MS Dhoni handshake controversy : ಈ ಮನುಷ್ಯ ಖಂಡಿತಾ ನಿಂದನೆಗೆ ಅರ್ಹನಲ್ಲ..! ದೇಶಕ್ಕೆ 2 ವಿಶ್ವಕಪ್ ಗೆದ್ದು ಕೊಟ್ಟ ನಾಯಕನನ್ನು ನಿಂದಿಸದಿರಿ!

MS Dhoni handshake controversy : ಧೋನಿ ಅವತ್ತು RCB ಆಟಗಾರರ ಕೈ ಕುಲಕಲು ತನ್ನ ಆಟಗಾರರೊಂದಿಗೆ ಸಿದ್ಧವಾಗಿ ಮೈದಾನದೊಳಗೆ 30 yards ಬಳಿ ನಿಂತಿದ್ದರು. CSK ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದ್ದದ್ದು ಧೋನಿಯೇ. ಮೈದಾನ ಮಧ್ಯೆ ಸಂಭ್ರಮಿಸುತ್ತಿದ್ದ RCB ಆಟಗಾರರಿಗಾಗಿ ಧೋನಿ 3 ನಿಮಿಷ ಅಲ್ಲೇ ನಿಂತು ಕಾದಿದ್ದಾರೆ

MS Dhoni handshake controversy : ಬೆಂಗಳೂರು: ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ #csk ವಿರುದ್ಧ #rcb ಪಂದ್ಯ ಗೆದ್ದ ನಂತರ RCB ಆಟಗಾರರಿಗೆ ಮಹೇಂದ್ರ ಸಿಂಗ್ ಧೋನಿ (MS Dhoni) ಹಸ್ತಲಾಘವ ಮಾಡಲಿಲ್ಲ ಎಂಬ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಧೋನಿಯವರನ್ನು ಕೆಲವರು ನಿಂದಿಸುತ್ತಿದ್ದಾರೆ.Ms dhoni handshake controversy in ipl 2024 rcb vs csk 1 1

ಧೋನಿ ನಿಜಕ್ಕೂ ಅವತ್ತು ತಪ್ಪು ಮಾಡಿದ್ದರಾ? ಗೆದ್ದ ತಂಡಕ್ಕೆ ಹಸ್ತಲಾಘವ ಮಾಡದೇ ಇರುವುದು ಖಂಡಿತಾ ಸಣ್ಣತನ. ಅದರಲ್ಲಿ ಅನುಮಾನವೇ ಬೇಡ. ಆದರೆ ಧೋನಿಯಂಥಾ ದೊಡ್ಡ ಮನುಷ್ಯ ಇಂತಹ ಸಣ್ಣತನ ತೋರಿಸಲು ಸಾಧ್ಯವೇ? ಒಂದು ವೇಳೆ ಅಂಥದ್ದೇನಾದರೂ ಅಲ್ಲಿ ನಡೆದಿದ್ದರೆ, ಅದರ ಹಿಂದೆ ಒಂದು ಕಾರಣವಿದ್ದೇ ಇರುತ್ತದೆ.

ಧೋನಿ ಅವತ್ತು RCB ಆಟಗಾರರ ಕೈ ಕುಲಕಲು ತನ್ನ ಆಟಗಾರರೊಂದಿಗೆ ಸಿದ್ಧವಾಗಿ ಮೈದಾನದೊಳಗೆ 30 yards ಬಳಿ ನಿಂತಿದ್ದರು. CSK ಆಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಂತಿದ್ದದ್ದು ಧೋನಿಯೇ. ಮೈದಾನ ಮಧ್ಯೆ ಸಂಭ್ರಮಿಸುತ್ತಿದ್ದ RCB ಆಟಗಾರರಿಗಾಗಿ ಧೋನಿ 3 ನಿಮಿಷ ಅಲ್ಲೇ ನಿಂತು ಕಾದಿದ್ದಾರೆ. ಆದರೆ RCB ಆಟಗಾರರು ಇತ್ತ ಸುಳಿಯುವ ಸೂಚನೆ ಸಿಗದ್ದನ್ನು ನೋಡಿ ಪೆವಿಲಿಯನ್’ನತ್ತ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

ಹಾಗಾದರೆ ಧೋನಿ ಇನ್ನೊಂದಷ್ಟು ಹೊತ್ತು ಕಾಯಬಹುದಿತ್ತಲ್ಲಾ? ಖಂಡಿತಾ ಕಾಯಬಹುದಿತ್ತು. ಹಾಗೆಯೇ RCB ಆಟಗಾರರೂ ಕೂಡ ಸ್ವಲ್ಪ sensible ಆಗಿ ಯೋಚನೆ ಮಾಡಬಹುದಿತ್ತು. ಕಾರಣ ಅಲ್ಲಿ, ತಮಗಾಗಿ ಕಾಯುತ್ತಾ ನಿಂತಿದ್ದದ್ದು ಈ ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿರುವ ಒಬ್ಬ ದಿಗ್ಗಜ.

Ms dhoni handshake controversy in ipl 2024 rcb vs csk
Image credit to original source

ಗೆದ್ದಾಗ ಸಂಭ್ರಮಿಸಲು, ಅದೂ ಅಂಥಾ ಗೆಲುವಿನ ಬಳಿಕ ಸಂಭ್ರಮ ಪಡಲು ಅಧಿಕಾರವೂ ಇದೆ, ಮತ್ತದು ಸಂಭ್ರಮಿಸಲೇಬೇಕಾದ ಸಮಯ. ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಆದರೆ ಸೋತವರನ್ನು ಗೌರವಿಸಿದ ನಂತರ ಸಂಭ್ರಮಿಸಿದರೆ ಆ ಸಂಭ್ರಮಕ್ಕೊಂದು ಗೌರವ.

ಇದನ್ನೂ ಓದಿ : Abhishek Sharma : ಫ್ರಾಂಚೈಸಿ ಟಿ20 ಲೀಗ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದ ಯುವರಾಜನ ಶಿಷ್ಯ ಅಭಿಷೇಕ್ ಶರ್ಮಾ!

ಮೈದಾನದಲ್ಲಾದ ಆಚಾತುರ್ಯವನ್ನು ಎಲ್ಲರಿಗಿಂತ ಮೊದಲು ಅರ್ಥ ಮಾಡಿಕೊಂಡವನು ನಮ್ಮ ವಿರಾಟ್ ಕೊಹ್ಲಿ. ನೇರವಾಗಿ ಪೆವಿಲಿಯನ್’ಗೆ ಹೋದವನೇ ಅಲ್ಲಿ ಧೋನಿ ಕೈ ಕುಲುಕಿದ್ದಾನೆ. ಕೊಹ್ಲಿಗೆ ಗೊತ್ತು, ಧೋನಿ ಏನು ಅಂತ. ಹಸ್ತಲಾಘವ ಮಾಡಲು ಬಂದ ಕೊಹ್ಲಿಗೆ ಧೋನಿ ಹೇಳಿದ್ದು ಒಂದೇ. ‘’ಫೈನಲ್’ನಲ್ಲೂ ಇದೇ ರೀತಿ ಆಟ ಮುಂದುವರಿಸಿ ನಿನ್ನ ತಂಡಕ್ಕೆ ಕಪ್ ಗೆಲ್ಲಿಸು’’ ಎಂದು.

MS Dhoni handshake controversy in IPL 2024 RCB vs CSK

Comments are closed.