Amazon Summer Sale 2022 : ಮೊಬೈಲ್‌ ಖರೀದಿಸುವವರಿಗೆ ಸುವರ್ಣಾವಕಾಶ! ಮೇ 4 ರಿಂದ ಶುರವಾಗಲಿದೆ ಅಮೆಜಾನ್‌ ಸಮ್ಮರ್‌ ಸೇಲ್‌!

ಅಮೆಜಾನ್‌ ಸಮ್ಮರ್‌ ಸೇಲ್‌ 2022 (Amazon Summer Sale 2022) ಇದೆ ಮೇ 4 ರಿಂದ ಪ್ರಾರಂಭವಾಗಲಿದೆ. ಅನ್ಯುವಲ್‌ ಫೆಸ್ಟಿವಲ್‌ ಹಲವಾರು ಸ್ಮಾರ್ಟ್‌ಫೋನ್‌ ಮತ್ತು ಎಲೆಕ್ಟ್ರಾನಿಕ್‌ ಪಾರ್ಟ್‌ಗಳ ಮೇಲೆ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದೆ. ಇ–ಕಾಮರ್ಸ್‌ ವೇದಿಕೆಯು ಗ್ರಾಹಕರಿಗೆ ಸೇಲ್‌ ನಲ್ಲಿ ಸ್ಮಾರ್ಟ್‌ಫೋನ್‌, TV ಮತ್ತು ಗೇಮಿಂಗ್‌ ಬಿಡಿಭಾಗಗಳಿಗೆ ಕೊಡುಗೆಗಳನ್ನು ನೀಡುತ್ತಿದೆ ಎಂದು ಸ್ಪಷ್ಟಪಡಿಸಿದೆ. ಈ ಸೇಲ್‌ನಲ್ಲಿ ಅಮೆಜಾನ್‌ ನ ಪ್ರಕಾರ ಐಫೋನ್‌ 13 ಭಾರಿ ಡಿಸ್ಕೌಂಟ್‌ನೊಂದಿಗೆ 66,900 ರೂಗಳಿಗೆ ಕೊಳ್ಳಬಹುದಾಗಿದೆ ಎಂದು ಹೇಳಿದೆ. ಮುಂಬರುವ ಸೇಲ್‌ನ ಭಾಗವಾಗಿ ಖರೀದಿದಾರರಿಗೆ ಹಲವಾರು ಬ್ರಾಂಡ್‌ಗಳಾದ ಆಪಲ್‌, ಐಕ್ಯೂ, ಐಟೆಲ್‌, ಒನ್‌ಪ್ಲಸ್‌, ಒಪ್ಪೋ, ರಿಯಲ್‌ಮೀ, ರೆಡ್‌ಮೀ, ಸ್ಯಾಮಸಂಗ್‌, ಟೆಕ್ನೊ, ವಿವೋ ಮತ್ತು ಶಿಯೋಮಿ ಗಳ ಮೇಲೆ ಡಿಸ್ಕೌಂಟ್‌ ಸಿಗಲಿದೆ.

ಅಮೆಜಾನ್‌ನ ವೆಬ್‌ಸೈಟ್‌ ಪ್ರಕಾರ, ಮುಂಬರುವ ಅಮೆಜಾನ್‌ ಸಮ್ಮರ್‌ ಸೇಲ್‌ 20222 OnePlus ನಿಂದ ನಡೆಸಲ್ಪಡುತ್ತಿದೆ. ಗ್ರಾಹಕರು ಹೊಸದಾಗಿ ಲಾಂಚ್‌ ಆದ ಒನ್‌ಪ್ಲಸ್‌ ನೊರ್ಡ್‌ ಸಿಇ 2 ಲೈಟ್‌ 5ಜಿ, ಒನ್‌ಪ್ಲಸ್‌ 10ಆರ್‌ 5ಜಿ, ಮತ್ತು ಒನ್‌ಪ್ಲಸ್‌ 10 ಪ್ರೊ ಗಳನ್ನೂ ಸಹ ಖರೀದಿಸಬಹುದಾಗಿದೆ. ಇವುಗಳನ್ನು ಬಿಟ್ಟು ಇತರೆ ಸ್ಮಾರ್ಟ್‌ಫೋನ್‌ ಗಳಾದ ಸ್ಯಾಮಸಂಗ್‌ ಗ್ಯಾಲಕ್ಸಿ ಎಮ್‌33 5ಜಿ, ಸ್ಯಾಮಸಂಗ್‌ ಗ್ಯಾಲಕ್ಸಿ ಎಮ್‌53 5ಜಿ, ರಿಯಲ್‌ ಮೀ ನಾರ್ಜೋ 50ಎ ಪ್ರೈಮ್‌, ಐಕ್ಯೂ ಝೆಡ್‌6, ಕ್ಸಿಯೋಮಿ 12 ಪ್ರೋ ಗಳೂ ಸಹ ಸೇಲ್‌ನಲ್ಲಿ ಖರೀದಿಗೆ ಸಿಗಲಿದೆ. ವೆಬ್‌ಸೈಟ್‌ ಮೇ 3 ರವರೆಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳೊಂದಿಗೆ ‘ಕೌಂಟ್‌ಡೌನ್‌ ಡೀಲ್‌ಗಳನ್ನು’ ಸಹ ನೀಡುತ್ತಿದೆ.

ಮೇ 4 ರಿಂದ ಪ್ರಾರಂಭವಾಗಲಿರುವ ಅಮೆಜಾನ್‌ ಸಮ್ಮರ್‌ ಸೇಲ್‌ 2022 ನಲ್ಲಿ ಪಡೆಯಬಹುದಾದ ಕೆಲವು ಉತ್ತಮ ಡೀಲ್‌ಗಳ ಸ್ಮಾರ್ಟ್‌ಫೋನ್‌ಗಳು

ಆಪಲ್‌ ಐಫೋನ್‌ 13
ಆಪಲ್‌ ಐಫೋನ್‌ 13 ಹ್ಯಾಂಡ್‌ಸೆಟ್‌ 66,900 ರೂಪಾಯಿಗಳಿಗೆ ಮುಂಬರುವ ಅಮೆಜಾನ್‌ ಸಮ್ಮರ್‌ ಸೇಲ್‌ 2022 ರಲ್ಲಿ ಮಾರಾಟವಾಗಲಿದೆ. ಇದರ ಲಿಸ್ಟಿಂಗ್‌ ಬೆಲೆಯು 79,990 ರೂಪಾಯಿಗಳಾಗಿದೆ.

ಒನ್‌ಪ್ಲಸ್‌ 9ಆರ್‌ಟಿ 5ಜಿ
ಭಾರತದಲ್ಲಿ ಜನವರಿಯಲ್ಲಿ ಲಾಂಚ್‌ ಆದ ಒನ್‌ಪ್ಲಸ್‌ 9ಆರ್‌ಟಿ ಯ ಸದ್ಯದ ಬೆಲೆಯು 42,999 ರೂಪಾಯಿಗಳಿದ್ದು, ಮುಂಬರುವ ಅಮೆಜಾನ್‌ ಸಮ್ಮರ್‌ ಸೇಲ್‌ 2022 ನಲ್ಲಿ ರಿಯಾಯಿತಿಯೊಂದಿಗೆ 37,999ರೂಪಾಯಿಗಳಿಗೆ ಖರೀದಿಸಬಹುದಾಗಿದೆ.

ಸ್ಯಾಮಸಂಗ್‌ ಗ್ಯಾಲಕ್ಸಿ ಎಮ್‌33 5ಜಿ
ಸ್ಯಾಮಸಂಗ್‌ ಇತ್ತೀಚೆಗೆ ಸ್ಯಾಮಸಂಗ್‌ ಗ್ಯಾಲಕ್ಸಿ ಎಮ್‌33 5ಜಿ ಅನ್ನು ಲಾಂಚ್‌ ಮಾಡಿತ್ತು. ಸದ್ಯ ಅದರ ಬೆಲೆಯು 17,999 ರೂಪಾಯಿಗಳಿದ್ದು, ಅದು ಅಮೆಜಾನ್‌ ಸಮ್ಮರ್‌ ಸೇಲ್‌ನಲ್ಲಿ 14,999 ರೂಪಾಯಿಗಳಿಗೆ ಸಿಗಲಿದೆ. ಮತ್ತು ಇದಕ್ಕೆ ಇ–ಕಾಮರ್ಸ್‌ ಪ್ರಕಾರ ಬ್ಯಾಂಕ್‌ ಕೊಡುಗೆಗಳನ್ನೂ ಒಳಗೊಂಡಿದೆ.

ಶಿಯೋಮಿ 11 ಲೈಟ್‌ ಎನ್‌ಇ 5ಜಿ
ಸದ್ಯ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ನ ಬೆಲೆಯು 24,999 ರೂಪಾಯಿಗಳಿದ್ದು, ಅಮೆಜಾನ್‌ ಸಮ್ಮರ್‌ ಸೇಲ್‌ ನಲ್ಲಿ ಇದನ್ನು 18,999 ರೂಪಾಯಿಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ.

ಇದನ್ನೂ ಓದಿ : Google Warns for inappropriate content viewers: ವೆಬ್‌ ಬ್ರೌಸರ್ ನಲ್ಲಿ, ನಿಮ್ಮ ಮೊಬೈಲಲ್ಲಿ ಗೂಗಲ್ ಈ ವಾರ್ನಿಂಗ್ ತೋರಿಸಿದ್ರೆ ಅವಾಯ್ಡ್ ಮಾಡ್ಬೇಡಿ!!! ಹುಷಾರ್….

ಇದನ್ನೂ ಓದಿ :WhatsApp new feature : ವಾಟ್ಸಾಪ್‌ ಖಾತೆಯನ್ನು ಎರಡು ಮೊಬೈಲ್‌ಗಳಲ್ಲಿ ಬಳಕೆ ಮಾಡುವುದು ಹೇಗೆ ?

(Amazon Summer Sale 2022 deals offer smartphones)

Comments are closed.