ಭಾನುವಾರ, ಏಪ್ರಿಲ್ 27, 2025
Homeeducation7.25 ಲಕ್ಷ ಪ್ಯಾಕೇಜ್ ಕೊಟ್ರು ಶಿಕ್ಷಕರು ಸಿಗುತ್ತಿಲ್ಲ : ಖಾಸಗಿ‌ ಶಾಲೆಗಳಲ್ಲೀಗ ಶಿಕ್ಷಕರ ಕೊರತೆ

7.25 ಲಕ್ಷ ಪ್ಯಾಕೇಜ್ ಕೊಟ್ರು ಶಿಕ್ಷಕರು ಸಿಗುತ್ತಿಲ್ಲ : ಖಾಸಗಿ‌ ಶಾಲೆಗಳಲ್ಲೀಗ ಶಿಕ್ಷಕರ ಕೊರತೆ

- Advertisement -

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ರಾಜ್ಯವನ್ನು ಸೇರಿದಂತೆ ವಿಶ್ವವನ್ನೇ ಕೊರೊನಾ ಸೋಂಕು ಬಾಧಿಸಿತ್ತು. ಈಗ ಕೊರೊನಾ ನಾಲ್ಕನೇ ಅಲೆಯ ಪ್ರಭಾವ ಕೊಂಚ ಕಡಿಮೆಯಾಗಿದ್ದು, ಸದ್ಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಎರಡು ವರ್ಷಗಳ ಬಳಿಕ ಶಿಕ್ಷಣ ವ್ಯವಸ್ಥೆ ಪುನರಾರಂಭಗೊಂಡಿದೆ. ಈ ಮಧ್ಯೆ ಎಲ್ಲ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಕೊರೋನೋತ್ತರ ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳಂತೆ ಸಕ್ರಿಯವಾಗಿರೋ ಖಾಸಗಿ ಶಾಲೆಗಳೂ ಈಗ ಸರ್ಕಾರಿ ಶಾಲೆಗಳಂತೆ ಶಿಕ್ಷಕರ ಕೊರತೆ (Teachers Shortage) ಎದುರಿಸುತ್ತಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರೋ ಸಂಗತಿ ಈಗಾಗಲೇ ಹಲವಾರು ಭಾರಿ ಚರ್ಚೆಗೊಳಗಾಗಿದೆ. ಅಲ್ಲದೇ ಇದಕ್ಕೆ ಪರಿಹಾರ ಎಂಬಂತೆ ಸರ್ಕಾರ ಶಿಕ್ಷಕರ ನೇಮಕಕ್ಕೂ ಸಿದ್ಧತೆ ನಡೆಸಿದೆ. ಆದರೆ ಈಗ ಬಹಿರಂಗವಾಗ್ತಿರೋ ಅಂಶಗಳ ಪ್ರಕಾರ ರಾಜ್ಯದಲ್ಲಿ ಹಾಗೂ ಅದರಲ್ಲೂ ವಿಶೇಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಶಿಕ್ಷಕರ ಕೊರತೆ ಇದೆ ಎನ್ನಲಾಗ್ತಿದೆ. ವಾರ್ಷಿಕ 7,25000 ವೇತನದ ಆಫರ್ ಕೊಟ್ಟರೂ ಶಿಕ್ಷಕರು ಸಿಗುತ್ತಿಲ್ಲ ಎಂಬ ಸಂಗತಿ ಬಯಲಿಗೆ ಬಂದಿದೆ.

ಅದರಲ್ಲೂ ವಿಶೇಷವಾಗಿ ಇಂಗ್ಲಿಷ್, ಕಂಪ್ಯೂಟರ್, ಗಣಿತ, ಸಮಾಜ ವಿಷಯಗಳ ಬೋಧಕರಿಗಾಗಿ ಪರದಾಟದ ಸ್ಥಿತಿ ಇದ್ದು, ಶಾಲೆಗಳಲ್ಲಿ ಮಾಸಿಕ 20 ರಿಂದ 25 ಸಾವಿರ ರೂ. ವರೆಗೆ ವೇತನದ ಆಫರ್ ನೀಡಿದ್ರು ಶಿಕ್ಷಕರು ಸಿಗದಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಒಟ್ಟಾರೆ 2,70 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ಪೂರ್ವದಲ್ಲಿ ಸೇವೆಯಲ್ಲಿದ್ದರು.‌ ಆದರೆ ಕೊರೋನಾ ಬಳಿಕ ಈ ಶಿಕ್ಷಕರುಗಳು ಸೇವೆಗೆ ಮರಳಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಬೋಧಕ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಇನ್ನು ಕೊರೋನಾದ ಬಳಿಕ ಶಿಕ್ಷಕರ ಕೊರತೆ ಎದುರಾಗೋದಕ್ಕೆ ಕಾರಣವೇನು ಎಂಬುದನ್ನು ಗಮನಿಸೋದಾದರೇ,

  • ಬಹುತೇಕ ಜನರು ನಗರದ ಬದುಕಿನ ಅನಿಶ್ಚಿತತೆಯ ಕಾರಣಕ್ಕೆ ನಗರಗಳನ್ನು ತೊರೆದು ಹಳ್ಳಿಗಳಿಗೆ ತೆರಳಿದ್ದಾರೆ.
  • ಇನ್ನೂ ಹಲವರು ಕೊರೋನಾ ಕಾಲದಲ್ಲಿ ಎದುರಾದ ಉದ್ಯೋಗ ಅನಿಶ್ಚಿತತೆಯ ಕಾರಣಕ್ಕೆ ಶಿಕ್ಷಕ ವೃತ್ತಿ ತೊರೆದು ಬೇರೆ ಉದ್ಯೋಗಗಳತ್ತ ಮುಖಮಾಡಿದ್ದಾರೆ.
  • ಬಹಳಷ್ಟು ಜನ ಕಡಿಮೆ ವೇತನ ಎಂಬ ಕಾರಣಕ್ಕೆ ಶಿಕ್ಷಕ ವೃತ್ತಿ ಬಿಟ್ಟಿದ್ದಾರೆ.
  • ಕೋವಿಡ್ ವೇಳೆ ಕೃಷಿ ಚಟುವಟಿಕೆಗೆ ತೆರಳಿದವ ರಲ್ಲಿ ಹಲವರು ಮರಳಿಲ್ಲ
  • ಕೆಲವರು ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಉಳಿದಿದ್ದಾರೆ.

ಹೀಗೆ ನಾನಾ ಕಾರಣಕ್ಕೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಕೊರತೆ ಎದುರಿಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ.

ಇದನ್ನೂ ಓದಿ : ಸಿಬಿಎಸ್‌ಇ 10, 12 ನೇ ತರಗತಿ ಫಲಿತಾಂಶ ದಿನಾಂಕ ಪ್ರಕಟ : ಫಲಿತಾಂಶ ನೋಡಲು cbresults.nic.in ಕ್ಲಿಕ್‌ ಮಾಡಿ

ಇದನ್ನೂ ಓದಿ : ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

7.25 lakh salary for teachers, but Teachers Shortage in private schools

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular