ಕೆಲವೊಮ್ಮೆ ನಮ್ಮ ಸುತ್ತಲು ನಂಬಲು ಅಸಾಧ್ಯವಾದ ಘಟನೆ ನಡೆಯುತ್ತೆ. ಅದನ್ನು ಅಕಸ್ಮಿಕನಾ ?, ಅದ್ಬುತನಾ? ಅಂತ ನಂಬೋಕೆ ಆಗಲ್ಲ. ಅದರಲ್ಲೂ ಸಾವಿನ ವಿಚಾರದಲ್ಲಿ ಇಂತಹ ಘಟನೆ ನಡೆದ್ರೆ ಅಚ್ಚರಿನೂ ಆಗುತ್ತೆ ಆಘಾತನೂ ಆಗುತ್ತೆ. ಅಂತಹದೇ ಒಂದು ಘಟನೆ ತಮಿಳು ನಾಡಿನಲ್ಲಿ ನಡೆದಿದೆ. ಅದು ಏನು ಗೊತ್ತಾ ?. 24 ಗಂಟೆ ಶವ ಇಡೋವಂತಹ ಫ್ರೀಜರ್ ನಲ್ಲಿಟ್ರೂ ವ್ಯಕ್ತಿಯೊಬ್ಬರು ಬದುಕಿ ಉಳಿದ್ದಾರೆ. ಆದ್ರೆ ದುರಂತ ಅಂದ್ರೆ ಅವರನ್ನು ರಕ್ಷಿಸಿ ಆಸ್ಪತ್ರೆ ಸಾಗಿಸಿದ ಎರಡು ದಿನದ ನಂತ್ರ ಅವರು ಸಾವನ್ನಪ್ಪಿದ್ದಾರೆ.

ಇದು ಸತ್ಯ. ಬಾಲ ಸುಬ್ರಹ್ಮಣ್ಯ ಕುಮಾರ್ (74 ವರ್ಷ )ಇವರು ತಮಿಳುನಾಡಿನ ನಿವಾಸಿ. ಇವರು ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಅಲ್ಲಿ ದೊಡ್ಡ ಚೇತರಿಕೆ ಕಾಣದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಮನೆಗೆ ತರಲಾಗಿತ್ತು. ಮನೆಯವರು ಕೂಡಾ ಅವರ ಪ್ರಾಣ ಹೋಗೋಕೆ ಕಾಯುತ್ತಿದ್ರು ಅನ್ನಲಾಗುತ್ತೆ.

ಮತ್ತೊಂದೆಡೆ ಸೋಮವಾರ ಬಾಲ ಸುಬ್ರಹ್ಮಣ್ಯ ಕುಮಾರ್ ಸಾವನ್ನಪ್ಪಿದ್ದಾರೆ ಅಂತ ಹೇಳಿದ ಸಂಬಂಧಿಕರು, ಬಾಲ ಸುಬ್ರಹ್ಮಣ್ಯ ಕುಮಾರ್ ದೇಹವನ್ನು ಇರಿಸೋಕೆ ಶವ ಇಡುವ ಪ್ರೀಜರ್( ಶೀತಲ ಶವ ಪೆಟ್ಟಿಗೆ ) ಪೆಟ್ಟಿಗೆಯೊಂದನ್ನು ಏಜೆನ್ಸಿ ಒಂದರಿಂದ ಕೇಳಿದ್ದಾರೆ. ಏಜೆನ್ಸಿ ಕೂಡಾ ಸೋಮವಾರವೇ ಫ್ರೀಜರ್ ನ್ನು ನೀಡಿದೆ. ಅದರಲ್ಲಿ ಬಾಲ ಸುಬ್ರಹ್ಮಣ್ಯ ಕುಮಾರ್ ದೇಹವನ್ನು ಅದೇ ದಿನ ಇರಿಸಲಾಗಿದೆ.

ಮರುದಿನ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗೋಕೆ ಬಂದ ಏಜೆನ್ಸಿ ಸಿಬ್ಬಂದಿಗೆ ಬಾಲ ಸುಬ್ರಹ್ಮಣ್ಯ ಕುಮಾರ್ ಬದುಕಿರೋದು ಗೊತ್ತಾಗಿದೆ. ಕೂಡಲೇ ಅರೆ ಪ್ರಜ್ಞಾವಸ್ತೆಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಶ್ವಾಸಕೋಶ ತೀರ ಹದಗೆಟ್ಟಿದ್ರಿಂದ ಬಾಲ ಸುಬ್ರಹ್ಮಣ್ಯ ಕುಮಾರ್ ಶುಕ್ರವಾರ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಬಾಲ ಸುಬ್ರಹ್ಮಣ್ಯ ಕುಮಾರ್ ಸಹೋದರವನ್ನು ಕೇಳಿದ್ರೆ ಹಾರಿಕೆ ಉತ್ತರ ನೀಡಿದ್ದಾರೆ. ಸಾವನ್ನಪ್ಪಿದ್ರೂ ಅಣ್ಣನ ಆತ್ಮ ದೇಹವನ್ನು ಬಿಟ್ಟಿರಲಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಅವರು ಸಾವನ್ನಪ್ಪಿರೋದ್ರ ಬಗ್ಗೆ ಆಸ್ಪತ್ರೆ ಕೂಡಾ ಸರ್ಟಿಫಿಕೇಟ್ ನೀಡಿದೆ ಅಂದಿದ್ದಾರೆ. ಇವರ ಮಾತಿನಲ್ಲಿ ಅನುಮಾನ ಗೊಂಡಿರೋ ಪೋಲೀಸರು ಬಾಲ ಸುಬ್ರಹ್ಮಣ್ಯ ಕುಮಾರ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ಆಸ್ಪತ್ರೆ ಕುರಿತಂತೆಯೂ ವಿಚಾರಣೆ ನಡೆಸುತ್ತಿದ್ದಾರೆ.

ಅದೇನೇ ಇರಲಿ ಬದುಕಿ ಉಳಿಯದೇ ಇರುವ ವಾತಾವರಣದಲ್ಲಿ 24 ಗಂಟೆ ಬದುಕಿ ಉಳಿದ ಈ ವೃದ್ಧನ ಬಗ್ಗೆ ನಿಜಕ್ಕೂ ಅಚ್ಚರಿ ಆಗದೇ ಇರದು