SSLC Supplementary Examination : ಜೂನ್ 27 ರಿಂದ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ: ಕೋವಿಡ್‌ ಕಟ್ಟೆಚ್ಚರ ವಹಿಸಲು ಇಲಾಖೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಜುಲೈ 4 ವರೆಗೆ SSLC ಪೂರಕ ಪರೀಕ್ಷೆ (SSLC Supplementary Examination) ನಡೆಯಲಿದೆ. ಈ ಬಾರಿ 94,649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ರಾಜ್ಯದ ಒಟ್ಟು 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಂತೆ ಪೂರಕ ಪರೀಕ್ಷಾ ಕೇಂದ್ರ ದಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಇನ್ನು SSLC Supplementary Examination ವೇಳಾಪಟ್ಟಿ ಹೀಗಿದೆ

  • ಜೂನ್ 27-ವಿಜ್ಞಾನ, ರಾಜ್ಯಶಾಸ್ತ್ರ ಕರ್ನಾಟಕ ಸಂಗೀತ/ಹಿಂದೂಸ್ಥಾನಿ ಸಂಗೀತ
  • ಜೂನ್ 28-ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಸಂಸ್ಕೃತ)
  • ಜೂನ್ 29-ದ್ವಿತೀಯ ಭಾಷೆ (ಇಂಗ್ಲಿಷ್-ಕನ್ನಡ)
  • ಜೂನ್ 30-ಸಮಾಜವಿಜ್ಞಾನ
  • ಜುಲೈ 1- ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಎನ್ ಎಸ್, ಕ್ಯೂ, ಎಫ್ ಪರೀಕ್ಷಾ ವಿಷಯಗಳು (ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟ್ ಅಂಡ್ ವೆಲ್ ನೆಸ್)
  • ಜುಲೈ -2ಎಲಿಮೆಂಟ್‌ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
  • ಜುಲೈ-4 ಗಣಿತ, ಸಮಾಜಶಾಸ್ತ್ರ ಪರೀಕ್ಷೆ ನಡೆಯಲಿದೆ‌.

ಇನ್ನು ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲೂ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ. ಕೊರೋನಾ ನಿಯಮದ ಪ್ರಕಾರ

  • ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ ಮುನ್ನಾ, ನಂತ್ರ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.
  • ಪರೀಕ್ಷಾ ಕೊಠಡಿಯ ಎಲ್ಲಾ ಪೀಠೋಪಕರಣ ಸ್ಯಾನಿಟೈಸ್ ಮಾಡಬೇಕು. ದೈಹಿಕ ಅಂತರ ಕಾಪಾಡಬೇಕು.
  • ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿರಬೇಕು. ಒಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಯಂತೆ ಆಸನದ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ.
  • ಸೂಚನಾ ಫಲಕದ ಮುಂದೆ ವಿದ್ಯಾರ್ಥಿಗಳು ಗುಂಪು ಗೂಡದಂತೆ ತಡೆಯುವುದು.
  • ವಿದ್ಯಾರ್ಥಿ ತನ್ನದೇ ಆದಂತ ನೀರಿನ ಬಾಟಲಿ ತರುವುದು
  • ಕೆಮ್ಮು, ನೆಗಡಿ, ಜ್ವರ ಮೊದಲಾದವುಗಳಿಂದ ಬಳಲುತ್ತಿರೋ, ಲಕ್ಷಣಗಳಿರೋ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಠ ಎರಡು ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಕಾಯ್ದಿರಿಸ ಲು ಸೂಚಿಸಲಾಗಿದೆ‌
  • ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳುವುದು
  • ಪರೀಕ್ಷಾ ಕೇಂದ್ರ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸ್ ಮಾಡುವುದು
  • ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ : Cruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ‌, ಮೂವರ ಸ್ಥಿತಿ ಚಿಂತಾಜನಕ

ಇದನ್ನೂ ಓದಿ : 7.25 ಲಕ್ಷ ಪ್ಯಾಕೇಜ್ ಕೊಟ್ರು ಶಿಕ್ಷಕರು ಸಿಗುತ್ತಿಲ್ಲ : ಖಾಸಗಿ‌ ಶಾಲೆಗಳಲ್ಲೀಗ ಶಿಕ್ಷಕರ ಕೊರತೆ

SSLC Supplementary Examination from June 27, Department instructs Covid Guidelines

Comments are closed.