Woman marries pink colour : ಮೊದಲೆಲ್ಲ ಮದುವೆ ಅಂದರೆ ಅದು ಗಂಡು ಹಾಗೂ ಹೆಣ್ಣಿನ ನಡುವೆ ಇರುವ ಸಂಬಂಧ ಅಂತಾ ಹೇಳಬಹುದಿತ್ತು. ಆದರೆ ಕಾಲ ಸರಿದಂತೆ ಈ ಸಂಬಂಧ ಇದೀಗ ಕೇವಲ ಗಂಡು ಹೆಣ್ಣಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಈಗ ಗಂಡು – ಗಂಡಿನ ನಡುವೆಯೂ ವಿವಾಹವಾಗುತ್ತದೆ. ಅದರಂತೆ ಇಬ್ಬರು ಮಹಿಳೆಯರೂ ಮದುವೆಯಾಗುತ್ತಾರೆ. ಇನ್ನೊಂದು ಕಡೆ ಗೊಂಬೆಯ ಜೊತೆ ವಿವಾಹವಾಗುವವರೂ ಇದ್ದರೆ ಕೆಲವರು ತಮ್ಮೊಂದಿಗೆ ತಾವೇ ವಿವಾಹವಾಗುತ್ತಾರೆ. ಈ ರೀತಿಯ ವಿಚಿತ್ರ ಮದುವೆಯ ಸಾಲಿಗೆ ಇನ್ನೊಂದು ಮದುವೆ ಸೇರ್ಪಡೆಯಾಗಿದೆ. ಅದೇನಂದರೆ ಮಹಿಳೆಯೊಬ್ಬರು ತಮ್ಮಿಷ್ಟದ ಬಣ್ಣದ ಜೊತೆಯೇ ವಿವಾಹವಾಗಿದ್ದಾರೆ..!
ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಬಣ್ಣವಿರುತ್ತದೆ. ಬಣ್ಣ ಇಷ್ಟ ಅಂದಮೇಲೆ ಅದಕ್ಕಾಗಿ ನೀವು ಏನೇನು ಮಾಡಲು ಸಾಧ್ಯ.? ಅದೇ ಬಣ್ಣದ ಡ್ರೆಸ್, ಚಪ್ಪಲಿ, ಅಲಂಕಾರಿಕ ಸಾಮಗ್ರಿಗಳನ್ನು ಖರೀದಿ ಮಾಡಬಹುದು. ಆದರೆ ಲೆಸ್ ವೇಗಾಸ್ನ ಮಹಿಳೆಯೊಬ್ಬರು ಹೊಸ ವರ್ಷದಂದು ತನ್ನಿಷ್ಟದ ಬಣ್ಣದ ಜೊತೆಯೇ ವಿವಾಹವಾಗುವ ಮೂಲಕ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ..! ಜನವರಿ 1 ರಂದು ಕಿಟನ್ ಕೇ ಸೇರಾ ಎಂಬವರು ತಮ್ಮ ಇಷ್ಟದ ಬಣ್ಣದ ಜೊತೆಯಲ್ಲಿ ವೈವಾಹಿಕ ಸಂಬಂಧಕ್ಕೆ ಕಾಲಿರಿಸಿದ್ದಾರೆ.
40 ವರ್ಷಗಳ ರಿಲೇಷನ್ಶಿಪ್ ಬಳಿಕ ಮಹಿಳೆಯು ತನ್ನಿಷ್ಟದ ಬಣ್ಣದ ಜೊತೆಯಲ್ಲಿ ವಿವಾಹವಾಗುವ ನಿರ್ಧಾರ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಮಗುವೊಂದು ಗೇಲಿ ಮಾಡಿದ ಬಳಿಕ ಕಿಟನ್ ಕೇ ಸೇರಾ ಈ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಕಿಟನ್ ಕೆ ಸೆರಾ,, ಪುಟ್ಟ ಮಗುವೊಂದು ನನ್ನ ಬಳಿ ಬಂದು ನಿನಗೆ ಗುಲಾಬಿ ಬಣ್ಣ ಅಂದರೆ ಇಷ್ಟ ಅಲ್ಲವೇ..? ಎಂದು ಕೇಳಿತು. ಇದಕ್ಕೆ ನಾನು ಹೌದು ನಾನು ಗುಲಾಬಿ ಬಣ್ಣವನ್ನು ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ ಮಗುವು ನೀನು ಗುಲಾಬಿ ಬಣ್ಣವನ್ನೇ ಪ್ರೀತಿಸುವುದಾದರೆ ಅದನ್ನೇ ಏಕೆ ವಿವಾಹವಾಗಬಾರದು ಎಂದು ಕೇಳಿತು. ಇದಾದ ಬಳಿಕ ನನಗೆ ಬಣ್ಣದ ಜೊತೆ ಮದುವೆಯಾಗುವ ಯೋಚನೆ ಮೊಳಕೆಯೊಡೆಯಿತು ಎಂದು ಹೇಳಿದರು.
ಮದುವೆಯ ದಿನದಂದು ಸೇರಾ ಸಂಪೂರ್ಣ ಗುಲಾಬಿ ಬಣ್ಣದಲ್ಲಿಯೇ ಕಂಗೊಳಿಸುತ್ತಿದ್ದರು. ಗುಲಾಬಿ ಬಣ್ಣದ ಡ್ರೆಸ್, ಲಿಪ್ಸ್ಟಿಕ್, ಆಭರಣ ಹೀಗೆ ಎಲ್ಲವೂ ಗುಲಾಬಿ ಬಣ್ಣದಲ್ಲೇ ಇತ್ತು. ಗುಲಾಬಿ ಬಣ್ಣದ ವಿವಿಧ ಶೇಡ್ಗಳ ಜೊತೆಯಲ್ಲಿ ವಿವಾಹವಾಗಿರುವ ಸೇರಾ ಇನ್ಮುಂದೆ ಕೇವಲ ಗುಲಾಬಿ ಬಣ್ಣದ ಧಿರಿಸುಗಳನ್ನೇ ಧರಿಸಲಿದ್ದಾರಂತೆ..!
Woman marries pink colour in Las Vegas, vows to never wear another shade – See Pictures
ಇದನ್ನು ಓದಿ : Worker vandalises company: ಸಂಬಳ ಕೊಡದ ಕಂಪನಿ ಉಪಕರಣ ಧ್ವಂಸ ಮಾಡಿದ ನೌಕರ
ಇದನ್ನೂ ಓದಿ : cop steal Goats : ಭರ್ಜರಿ ಬಾಡೂಟಕ್ಕೆ ಎರಡು ಮೇಕೆಕದ್ದು ಸಿಕ್ಕಿಬಿದ್ದ ಎಎಸ್‌ಐ ಸಸ್ಪೆಂಡ್