ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ

5,8,9 Board Exams :  ಹಲವು ಹಂತದ ಹೋರಾಟದ ಬಳಿಕ ರಾಜ್ಯ ಸರ್ಕಾರಕ್ಕೆ 5,8,9  ಬೋರ್ಡ್‌ ಪರೀಕ್ಷೆ ಮೌಲ್ಯಾಂಕನ ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ಜಯವಾಗಿದೆ

5,8,9 Board Exams :  ಹಲವು ಹಂತದ ಹೋರಾಟದ ಬಳಿಕ ರಾಜ್ಯ ಸರ್ಕಾರಕ್ಕೆ 5,8,9  ಬೋರ್ಡ್‌ ಪರೀಕ್ಷೆ ಮೌಲ್ಯಾಂಕನ ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ಜಯವಾಗಿದೆ.‌ ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಎದೆಯಲ್ಲಿ ನಡುಕ‌ ಮೂಡಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳಿಗೆ ಆತಂಕ‌ ಎದುರಾಗಿದೆ.

ರಾಜ್ಯದಲ್ಲಿ ಒಟ್ಟು 17,109 ಖಾಸಗಿ ಶಾಲೆಗಳಿವೆ. ಈ ಪೈಕಿ 95 ಶಾಲೆಗಳ ಒಕ್ಕೂಟ ಮಾತ್ರ ಮೌಲ್ಯಾಂಕನ ಪರೀಕ್ಷೆ ವಿರೋಧಿಸಿ ಹಾಗೂ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿತ್ತು. ಇದಕ್ಕೆ ಕಾರಣ, ಆ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿದ್ದವು. ಇಂಥಹ ಶಾಲೆಗಳು ಸರ್ಕಾರದ ಆದೇಶದಂತೆ ರಾಜ್ಯ ಪಠ್ಯಕ್ರಮದ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗದೇ ವಿರೋಧಿಸಲಾರಂಭಿಸಿದ್ದವು.

5,8,9 Board Exams Permission state curriculum, teaching central curriculum Examination glitch exposes illegality of private educational institutions
Image Credit to Original Source

ಶಾಲಾಹಂತದಲ್ಲೇ ಪರೀಕ್ಷೆ ಮಾಡಿ ಕೇಂದ್ರ ಪಠ್ಯಕ್ರಮದ ಶಾಲೆಗಳೆಂದೇ ಬಿಂಬಿಸಿಕೊಳ್ಳಲು ಶಾಲೆಗಳು ಸಿದ್ಧತೆ ನಡೆಸಿದ್ದವು. ಇದರಿಂದ ಪೋಷಕರಿಂದ ಅಪಾರ ಪ್ರಮಾಣದ ಶುಲ್ಕ ಹಾಗೂ ಡೊನೇಶನ್ ವಸೂಲಿ ಮಾಡಬಹುದು ಎಂಬುದು ಪ್ಲ್ಯಾನ್ ಆಗಿತ್ತು. ಆದರೆ ಅಂತಿಮವಾಗಿ ಮಂಡಳಿಯ ರಾಜ್ಯ ಪಠ್ಯಕ್ರಮ ಮಾನ್ಯತೆ ಪಡೆದಿರುವ ಎಲ್ಲ ಶಾಲೆಗಳು ಮಂಡಳಿ ನೀಡುವ ಪ್ರಶ್ನೆ ಪತ್ರಿಕೆ ಪ್ರಕಾರವೇ ಪಾಠ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿತ್ತು.

ಈ ಅದೇಶದಿಂದ ಕಂಗೆಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಬೋರ್ಡ್ ಪರೀಕ್ಷೆಗೆ ಪೋಷಕರು ಮತ್ತು ವಿದ್ಯಾರ್ಥಿಗಳ ವಿರೋಧವಿದೆ ಎಂದು ಕೋರ್ಟ್ ಗೆ ತಪ್ಪು ಮಾಹಿತಿ ನೀಡಲು ಮುಂದಾಗಿದ್ದರು. ಆದರೆ ಸುಪ್ರೀಂ ನಿಂದ ಪ್ರಕರಣ ಮತ್ತೆ ಹೈಕೋರ್ಟ್ ಅಂಗಳ ತಲುಪಿದ್ದು, ಇಲ್ಲಿ ನ್ಯಾಯಾಲಯಕ್ಕೆ ಸರ್ಕಾರ ತನ್ನ ಬೋರ್ಡ್ ಪರೀಕ್ಷೆಯ ತೀರ್ಮಾನವನ್ನು ಸಮರ್ಥಿಸಿಕೊಳ್ಳುವಲ್ಲಿ ಸಫಲವಾಗಿದೆ.

ಇದನ್ನೂ ಓದಿ : SSLC Exam 2024 Mass Copy : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು : ಕೊಠಡಿ ಮೇಲ್ವಿಚಾರಕ ಶಿಕ್ಷಕ ಅಮಾನತ್ತು

ಹೀಗಾಗಿ ನ್ಯಾಯಾಲಯ ಪರೀಕ್ಷೆಗೆ ಅನುಮತಿ ನೀಡಿದ್ಸು, ಎರಡು ಭಾಷಾ ಪರೀಕ್ಷೆ ಬಳಿಕ ಸ್ಥಗಿತಗೊಂಡಿದ್ದ ಪರೀಕ್ಷೆಗಳು ಈಗ ಮತ್ತೆ ಮುಕ್ತಾಯಗೊಂಡಿದೆ. ಇನ್ನೊಂದೆಡೆ ಬೋರ್ಡ್ ಪರೀಕ್ಷೆಗೆ ವಿರೋಧಿಸುವ ಈ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದ ಶಾಲೆಗಳ ಹಿಂದೆ ಅನಧಿಕೃತ ಪುಸ್ತಕ ಮಾರಾಟದ ಮಾಫಿಯಾ ಕೂಡ ಇದೆ ಎಂಬ ಆರೋಪವೂ ಕೇಳಿಬಂದಿದೆ.

5,8,9 Board Exams Permission state curriculum, teaching central curriculum Examination glitch exposes illegality of private educational institutions
Image Credit to Original Source

ಇತ್ತ ರಾಜ್ಯ ಪಠ್ಯಕ್ರಮವೂ ಅಲ್ಲದ ಅತ್ತ ಕೇಂದ್ರ ಪಠ್ಯಕ್ರಮವೂ ಅಲ್ಲದ ಒಂದು ಪಠ್ಯವನ್ನು ಹೊಸದಾಗಿ ಸೃಷ್ಟಿಸಿಕೊಂಡು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ಆರೋಪವೂ ಶಿಕ್ಷಣ ವಲಯದಲ್ಲಿಯೇ ಕೇಳಿಬಂದಿದೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ : ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

ಸಾಕಷ್ಟು ಶಾಲೆಗಳು ಕೇವಲ ರಾಜ್ಯ ಪಠ್ಯ ಕ್ರಮಕ್ಕೆ ಸರ್ಕಾರದಿಂದ ಅನುಮತಿ ಪಡೆದಿದ್ದು, ಪೋಷಕರಿಗೆ ತಮ್ಮದು ಕೇಂದ್ರ ಪಠ್ಯಕ್ರಮದ ಶಾಲೆ ಎಂದು ತಪ್ಪು ಮಾಹಿತಿ ನೀಡುತ್ತವೆ. ಬಳಿಕ ಕೇಂದ್ರ ಪಠ್ಯಕ್ರಮದ ಹೆಸರಿನಲ್ಲಿ ಡೊನೇಶನ್ ಹಾಗೂ ದುಬಾರಿ ಶುಲ್ಕ ಪಡೆದು ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿವೆ. ಇದರಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಸುಲಿಗೆಗೊಳಗಾಗುತ್ತಿದ್ದು, ಸರ್ಕಾರದ ಆದೇಶಗಳು ಬಂದಾಗ ಮಕ್ಕಳಿಗೆ ಸಮಸ್ಯೆ ಎದುರಾಗುತ್ತದೆ.

ಈ ಬಾರಿ ಇಂತಹುದ್ದೇ ಪರಿಸ್ಥಿತಿ ಎದುರಾಗಿದ್ದು, ಮಕ್ಕಳು ಎರಡೆರಡು ಭಾರಿ ಪರೀಕ್ಷಾ ಟೆನ್ಸನ್ ಎದುರಿಸುವಂತಾಗಿದೆ. ಹೀಗಾಗಿ ಮಕ್ಕಳನ್ನು ಶಾಲೆಗೆ ದಾಖಲಿಸುವ ಮುನ್ನ ನೀವು ಶಾಲೆಯ ಅನುಮತಿ,ಪಠ್ಯಕ್ರಮ ಹಾಗೂ ದಾಖಲೆಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕೆಂಬುದು ಪೋಷಕರಲ್ಲಿ ನಮ್ಮ ಮನವಿ.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ, ಫಲಿತಾಂಶ ವೀಕ್ಷಿಸಲು ಕ್ಲಿಕ್‌ ಮಾಡಿ

5,8,9 Board Exams : Permission state curriculum, teaching central curriculum: Examination glitch exposes illegality of private educational institutions

Comments are closed.