RCB’s Luckyman Swapnil Singh: 14ನೇ ವರ್ಷಕ್ಕೆ ರಣಜಿ, 19ನೇ ವರ್ಷಕ್ಕೆ ಕೊಹ್ಲಿ ರೂಮ್ ಮೇಟ್, 16 ವರ್ಷಗಳ ಹೋರಾಟ.. ಇದು RCB ಲಕ್ಕಿಮ್ಯಾನ್ ಕಥೆ

ಸತತ ಸೋಲುಗಳಿಂದ ಆರ್’ಸಿಬಿ (RCB) ಜರ್ಝರಿತವಾಗಿದ್ದಾಗ ತಂಡಕ್ಕೆ ಅದೃಷ್ಟವನ್ನು ಹೊತ್ತು ತಂದವನು ಎಡಗೈ ಸ್ಪಿನ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ (Swapnil Singh). 9ನೇ ಲೀಗ್ ಪಂದ್ಯದಿಂದ ಆರ್’ಸಿಬಿ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದ ಸ್ವಪ್ನಿಲ್ ಸಿಂಗ್ ತಂಡದ ಹಣೆಬರಹವನ್ನೇ ಬದಲಿಸಿ ಬಿಟ್ಟಿದ್ದಾರೆ.

RCB Lucy Man Swapnil Singh  : ಬೆಂಗಳೂರು: ಐಪಿಎಲ್-2024 (IPL 2024) ಟೂರ್ನಿಯಲ್ಲಿ ಮೊದಲ 8 ಪಂದ್ಯಗಳಲ್ಲಿ ಏಳು ಸೋಲು. ಅದರಲ್ಲಿ 6 ಸತತ ಸೋಲುಗಳು. ನಂತರದ 6 ಪಂದ್ಯಗಳಲ್ಲಿ ಸತತ 5 ಗೆಲುವುಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಪ್ಲೇ ಆಫ್ ಹಂತಕ್ಕೇರಿದ ಕಥೆಯೇ ರೋಚಕ.

Ipl 2024 rcb lucy man swapnil singh rcb vs csk
Image credit to original source

ಸತತ ಸೋಲುಗಳಿಂದ ಆರ್’ಸಿಬಿ (RCB) ಜರ್ಝರಿತವಾಗಿದ್ದಾಗ ತಂಡಕ್ಕೆ ಅದೃಷ್ಟವನ್ನು ಹೊತ್ತು ತಂದವನು ಎಡಗೈ ಸ್ಪಿನ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ (Swapnil Singh). 9ನೇ ಲೀಗ್ ಪಂದ್ಯದಿಂದ ಆರ್’ಸಿಬಿ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದ ಸ್ವಪ್ನಿಲ್ ಸಿಂಗ್ ತಂಡದ ಹಣೆಬರಹವನ್ನೇ ಬದಲಿಸಿ ಬಿಟ್ಟಿದ್ದಾರೆ. ಸ್ವಪ್ನಿಲ್ ಸಿಂಗ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸೋತೇ ಇಲ್ಲ.

ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

34 ವರ್ಷದ ಸ್ವಪ್ನಿಲ್ ಸಿಂಗ್ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ಈತ ತನ್ನ 14ನೇ ವಯಸ್ಸಲ್ಲೇ ಬರೋಡ ಪರ 2004ರಲ್ಲಿ ರಣಜಿ ಟ್ರೋಫಿ ಪಂದ್ಯವಾಡಿದ್ದ ಆಟಗಾರ. 2005ರಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಟ್ರೈನಿಂಗ್ ಕ್ಯಾಂಪ್’ಗೆ ಆಯ್ಕೆಯಾಗಿದ್ದ ಭಾರತ ಅಂಡರ್-15 ತಂಡದಲ್ಲಿ ಸ್ವಪ್ನಿಲ್ ಸಿಂಗ್ ಸ್ಥಾನ ಪಡೆದಿದ್ದ. ಇದೇ ತಂಡದಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದರು ಎಂಬುದು ಮತ್ತೊಂದು ವಿಶೇಷ.

Ipl 2024 rcb lucy man swapnil singh rcb vs csk
Image credit to original source

ವಿರಾಟ್ ಕೊಹ್ಲಿ ಜೊತೆ ಸ್ವಪ್ನಿಲ್ ಸಿಂಗ್ ಭಾರತ ಅಂಡರ್-19 ತಂಡವನ್ನೂ ಪ್ರತಿನಿಧಿಸಿದ್ದಾರೆ. 2007-08ರಲ್ಲಿ ಭಾರತ ಅಂಡರ್-19 ತಂಡ ಮಲೇಷ್ಯಾ ಪ್ರವಾಸ ಕೈಗೊಂಡಾಗ ಸ್ವಪ್ನಿಲ್ ಸಿಂಗ್ ವಿರಾಟ್ ಕೊಹ್ಲಿಯ ರೂಮ್ ಮೇಟ್ ಆಗಿದ್ದರು. ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಸಂದರ್ಶನಲ್ಲಿ ಸ್ವಪ್ನಿಲ್ ಸಿಂಗ್ ಹೇಳಿಕೊಂಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನೆದಪ ಸ್ವಪ್ನಿಲ್ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : CSK ವಿರುದ್ಧ RCB ಗೆಲುವಿಗೆ ಕಾರಣ ಧೋನಿ ಬಾರಿಸಿದ ಆ ಸಿಕ್ಸರ್! ವಿಜಯಮಂತ್ರದ ರಹಸ್ಯ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್

https://x.com/123perthclassic/status/1792400986394501601?s=46

ಬರೋಡ ಕ್ರಿಕೆಟ್ ಸಂಸ್ಥೆಯ ಕೀಳು ರಾಜಕೀಯದಿಂದಾಗಿ ರಣಜಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಸ್ವಪ್ನಿಲ್ ಸಿಂಗ್, ನಂತರ ಉತ್ತರ ಪ್ರದೇಶ ತಂಡ ಸೇರಿಕೊಂಡಿದ್ದರು. 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಸ್ವಪ್ನಿಲ್ 2018ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು. ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದ ಸ್ವಪ್ನಿಲ್ ಸಿಂಗ್ ಅವರನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಮೂಲ ಬೆಲೆ 20 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಆಗ ಸ್ವಪ್ನಿಲ್ ಆರ್’ಸಿಬಿಯ ಲಕ್ಕಿಮ್ಯಾನ್ ಆಗಿ ಮಿಂಚುತ್ತಿದ್ದಾರೆ.

Ipl 2024 RCB Lucy Man Swapnil Singh RCB vs CSK

Comments are closed.