- ವಂದನಾ ಕೊಮ್ಮುಂಜೆ
ಗಾನಗಾರುಡಿಗ, ಮದುರದ್ವನಿಯ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಲೋಕ ದಿಗ್ಗಜ . ತಮ್ಮ ಸ್ವರಮಾಧುರ್ಯದಿಂದಲೇ ತಮ್ಮ ಅಭಿಮಾನಿಗಳನ್ನುಸಂಗೀತದ ಅಲೆಯಲ್ಲಿ ತೇಲಾಡಿಸಿದವರು. ಅವರ ಹಾಡು ಅಂದ್ರೆ ನೇ ಅಲ್ಲಿ ಎಲ್ಲರನ್ನು ಸಮ್ಮೋಹನಗೊಣಿಸುವ ಮಾಧುರ್ಯ ವಿರುತ್ತೆ , ಅದರಲ್ಲೂ ಅವರು ಹಾಡಿದ ಕನ್ನಡದ ಹಾಡುಗಳು ಗೆಲ್ಲದ ಮನಸ್ಸುಗಳಿರಲಿಕ್ಕಿಲ್ಲ.

ಹೌದು ಕನ್ನಡದ ಸಿನಿ ಹಾಡುಗಳಿಗೆ ಹೊಸ ಮಾಧುರ್ಯವನ್ನು ಕೊಟ್ಟವರು ಎಸ್ ಪಿ ಬಾಲಸುಬ್ರಹ್ಮಣ್ಯಂ. ಅವರು ಹಾಡಿದ ಹಾಡುಗಳೆಲ್ಲೂ ಸೂಪರ್ ಹಿಟ್ . ಇವರ ಹಾಡುಗಳು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿವೆ ಅದ್ರೆ ತಪ್ಪಾಗಲ್ಲ . ಇವರು ಸಂತೋಷಕ್ಕೆ ಹಾಡು ಸಂತೋಷಕ್ಕೆ ಅಂತ ಎಸ್ ಹಾಡು ಹಾಡಿದ್ರೆ ಕನ್ನಡಿಗರು ಅವರ ಹಾಡಿನ ಜೊತೆ ಹೆಜ್ಜೆ ಹಾಕಿದ್ದಾರೆ . “ಪವಡಿಸೋ ಪರಮಾತ್ಮ” ಅನ್ನೋ ಮೂಲಕ ಕನ್ನಡಿಗರಿಗೆ ಹಾಡಿನಲ್ಲೇ ಶ್ರೀನಿವಾಸನ ಭಕ್ತಿಯನ್ನು ಸಾರಿದ್ದಾರೆ. ಹೀಗೆ ಹಲವಾರು ಹಾಡುಗಳನ್ನು ಕನ್ನಡಿಗರ ಮನಸ್ಸಿಗೆ ಮುಟ್ಟಿಸಿದ್ದಾರೆ . ಕನ್ನಡಿಗರಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಂದ್ರೆ ವಿಶೇಷ ಅಭಿಮಾನ.
ಇನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಗೂ ಕನ್ನಡಿಗರೆಂದ ಅತೀವ ಪ್ರೀತಿ ಇತ್ತು. ಇದನ್ನು ಅವರ ಪ್ರತಿ ಮಾತಿನಲ್ಲೂ ಸಾಭಿತು ಮಾಡಿದ್ದಾರೆ. ತಮ್ಮ ಪ್ರತಿ ಸಂದರ್ಶನದಲ್ಲೂ ಕನ್ನಡಿಗರು ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯನ್ನು ಪ್ರಸ್ತಾಪಿಸುತ್ತಲೇ ಇರುತ್ತಿದ್ರು. ನಾನು ನನ್ನ ಎರಡನೇ ಹಾಡು ಹಾಡಿದ್ದೇ ಕನ್ನಡದಲ್ಲಿ . ಅಲ್ಲಿಂದ ಇಲ್ಲಿಯವರೆಗೆ ಅತೀವ ಪ್ರೀತಿ ತೋರಿಸಿದ್ದಾರೆ. ಕನ್ನಡಿಗರು ತಮ್ಮನ್ನು ತಮ್ಮ ಕುಟುಂಬದ ಸದಸ್ಯನಂತೆ ಕಾಣುತ್ತಾರೆ . ಇದಕ್ಕೆ ನಾನು ಚಿರರುಣಿ ಅಂದಿದ್ರು.

ಮುಂದಿನ ಜನ್ಮ ಕನ್ನಡದ ನೆಲದಲ್ಲೇ ಆಗಬೇಕು
ಹೌದು ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕನ್ನಡ ಪ್ರೀತಿನ್ನು ಮಾತ್ರ ಮರೆಯುತ್ತಿರಲಿಲ್ಲ. ನಾನು ಯಾವತ್ತು ಕನ್ನಡದ ಸೇವಕ , ಮುಂದಿನ ಜನ್ಮ ಅನ್ನೋದಿದ್ರೆ ಅದು ಕನ್ನಡ ನಾಡಲ್ಲಿ ಅಂತ ಹೇಳಿಕೊಳ್ಳುತ್ತಿದ್ರು. ಕನ್ನಡದ ಮೇಲೆ ಎಷ್ಟು ಅಭಿಮಾನ ಇತ್ತು ಅಂದ್ರೆ ಕನ್ನಡಿಗರಿಗಾಗಿ ಕನ್ನಡದಲ್ಲೇ ಮಾತನಾಡುವುದನ್ನು ಕಲಿತುಕೊಂಡಿದ್ರು.

ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾಗಿ ಹಾಡು ಹಾಡಿದ್ದ ರಾಜ್ ಕುಮಾರ್
ಎಸ್ ಪಿ ಬಾಲಸುಬ್ರಹ್ಮಣ್ಯಂ ಗೆ ರಾಜ್ ಅಂದ್ರೆ ಎಲ್ಲಿಲ್ಲದ ಗೌರವ . ತಮ್ಮ ಸಿನಿಮಾ ಮುದ್ದಿನ ಮಾವ ಚಿತ್ರಕ್ಕೆ ರಾಜ್ ಕುಮಾರ್ ಹಾಡಬೇಕು ಅಂತ ಬಯಸಿದ್ರು. ಅದಕ್ಕಾಗಿ ದೀಪಾವಳಿ ಹಾಡು ಹಾಡುವಂತೆ ಕೇಳಿದ್ರಂತೆ . ಅವರ ಮಾತಿಗೆ ಕೂಡಲೇ ಖುಷಿಯಿಂದ ಒಪ್ಪಿಕೊಂಡ ರಾಜ್ ಈ ಹಾಡು ಹಾಡಿದ್ರು ಅಂತ ಎಸ್ ಪಿ ಬಾಲಸುಬ್ರಹ್ಮಣ್ಯಂ ಹೇಳಿಕೊಳ್ಳುತ್ತಿದ್ರು

ಇದೀಗ ಇಂತಹ ಸಹೃದಯಿ ಎಸ್ ಪಿ ಬಾಲಸುಬ್ರಹ್ಮಣ್ಯಂ ನಮ್ಮನಗಲಿದ್ದಾರೆ . ಆದ್ರೆ ಅವರ ನೆನಪು ಮತ್ತು ಅವರ ಹಾಡುಗಳು ಮಾತ್ರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿವೆ.