Man Has Fathered 47 Kids : ಜೀವನದುದ್ದಕ್ಕೂ ಸುಖ – ದುಃಖಗಳನ್ನು ಹಂಚಿಕೊಳ್ಳೋಕೆ ಒಬ್ಬ ಸಂಗಾತಿ ಇರಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿಗೂ ತನ್ನ ಜೊತೆ ಡೇಟಿಂಗ್ ಮಾಡಲು ಯಾವೊಬ್ಬ ಯುವತಿಯೂ ಸಿಗುತ್ತಿಲ್ಲ ಎಂಬು ಕೊರಗು ಕಾಡುತ್ತಿದೆ. ಅಂದಹಾಗೆ ಈತ 47 ಮಕ್ಕಳ ತಂದೆ..! ಇದೂ ಸಾಲದು ಎಂಬಂತೆ ಇನ್ನೂ 10 ಮಕ್ಕಳನ್ನು ಸ್ವಾಗತಿಸಲು ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಅರೆ..! ಇಷ್ಟೆಲ್ಲ ಮಕ್ಕಳ ತಂದೆಗೆ ಸಂಗಾತಿಯ ಚಿಂತೆ ಏಕೆ..ಎಂದುಕೊಂಡ್ರಾ..? ಅಸಲಿ ವಿಚಾರ ಇರೋದೇ ಇಲ್ಲಿ.
ಅಂದಹಾಗೆ ಅಮೆರಿಕದ ಕ್ಯಾಲಿಫೋರ್ನಿಯಾದ ನಿವಾಸಿಯಾದ 30 ವರ್ಷದ ಕೈಲ್ ಕಾರ್ಡಿ ಎಂಬವರು ವೀರ್ಯಾಣುಗಳನ್ನು ದಾನ ಮಾಡುತ್ತಾರೆ. ಹೀಗಾಗಿಯೇ ಇವರಿಗೆ ಪ್ರಪಂಚದಾದ್ಯಂತ ಮಕ್ಕಳಿದ್ದಾರೆ. ಆದರೆ ಇಲ್ಲಿಯವರೆಗೂ ಕೈಲ್ಗೆ ಸೂಕ್ತ ಜೀವನ ಸಂಗಾತಿ ಸಿಕ್ಕಿಲ್ಲವಂತೆ..! ಯಾವುದೇ ಮಹಿಳೆಯರು ಈತನನ್ನು ಸಂಪರ್ಕಿಸಿದರೂ ಈತನ ವೀರ್ಯಾಣುವನ್ನು ಕೇಳುತ್ತಾರೆಯೇ ಹೊರತು ಜೀವನ ಸಂಗಾತಿಯಾಗಿ ಯಾವ ಯುವತಿಯರೂ ಈತನನ್ನು ಒಪ್ಪುತ್ತಿಲ್ಲವಂತೆ.
ತನ್ನ 22 ವರ್ಷ ಪ್ರಾಯದಿಂದ ಕೈಲ್ ಕಾರ್ಡಿ ವೀರ್ಯಾಣು ದಾನವನ್ನು ಮಾಡುತ್ತಿದ್ದಾರೆ, ಕಳೆದ 8 ವರ್ಷಗಳಲ್ಲಿ ಕೈಲ್ ಕಾರ್ಡಿ ಪ್ರಪಂಚದಾದ್ಯಂತ ಸಾಕಷ್ಟು ಮಂದಿ ಮಹಿಳೆಯರಿಗೆ ತಮ್ಮ ವೀರ್ಯವನ್ನು ದಾನ ಮಾಡಿದ್ದಾರೆ. ಹೀಗಾಗಿ ಈಗ ಮಹಿಳೆಯರು ಕೇವಲ ವೀರ್ಯಾಣುಗಾಗಿ ಮಾತ್ರ ಕೈಲ್ ಕಾರ್ಡಿಯನ್ನು ಭೇಟಿಯಾಗುತ್ತಿದ್ದಾರಂತೆ.
ಈ ವಿಚಾರವಾಗಿ ಮಾತನಾಡಿರುವ ಕೈಲ್ ಕಾರ್ಡಿ, ನನಗೆ ಇದರಿಂದ ಜೀವನ ಸಂಗಾತಿ ಇಲ್ಲಿಯವರೆಗೆ ಸಿಗದೇ ಇದ್ದಿರಬಹುದು. ಆದರೆ ಎಷ್ಟೋ ಮಂದಿ ಮಹಿಳೆಯರ ಸಂತಸಕ್ಕೆ ನಾನು ಕಾರಣನಾಗಿದ್ದೇನೆ ಎಂಬ ಖುಷಿ ನನಗಿದೆ. ಅನೇಕರು ಯಶಸ್ವಿ ಗರ್ಭದಾರಣೆ ಬಳಿಕ ನನಗೆ ಇನ್ಸ್ಟಾಗ್ರಾಂನಲ್ಲಿ ಸಂದೇಶವನ್ನು ಕಳುಹಿಸಿ ಸಂತಸವನ್ನು ಹಂಚಿಕೊಳ್ಳುತ್ತಾರೆ.ಇದು ನನಗೆ ಖುಷಿ ಕೊಟ್ಟಿದೆ ಎಂದು ಹೇಳಿದರು.
ಇದನ್ನು ಓದಿ : Shawarma death : ಕಾಸರಗೋಡಲ್ಲಿ ಶವರ್ಮ ತಿಂದು ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ
ಇದನ್ನೂ ಓದಿ : ಕುಂದಾಪುರ : ಪ್ರಥಮ ಪಿಯುಸಿ ಫಲಿತಾಂಶಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
This 30-Year-Old US Man Has Fathered 47 Kids, To Welcome 10 More Soon