sandwich sneakers : ಇಂಟರ್ನೆಟ್ನಲ್ಲಿ ಒಂದಾಂದರೊಂದು ಆಶ್ಚರ್ಯಕರ ವಿಚಾರವು ಇದ್ದೇ ಇರುತ್ತದೆ. ಅಲ್ಲದೇ ವಿಚಿತ್ರ ವಿಚಾರಗಳು ಇಂಟರ್ನೆಟ್ನಲ್ಲಿ ಬಹುಬೇಗನೇ ವೈರಲ್ ಆಗಿ ಬಿಡುತ್ತದೆ. ಅಂದಹಾಗೆ ಈ ಎಲ್ಲದರ ಬಗ್ಗೆ ಈಗ್ಯಾಕೆ ಮಾತನಾಡುತ್ತಿದ್ದಾರೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಕಾರಣವಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಸ್ಯಾಂಡ್ವಿಚ್ ಶೂನದ್ದೇ ಚರ್ಚೆ..! ಅರ್ರೆ ಇದೇನಿದು ಸ್ಯಾಂಡ್ವಿಚ್ ಶೂ ಅಂದರಾ ಈ ಬಗ್ಗೆ ವಿವರಣೆ ಇಲ್ಲಿದೆ ನೋಡಿ.
ಮೇಲೆ ಕಾಣಿಸುತ್ತಿರುವ ಫೋಟೋದಲ್ಲಿ ಯುವತಿಯು ಸ್ಯಾಂಡ್ವಿಚ್ನಂತೆಯೇ ಕಾಣಿಸುತ್ತಿರುವ ಶೂ ಧರಿಸಿರುವುದನ್ನು ನೀವು ನೋಡಿರುತ್ತೀರಿ. ಈ ಶೂ ನೋಡೋಕೆ ಥೇಟ್ 3 ಡಿ ಸ್ಯಾಂಡ್ವಿಚ್ನಂತೆಯೇ ಇದೆ. ಅಂದರೆ ಬ್ರೆಡ್, ಸಲಾಮಿ, ಈರುಳ್ಳಿ ಹೀಗೆ ಎಲ್ಲವನ್ನು ಬಳಸಿ ಈ ಶೂ ತಯಾರಿಸಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ಅಂದಹಾಗೆ ಈ ಶೂ ಡಾಲ್ಸ್ ಕಿಲ್ಸ್ ವೆಬ್ಸೈಟ್ನಲ್ಲಿ ಲಭ್ಯವಿದೆ.
ನೀವಿದನ್ನು ಎಲ್ಲಿಗೆ ಧರಿಸುತ್ತೀರಿ..? ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ಈ ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 46 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಶೂಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದಕ್ಕೆ ಓರ್ವ ನೆಟ್ಟಿಗ ಇದು ನನಗೆ ಬೇಡ ಎಂದು ಹೇಳಿದ್ದರೆ, ಮತ್ತೊಬ್ಬರು ನಾನು ಈ ಶೂ ಧರಿಸುತ್ತೇನೆ. ನಾನು ವಿಭಿನ್ನವಾಗಿದ್ದೇನೆ. ಅಲ್ಲದೇ ನಿಮಗೆ ಇರೋದು ಒಂದೇ ಜೀವನ ಎಂದು ಬರೆದುಕೊಂಡಿದ್ದಾರೆ .
ಅಂದಹಾಗೆ ಈ ಸ್ಯಾಂಡ್ವಿಚ್ ಶೂನ ಬೆಲೆ ಮಾತ್ರ ನಿಮಗೆ ತಲೆ ತಿರುಗಿಸಬಹುದು. ಡಾಲ್ಸ್ ಕಿಲ್ಸ್ ವೆಬ್ಸೈಟ್ನಲ್ಲಿ ಲಭ್ಯವಿರುವ ಈ ವಿಚಿತ್ರ ಶೂ 98 ಡಾಲರ್ಗೆ ಅಂದರೆ ಸರಿ ಸುಮಾರು 7322 ರೂಪಾಯಿಗಳಿಗೆ ಲಭ್ಯವಿದೆ..! ಅಂದಹಾಗೆ ಈ ಶೂಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು..?
Will you buy this Rs 7k pair of sandwich sneakers? Internet is divided
ಇದನ್ನು ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?
ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ದಂಡ