ಭಾನುವಾರ, ಏಪ್ರಿಲ್ 27, 2025
Homeeducationಅಂಬೇಡ್ಕರ್ ಸಂವಿಧಾನ ಶಿಲ್ಪಿ ಬಿರುದಿಗೆ ಧಕ್ಕೆ: ಬಯಲಾಯ್ತು ಚಕ್ರತೀರ್ಥ ಸಮಿತಿ ಎಡವಟ್ಟು

ಅಂಬೇಡ್ಕರ್ ಸಂವಿಧಾನ ಶಿಲ್ಪಿ ಬಿರುದಿಗೆ ಧಕ್ಕೆ: ಬಯಲಾಯ್ತು ಚಕ್ರತೀರ್ಥ ಸಮಿತಿ ಎಡವಟ್ಟು

- Advertisement -

ಬೆಂಗಳೂರು : ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ (Rohit Chakrateertha) ನೇತೃತ್ವದ ಪಠ್ಯಪುಸ್ತಕ ಸಮಿತಿಯನ್ನು ಸರ್ಕಾರ ವಿಸರ್ಜನೆಗೊಳಿಸಿದೆ. ಆದರೆ ಪಠ್ಯಪುಸ್ತಕ ಸಮಿತಿ ವಿಸರ್ಜನೆ ಗೊಂಡಿದ್ದರು ಪಠ್ಯಪುಸ್ತಕ ‌ಪರಿಷ್ಕರಣೆ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಬಸವಣ್ಣ ವಿವಾದದ ಬಳಿಕ ಅಂಬೇಡ್ಕರ್ ವಿವಾದ ಗರಿಗೆದರಿದ್ದು, ಎಲ್ಲಾ ತಣ್ಣಗಾಯ್ತು ಎಂದು ಕೊಂಡಿದ್ದ ಶಿಕ್ಷಣ ಇಲಾಖೆಗೆ ಮತ್ತೆ ತಲೆ ಬಿಸಿ ಎದುರಾಗಿದೆ. ರೋಹಿತ್ ‌ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ವೇಳೆ ಮಹಾಪ್ರಮಾದ ಎಸಗಿರೋದು ಬೆಳಕಿಗೆ ಬಂದಿದೆ.

ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ (Rohit Chakrateertha) ಸಮಿತಿ ಕೈಬಿಟ್ಟಿದೆ. 9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಆಗಿರುವ ಪರಿಷ್ಕರಣೆ ಇದಾಗಿದ್ದು, ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಸಮಿತಿ ಕೈಬಿಟ್ಟು ಹೊಸ ವಿವಾದ ಸೃಷ್ಟಿಸಿದೆ. ನಮ್ಮ ಸಂವಿಧಾನ ಪಠ್ಯದಲ್ಲಿ ಕರಡು ರಚನಾ ಸಮಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ನೀಡುವ ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ್ದ ಕೊಡುಗೆಯನ್ನ ಆದರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂಬ ಅಂಶ ಇತ್ತು.

ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು.ಆದರೆ ರೋಹಿತ್ ಚಕ್ರತೀರ್ಥ (Rohit Chakrateertha) ಸಮಿತಿ ಸಂವಿಧಾನ ಶಿಲ್ಪಿ ಪದವನ್ನೇ ಕೈಬಿಟ್ಟಿದೆ. ಇದರ ಜೊತೆ ಸಂವಿಧಾನ ಕರಡು ಸಮಿತಿ ತನ್ನ ಕಾರ್ಯ ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನ ತೆಗೆದುಕೊಂಡಿತ್ತು ಎಂಬ ವಿವರ ಇತ್ತು.ಇದನ್ನೂ ಕೂಡ ರೋಹಿತ್ ಸಮಿತಿ 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನ ಮಾತ್ರ ಉಲ್ಲೇಖಿಸಿದೆ. ಅನೇಕರು ಇದು ಅಂಬೇಡ್ಕರ್ ಅವಹೇಳನ ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಗೆ ಅವಹೇಳನ ಎಂದು ಆಕ್ರೋಶ ವ್ಯಕ್ತವಾಗ್ತಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲೇನಿತ್ತು. ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ‘ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್‌ ಸಾದುಲ್ಲಾ, ಸಿ. ಮಾಧವರಾವ್‌ ಅವರು ಸದಸ್ಯರಾಗಿದ್ದರು.

ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯದಲ್ಲೇನಿದೆ..? ಅನ್ನೋದನ್ನು ನೋಡೋದಾದರೇ, ಕರಡು ರಚನಾ ಸಮಿತಿ ಕೆಳಗಡೆಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ, ಡಾ. ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಟಿ.ಟಿ. ಕೃಷ್ಣಮಾಚಾರಿ ಮುಂತಾದ ಮುತ್ಸದ್ಧಿಗಳು ಸದಸ್ಯರುಗಳಾಗಿದ್ದರು ಎಂದಿದೆ. ಈಗ ಈ ವಿವಾದ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದ್ದು ಏನಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : Karnataka CET 2022 Hall Ticket  : ಸಿಇಟಿ ಹಾಲ್ ಟಿಕೆಟ್ ಬಿಡುಗಡೆ : ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Rohith Chakrathirtha Reaction : ನಾನು ಬ್ರಾಹ್ಮಣ ಎಂಬ ಕಾರಣಕ್ಕೆ ಟಾರ್ಗೆಟ್: ಸಮಿತಿ ವಿಸರ್ಜನೆ ಬಳಿಕ ರೋಹಿತ್ ಚಕ್ರತೀರ್ಥ ಆರೋಪ

Ambedkar Constitution threatens the title of sculptor Rohit Chakrateertha

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular