸಹಿ ಸುಂದರವಾಗಿ ಕಾಣಿಸಬೇಕೆಂದರೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ನಿಮ್ಮ ಹಣೆಬರಹವನ್ನು ತಿರುಗಿಸಲು ಸಹಿ ನಿಮಗೆ ಸಹಾಯಮಾಡಬಲ್ಲದು. ಅದೃಷ್ಟ ನಿಜವಾಗಿಯೂ ನಮ್ಮ ಕೈಲಿದೆ. ನೀವು ಮಾಡುವ ಸಹಿ ನಿಮ್ಮ ಆತ್ಮದ ಕನ್ನಡಿಯಾಗಿದೆ. ಪರ್ಫೆಕ್ಟ್‌ ಸಹಿ ಎಂದು ಯಾವುದೂ ಇಲ್ಲ. ಆದರೆ ಕೆಲವು ನಿಯಮಗಳು ನಿಮ್ಮ ಸಹಿಯ ಅಂದವನ್ನು ಹೆಚ್ಚಿಸಬಹುದು ಮತ್ತು ನಿಮಗೆ ಖ್ಯಾತಿ , ಸಮೃದ್ಧಿಯನ್ನು ತಂದುಕೊಡಬಹುದು.

ನೀವು ಮಾಡುವ ಸಹಿ ಏನು ಹೇಳುತ್ತದೆ ಮತ್ತು ಆದರ್ಶ ಸಹಿ ರೂಢಿಸಿಕೊಳ್ಳಲು ಕೆಲವು ಸಲಹೆಗಳು :

  • ನಿಮ್ಮ ಹೆಸರು ಮತ್ತು ನಿಮ್ಮ ಸರ್‌ನೇಮ್‌ ಸೇರಿಸಿ ಮಾಡುವ ಸಹಿ ನಿಮಗೆ ಖ್ಯಾತಿ ತರಬಲ್ಲದು.
  • ಆರ್ಥಿಕ ನಷ್ಟ ತಪ್ಪಿಸಲು ನಿಮ್ಮ ಸಹಿಯ ಕೊನೆಯ ಅಕ್ಷರವನ್ನು ಮೇಲಕ್ಕೆ ಬರೆದು ಕೊನೆಗಳಿಸಬಹುದು.
  • ಪ್ರಗತಿ ಸಾಧಿಸಲು 45 ಡಿಗ್ರಿಯಲ್ಲಿ ಸಹಿ ಮಾಡಿ.
  • ನಿಮ್ಮ ಸಹಿಯ ಕೆಳಗಡೆ ಹಾಕುವ ಸಂಪೂರ್ಣ ಅಂಡರ್ಸ್ಕೋರ್‌ ಬೆಂಬಲ ಸೂಚಿಸುವುದು.
  • ಅಂಡರ್ಸ್ಕೋರ್‌ ನ ಮಧ್ಯದಲ್ಲಿ ಹಾಕುವ ಎರಡು ಚುಕ್ಕೆಗಳು ನಿಮ್ಮ ಅಸ್ತಿತ್ವವನ್ನು ಪ್ರತಿನಿಧಿಸುವುದು.
  • ಸ್ಪಷ್ಟವಾದ ಸಹಿ ನಿಮ್ಮ ಮುಕ್ತ ಜೀವನ ಮತ್ತು ಕಡಿಮೆ ಒತ್ತಡ ಸೂಚಿಸುವುದು.
  • ನಿಮ್ಮ ಹೆಸರಿನ ಮೊದಲ ಅಕ್ಷರ ಮತ್ತು ನಿಮ್ಮ ಸರ್‌ನೇಮ್‌ನ ಎರಡನೇ ಅಕ್ಷರ ಪೋಷಕರೊಂದಿಗೆ ನಿಮಗೆ ಇರುವ ಸಂಪರ್ಕ ಸೂಚಿಸುವುದು.
  • ಹೆಸರಿನ ನಂತರ ಅಥವಾ ಮಧ್ಯದಲ್ಲಿ ಚುಕ್ಕೆಗಳನ್ನು ಸೇರಿಸಬೇಡಿ ಅದು ನಿಮ್ಮ ಪ್ರಗತಿಯ ನಿಲುಗಡೆ ಅಥವಾ ಪ್ರಾರಂಭ ಸೂಚಿಸುವುದು.

ಸಹಿಯ ವಿಶ್ಲೇಷಣೆಗೆ ಮೋಟಾರ್ ರಿಫ್ಲೆಕ್ಸ್‌ ಕೌಶಲ್ಯ ಎನ್ನುತ್ತಾರೆ. ಉತ್ತಮ ಕಲಿಕೆಯಿಂದಲೇ ಕೌಶಲ್ಯ ಸಾಧಿಸಬಹುದಾಗಿದೆ.

ಇದನ್ನೂ ಓದಿ : Femina Miss India 2022: ಕರ್ನಾಟಕದ ಸಿನಿ ಶೆಟ್ಟಿಗೊಲಿದ “ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್” ಕಿರೀಟ

ಇದನ್ನೂ ಓದಿ : BMTC cut the conductor job : ಡಿಜಿಟಲ್ ರೂಪದಲ್ಲಿ ಸಿಗಲಿದೆ ಟಿಕೇಟ್ : ಕಂಡಕ್ಟರ್ ಕೆಲಸಕ್ಕೆ ಕತ್ತರಿ ಹಾಕಿದ ಬಿಎಂಟಿಸಿ

(Signature the right type of signature can bring fame to you)

RELATED ARTICLES

Most Popular