Baahubali Thali :ನೀವು ಆಹಾರ ಪ್ರಿಯರಾಗಿದ್ದರೆ ಖಂಡಿತವಾಗಿಯೂ ಈ ಸ್ಟೋರಿ ನಿಮಗೆ ಹೇಳಿ ಮಾಡಿಸಿದಂತಿದೆ. ನಿಮಗಾಗಿ ಒಂದು ತಮಾಷೆಯ ಸವಾಲನ್ನು ಇಲ್ಲಿ ನೀಡಲಾಗಿದೆ. ನೀವು ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಆಹಾರ ತಿನ್ನುವ ಅಭ್ಯಾಸ ಉಳ್ಳವರಾಗಿದ್ದರೆ ನಿಮಗೆ ಹಣ ಗಳಿಕೆ ಮಾಡಲು ಅವಕಾಶವೊಂದಿದೆ. ದೆಹಲಿಯ ಆರ್ಡೋರ್ 2.1 ರೆಸ್ಟಾರೆಂಟ್ ನಿಮಗಾಗಿ ಒಂದು ಚಾಲೆಂಜ್ನ್ನು ಇಟ್ಟಿದೆ. ಅದೆನೆ.ದರೆ ನೀವು ಒಂದು ದೊಡ್ಡ ಬಾಹುಬಲಿ ಥಾಲಿಯನ್ನು ಕೇವಲ 40 ನಿಮಿಷಗಳಲ್ಲಿ ಸಂಪೂರ್ಣವಾಗಿ ತಿಂದು ಮುಗಿಸಿದರೆ ನಿಮಗೆ 8 ಲಕ್ಷ ರೂಪಾಯಿ ಬಹುಮಾನದ ರೂಪದಲ್ಲಿ ಸಿಗಲಿದೆ.
ಅಂದಹಾಗೆ ಈ ಸವಾಲನ್ನು ಗೆಲ್ಲುವುದು ನೀವು ಅಂದುಕೊಂಡಷ್ಟು ಸುಲಭವಂತೂ ಅಲ್ಲವೇ ಅಲ್ಲ. ಏಕೆಂದರೆ ಈ ಥಾಲಿಯಲ್ಲಿ ನಿಮಗೆ ಬರೋಬ್ಬರಿ 30 ಭಕ್ಷ್ಯಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಆಹಾರಗಳನ್ನೂ ನೀವು ಕೇವಲ 40 ನಿಮಿಷದಲ್ಲಿ ತಿಂದು ತೇಗಿದರೆ ಮಾತ್ರ ಬಹುಮಾನದ ಮೊತ್ತ ನಿಮ್ಮದಾಗಲಿದೆ.
ಕೆಲ ದಿನಗಳ ಹಿಂದಷ್ಟೇ ಫುಡ್ ಬ್ಲಾಗರ್ ರಜನೀಶ್ ಜ್ಞಾನಿಯನ್ ಈ ಚಾಲೆಂಜ್ನ್ನು ಸ್ವೀಕರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಕೂಡ ಆಗಿತ್ತು. ಈ ವಿಡಿಯೋದಲ್ಲಿ ರಜನೀಶ್ ಹಾಗೂ ಅವರ ಸ್ನೇಹಿತ ಆಹಾರ ಸೇವಿಸುತ್ತಿದ್ದ ಪರಿಯೇ ನಗು ತರಿಸುವಂತಿತ್ತು. ಇನ್ನೊಂದು ಆಶ್ಚರ್ಯಕರ ವಿಚಾರ ಅಂದರೆ ಇವರು ನಿಗದಿತ ಸಮಯದಲ್ಲಿ ಸಂಪೂರ್ಣ ಥಾಲಿಯನ್ನು ತಿಂದು ತೇಗಿದ್ದರು..!
ಈ ದೊಡ್ಡ ಥಾಲಿಯಲ್ಲಿ ನಿಮಗೆ ಉತ್ತರ ಭಾರತದ ಶೈಲಿಯ ಆಹಾರವನ್ನು ಬಡಿಸಲಾಗುತ್ತದೆ. ಪಾಪ್ಡಿ ಚಾಟ್, ಗೋಬಿ ಮಟರ್, ದಾಲ್ ತಡ್ಕಾ, ಕಡಿ ಪಕೋರಾ, ಆಲೂ ಪಾಲಕ್. ಮಲಾಯ್ ಕೋಫ್ತಾ, ಸೋಯಾ ಚಾಪ್ ಮಸಾಲಾ , ಕಡಾಯಿ ಪನ್ನೀರ್, ದಾಲ್ ಮಖಾನಿ, ದಮ್ ಆಲೂ, ಸಾಗ್, ಪನೀರ್ ಟಿಕ್ಕಾ ಮಸಾಲಾ, ವೆಜ್ ಬಿರಿಯಾನಿ, ಅನ್ನ ಸೇರಿದಂತೆ ವಿವಿಧ ಖಾದ್ಯಗಳನ್ನು ನೀಡಲಾಗುತ್ತದೆ.
Viral Video: You Can Win Rs 8 Lakh If You Finish This 8 Kg ‘Baahubali’ Thali in 40 Minutes | Watch
ಇದನ್ನು ಓದಿ : Dolo 650 : ಹುಬ್ಬೇರಿಸುತ್ತೆ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಮಾರಾಟವಾದ ಡೋಲೋ 650 ಮಾತ್ರೆಗಳ ಸಂಖ್ಯೆ
ಇದನ್ನೂ ಓದಿ : Samantha comeback Bollywood : ಮತ್ತೆ ಸದ್ದು ಮಾಡಿದ ಸಮಂತಾ : ಬಾಲಿವುಡ್ ನಿಂದ ಬಂತು ಮೂರು ಸಿನಿಮಾ ಆಫರ್