Special Engagement : ವಿವಾಹಕ್ಕೂ ಕರಾರು ಪತ್ರ, ಯಲ್ಲಾಪುರದಲ್ಲೊಂದು ವಿಭಿನ್ನ ನಿಶ್ಚಿತಾರ್ಥ – Viral News

Published by
Kannada News Next Desk

ಕಾರವಾರ : Special Engagement : ಮದುವೆ ಅಂದ್ರೆ ಅದೇನೋ ಸಂಭ್ರಮ. ಹುಡುಗ, ಹುಡುಗಿಯ ಹುಡುಕಾಟದಿಂದ ಹಿಡಿದು ಸಪ್ತಪದಿ ತುಳಿಯುವವರೆಗೂ ಅದೇ ಪುಳಕ. ಆಧುನೀಕರಣದ ಭರಾಟೆಯಲ್ಲಿ ಸಂಪ್ರದಾಯಗಳೇ ಮರೆಯಾಗುತ್ತಿವೆ. ವಿಭಿನ್ನವಾಗಿ ಮದುವೆ ಆಗೋದಕ್ಕೆ ಎಲ್ಲರೂ ಹವಣಿಸುತ್ತಾರೆ. ಆದ್ರೆ ಇಲ್ಲೊಂದು ಜೋಡಿಯ ಮದುವೆ ನಿಶ್ಚಿತಾರ್ಥ ಶಾಸ್ತ್ರ ನೆರವೇರಿದೆ. ಸಾಮಾನ್ಯವಾಗಿ ನಿಶ್ಚಿತಾರ್ಥದ ಸಂದರ್ಭದಲ್ಲಿ ಉಂಗುರ ಬದಲಾಯಿಸಿಕೊಳ್ಳುವುದು ಸಾಮಾನ್ಯ, ಆದರೆ ಗುರುಗಣೇಶ್‌ ಹಾಗೂ ಸುಮಾ ಜೋಡಿ ಕರಾರು ಪತ್ರವನ್ನು ಸಿದ್ದಪಡಿಸಿ ಅದಕ್ಕೆ ಸಹಿ ಹಾಕುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಡಬ್ಗುಳಿಯ ಗುರುಗಣೇಶ್‌ ಭಟ್‌ (Guruganesh Bhat) ಹಾಗೂ ತೇಲಂಗಾರದ ಸುಮಾ ಕಂಚಿಪಾಲ್‌ (Suma Kanchipala) ಎಂಬವರ ನಿಶ್ಚಿತಾರ್ಥ ನೆರವೇರಿತ್ತು. ಮದುವೆ ನಿಶ್ಚಿತಾರ್ಥ ಸಂಪ್ರದಾಯಗಳು ನೆರವೇರಿತು. ಈ ವೇಳೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಕರಾರು ಪತ್ರ. ಅಷ್ಟಕ್ಕೂ ಈ ಕರಾರು ಪತ್ರದಲ್ಲೇನಿದೆ ಅಂತಾ ನೋಡಿದ್ರೆ. ಹಿಂದೂ ಸಂಪ್ರದಾಯದಂತೆ ಅರ್ಹ ವಯಸ್ಸಿಗೆ ಮದುವೆ ಆಗುತ್ತಿದ್ದೇವೆ. ಮದುವೆ ಆದ ನಂತರದಲ್ಲಿ ನಮ್ಮಿಬ್ಬರ ಸಂಪೂರ್ಣ ಜವಾಬ್ದಾರಿ ನಮ್ಮದೆ. ಮದುವೆಯ ವೇಳೆಯಲ್ಲಿ ವರದಕ್ಷಿಣೆ ಆಗಲಿ, ವಧು ದಕ್ಷಿಣೆಯನ್ನಾಗಲಿ ನಾವು ತೆಗೆದುಕೊಳ್ಳುವುದಿಲ್ಲ. ಒಂದು ವರ್ಷದ ಒಳಗಾಗಿ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯವನ್ನು ನಡೆಸುವುದಾಗಿ ಕರಾರು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕರಾರು ಪತ್ರಕ್ಕೆ ಎರಡೂ ಕಡೆಯವರು ಸಹಿ ಹಾಕಿದ್ದಾರೆ. ಸದ್ಯ ನಿಶ್ಚಿತಾರ್ಥದ ಕರಾರು ಪತ್ರ ಇದೀಗ ಎಲ್ಲರ ಗಮನ ಸೆಳೆದಿದೆ. ಆದರೆ ಈ ಕರಾರು ಐಡಿಯಾ ಗುರುಗಣೇಶ್‌ ಅವರಾಗಲಿ, ಸುಮ ಅವರದ್ದಾಗಲಿ ಅಲ್ಲಾ. ಬದಲಾಗಿ ಗುರುಗಣೇಶ್‌ ಅವರ ಸ್ನೇಹಿತರದ್ದು.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಗುರುಗಣೇಶ್‌ ಡಬ್ಗುಳಿ ಹಾಗೂ ಸುಮಾ ಕಂಚೀಪಾಲ್‌ ಮಾದ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದಾ ಹೊಸತನಕ್ಕೆ ಮಿಡಿಯುತ್ತಿರುವ ಈ ಜೋಡಿಗೆ ಹೊಸ ಐಡಿಯಾ ಕೊಟ್ಟವರು, ಇವರ ಸ್ನೇಹಿತರಾದ ಸ್ಕಂದ ಆಗುಂಬೆ, ಅಚ್ಯುತ್‌ ಕುಮಾರ್‌ ಯಲ್ಲಾಪುರ, ಶರತ್‌ ಕುಮಾರ್‌ ಹಾಗೂ ಗಣಪತಿ ದಿವಾನ. ಸ್ನೇಹಿತರು ನೀಡಿದ ಐಡಿಯಾವನ್ನು ಗುರುಗಣೇಶ್‌ ಹಾಗೂ ಸುಮ ಅವರು ಒಪ್ಪಿಕೊಂಡು ಬಿಳಿಯ ಹಾಳೆಯ ಮೇಲೆ ಒಕ್ಕಣೆ ಬರೆದು ಸಹಿ ಹಾಕುವ ಮೂಲಕ ಕರಾರಿನಂತೆ ನಡೆದುಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ. ಮದುವೆಯಲ್ಲಿ ವಿಭಿನ್ನತೆಯನ್ನು ಹುಡುಕುವ ಇಂದಿನ ಕಾಲದಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನೇ ವಿಭಿನ್ನವಾಗಿ ಆಚರಿಸುವ ಮೂಲಕ ಇತರರು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಜೋಡಿಯ ಬದುಕು ಹಸನಾಗಿರಲಿ, ಮಾಧ್ಯಮ ಲೋಕದ ಪಯಣ ಹೀಗೆಯೇ ಸಾಗಲಿ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ : E-PAN card facility : ಮನೆಯಲ್ಲೇ ಕುಳಿತು ಉಚಿತವಾಗಿ ಪಡೆಯಬಹುದು ಪ್ಯಾನ್‌ ಕಾರ್ಡ್‌

ಇದನ್ನೂ ಓದಿ : Meghana Raj Sarja : ಶಾಲೆಗೆ ಹೊರಟ ಜ್ಯೂನಿಯರ್ ಚಿರು: ಮೇಘನಾ ರಾಜ್‌ ಸರ್ಜಾ ಹಂಚಿಕೊಂಡ್ರು ಸ್ಪೆಷಲ್ ಪೋಟೋ

Special Engagement in Yellapura contract letter Guruganesh Bhat Suma Kanchipala viral news

Share

Recent Posts