Abhishek Sharma : ಫ್ರಾಂಚೈಸಿ ಟಿ20 ಲೀಗ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದ ಯುವರಾಜನ ಶಿಷ್ಯ ಅಭಿಷೇಕ್ ಶರ್ಮಾ!

Abhishek Sharma : ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದವರು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh). ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದ ಯುವಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ವೈಟ್ ಬಾಲ್ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬರು.

Abhishek Sharma :  ಬೆಂಗಳೂರು: ಟೀಮ್ ಇಂಡಿಯಾದ ಸಿಕ್ಸರ್ ಸರ್ದಾರ, ಸಿಕ್ಸರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದವರು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh). ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದ ಯುವಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ವೈಟ್ ಬಾಲ್ ಮ್ಯಾಚ್ ವಿನ್ನರ್’ಗಳಲ್ಲಿ ಒಬ್ಬರು.

Abhishek sharma yuvraj singh disciple who wrote the world record in ipl 2024 t20 league history
Image credit to original source

ಕ್ರಿಕೆಟ್’ನಿಂದ ನಿವೃತ್ತಿಯಾದ ನಂತರ ಯುವರಾಜ್ ಸಿಂಗ್, ತಮ್ಮದೇ ರೀತಿಯ ಶಿಷ್ಯನೊಬ್ಬನನ್ನು ತಯಾರು ಮಾಡಿದ್ದಾರೆ. ಆತ ಕೂಡ ಯುವಿ ಥರಾನೇ ಸಿಕ್ಸರ್’ಗಳನ್ನು ಬಾರಿಸುತ್ತಾನೆ. ಐಪಿಎಲ್-2024 (IPL 2024) ಟೂರ್ನಿಯಲ್ಲಂತೂ ಆತ ಅತೀ ಹೆಚ್ಚು 41 ಸಿಕ್ಸರ್’ಗಳನ್ನು ಬಾರಿಸಿದ ಸಾಧನೆ ಮಾಡಿದ್ದಾನೆ. ಆತನೇ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಎಡಗೈ ಆರಂಭಕಾರ ಅಭಿಷೇಕ್ ಶರ್ಮಾ (Abhishek Sharma).

2018ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನಾಗಿದ್ದ ಅಭಿಷೇಕ್ ಶರ್ಮಾ, ಈ ಬಾರಿಯ ಐಪಿಎಲ್’ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾನೆ. ಪಂಜಾಬ್’ನ ಅಮೃತಸರದ 23 ವರ್ಷದ ಯುವ ಆಲ್ರೌಂಡರ್ ಅಭಿಷೇಕ್ ಶರ್ಮಾ ಐಪಿಎಲ್-2024 ಟೂರ್ನಿಯಲ್ಲಿ ಆಡಿದ 13 ಪಂದ್ಯಗಳಲ್ಲಿ ಕೇವಲ 223 ಎಸೆತಗಳನ್ನೆದುರಿಸಿ 209.41ರ ಅಮೋಘ ಸ್ಟ್ರೈಕ್’ರೇಟ್’ನಲ್ಲಿ 467 ರನ್ ಗಳಿಸಿದ್ದಾರೆ. ಈ ಬ್ಯಾಟಿಂಗ್ ಆರ್ಭಟದ ವೇಳೆ ಅಭಿಷೇಕ್ ಶರ್ಮಾ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ : KKR Vs SRH IPL 2024 Qualifier-1 : ಐಪಿಎಲ್’ನ ಮೊದಲ ಕ್ವಾಲಿಫೈಯರ್, ಗೆದ್ದವರು ನೇರ ಫೈನಲ್’ಗೆ, ಸೋತವರಿಗಿದೆ ಸೆಕೆಂಡ್ ಚಾನ್ಸ್ !

ಇನ್ನಿಂಗ್ಸ್ ಒಂದರಲ್ಲಿ 30 ಅಥವಾ 30ಕ್ಕಿಂತ ಕಡಿಮೆ ಎಸೆತಗಳನ್ನೆದುರಿಸಿ ಫ್ರಾಂಚೈಸಿ ಟಿ20 ಲೀಗ್ ಟೂರ್ನಿಯೊಂದರಲ್ಲಿ 400 ರನ್ ಗಳಿಸಿದ ಜಗತ್ತಿನ ಮೊದಲ ಆಟಗಾರ ಅಭಿಷೇಕ್ ಶರ್ಮಾ. ಐ ಬಾರಿಯ ಐಪಿಎಲ್’ನಲ್ಲಿ 41 ಸಿಕ್ಸರ್’ಗಳನ್ನು ಬಾರಿಸಿರುವ ಅಭಿಷೇಕ್ ಶರ್ಮಾ, ಐಪಿಎಲ್ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು (41 ಸಿಕ್ಸರ್ಸ್) ಸಿಡಿಸಿದ ದಾಖಲೆಯನ್ನು ಬರೆದಿದ್ದಾರೆ. ಯುವರಾಜ್ ಸಿಂಗ್ ಅವರಂತೆ ಅಭಿಷೇಕ್ ಶರ್ಮಾ ಕೂಡ ಎಡಗೈ ದಾಂಡಿಗ, ಎಡಗೈ ಸ್ಪಿನ್ನರ್. ಅಭಿಷೇಕ್ ಶರ್ಮಾಗೆ ಸ್ವತಃ ಯುವರಾಜ್ ಸಿಂಗ್ ಅವರೇ ಕ್ರಿಕೆಟ್ ಪಾಠ ಹೇಳಿ ಕೊಟ್ಟಿದ್ದಾರೆ.

Abhishek sharma yuvraj singh disciple who wrote the world record in ipl 2024 t20 league history
Image credit to original source

ಐಪಿಎಲ್- 2024 ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸಾಧನೆ:

Vs ಪಂಜಾಬ್ ಕಿಂಗ್ಸ್: 66 (28 ಎಸೆತ, 5 ಬೌಂಡರಿ, 6 ಸಿಕ್ಸರ್)
Vs ಲಕ್ನೋ ಸೂಪರ್ ಜಯಂಟ್ಸ್: 75* (28 ಎಸೆತ, 8 ಬೌಂಡರಿ, 6 ಸಿಕ್ಸರ್)
Vs ಮುಂಬೈ ಇಂಡಿಯನ್ಸ್: 11 (16 ಎಸೆತ, 1 ಸಿಕ್ಸರ್)
Vs ರಾಜಸ್ಥಾನ ರಾಯಲ್ಸ್: 12 (10 ಎಸೆತ, 1 ಸಿಕ್ಸರ್)
Vs ಚೆನ್ನೈ ಸೂಪರ್ ಕಿಂಗ್ಸ್: 15 (9 ಎಸೆತ, 1 ಬೌಂಡರಿ, 1 ಸಿಕ್ಸರ್)
Vs ರಾಯಲ್ ಚಾಲೆಂಜರ್ಸ್ ಬೆಂಗಳೂರು: 31 (13 ಎಸೆತ, 3 ಬೌಂಡರಿ, 2 ಸಿಕ್ಸರ್)
Vs ಡೆಲ್ಲಿ ಕ್ಯಾಪಿಟಲ್ಸ್: 46 (12 ಎಸೆತ, 2 ಬೌಂಡರಿ, 6 ಸಿಕ್ಸರ್)
Vs ರಾಯಲ್ ಚಾಲೆಂಜರ್ಸ್ ಬೆಂಗಳೂರು: 34 (22 ಎಸೆತ, 2 ಬೌಂಡರಿ, 2 ಸಿಕ್ಸರ್)
Vs ಪಂಜಾಬ್ ಕಿಂಗ್ಸ್: 16 (11 ಎಸೆತ, 2 ಬೌಂಡರಿ, 1 ಸಿಕ್ಸರ್)
Vs ಚೆನ್ನೈ ಸೂಪರ್ ಕಿಂಗ್ಸ್: 37 (12 ಎಸೆತ, 3 ಬೌಂಡರಿ, 4 ಸಿಕ್ಸರ್)
Vs ಗುಜರಾತ್ ಟೈಟನ್ಸ್: 29 (20 ಎಸೆತ, 2 ಬೌಂಡರಿ, 2 ಸಿಕ್ಸರ್)
Vs ಮುಂಬೈ ಇಂಡಿಯನ್ಸ್: 63 (23 ಎಸೆತ, 3 ಬೌಂಡರಿ, 7 ಸಿಕ್ಸರ್)
Vs ಕೋಲ್ಕತಾ ನೈಟ್ ರೈಡರ್ಸ್: 32 (19 ಎಸೆತ, 4 ಬೌಂಡರಿ, 2 ಸಿಕ್ಸರ್)

ಇದನ್ನೂಓದಿ :  Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

ಐಪಿಎಲ್- 2024 ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸಾಧನೆ:

ಪಂದ್ಯ: 13
ಎಸೆತ: 223
ರನ್: 467
ಬೆಸ್ಟ್: 75*
ಸ್ಟ್ರೈಕ್’ರೇಟ್: 209.41
ಸರಾಸರಿ: 38.91
50/100: 03/00
ಬೌಂಡರಿ: 35
ಸಿಕ್ಸರ್ಸ್: 41

ಇದನ್ನೂ ಓದಿ : CSK ವಿರುದ್ಧ RCB ಗೆಲುವಿಗೆ ಕಾರಣ ಧೋನಿ ಬಾರಿಸಿದ ಆ ಸಿಕ್ಸರ್! ವಿಜಯಮಂತ್ರದ ರಹಸ್ಯ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್

ಒಂದೇ ಐಪಿಎಲ್’ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯರು:

1. ಅಭಿಷೇಕ್ ಶರ್ಮಾ: 41* ಸಿಕ್ಸರ್ಸ್ (2024)
2. ವಿರಾಟ್ ಕೊಹ್ಲಿ: 38 ಸಿಕ್ಸರ್ಸ್ (2016)
3. ರಿಷಭ್ ಪಂತ್: 37 ಸಿಕ್ಸರ್ಸ್ (2018)
4. ವಿರಾಟ್ ಕೊಹ್ಲಿ: 37* ಸಿಕ್ಸರ್ಸ್ (2024)
5. ಶಿವಂ ದುಬೆ: 35 ಸಿಕ್ಸರ್ಸ್ (2023)

Abhishek Sharma: Yuvraj Singh disciple who wrote the world record in IPL 2024 T20 league history

Comments are closed.