krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

ಪುದುಚೇರಿ : 6,6,6,6,6,6 ಸತತ ಆರು ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸುವುದು ಸುಲಭದ ಮಾತಲ್ಲ. ಯುವರಾಜ್‌ ಸಿಂಗ್‌, ಹರ್ಷಲ್‌ ಗಿಬ್ಸ್‌, ಕಿರೋನ್‌ ಪೊಲಾರ್ಡ್‌ ಈ ಸಾಧನೆಯನ್ನ ಮಾಡಿದಾಗಿ ವಿಶ್ವವೇ ನಿಬ್ಬೆರಗಾಗಿತ್ತು. ಆದ್ರೀಗ 15 ವರ್ಷದ ಬಾಲಕನೋರ್ವ ಮಹಾನ್‌ ಕ್ರಿಕೆಟ್‌ ದಿಗ್ಗಜರ ಸಾಧನೆಯನ್ನು ಸರಿಗಟ್ಟಿದ್ದಾನೆ. ಪುದುಚೇರಿ ಯಲ್ಲಿ ನಡೆಯುತ್ತಿರುವ ಟಿ10 ಲೀಗ್‌ನಲ್ಲಿ (Pondicherry T10) ಕೃಷ್ಣ ಪಾಂಡೆ (krishna pandey) ಅನ್ನೋ ಯುವ ಕ್ರಿಕೆಟಿಗ ಇಂತಹ ಸಾಧನೆಯನ್ನು ಮಾಡಿದ್ದಾನೆ. 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪುದುಚೇರಿ ಟಿ10 ಲೀಗ್‌ನಲ್ಲಿ ಪ್ಯಾಟ್ರಿಯಟ್ಸ್‌ ಹಾಗೂ ರಾಯಲ್ಸ್‌ ತಂಡದ ನಡುವಿನ ಪಂದ್ಯದ 6 ನೇ ಓವರ್‌ನಲ್ಲಿ ನಿತೇಶ್‌ ಠಾಕೂರ್‌ ಬೌಲಿಂಗ್‌ ಮಾಡೋದಕ್ಕೆ ಶುರು ಮಾಡಿದ್ರು. ಮೊದಲ ಎಸೆತದಲ್ಲಿಯೇ ಕೃಷ್ಣ ಪಾಂಡೆ ಬಾಲ್‌ ಅನ್ನು ಸಿಕ್ಸರ್‌ ಗೆ ಅಟ್ಟಿದ್ರು. ನಂತರ ಸತತವಾಗಿ ಎಲ್ಲಾ ಎಸೆತಗಳಲ್ಲಿ ಸಿಕ್ಸರ್‌ ಬಾರಿಸುವ ಮೂಲಕ ಕೃಷ್ಣಪಾಂಡೆ ವಿಶಿಷ್ಟ ಸಾಧನೆ ಯನ್ನು ಮಾಡಿದ್ದಾರೆ. ಕೃಷ್ಣ ಪಾಂಡೆ ಕೇವಲ 19 ಎಸೆತಗಳಲ್ಲಿ 12 ಸಿಕ್ಸರ್‌ ಹಾಗೂ 2 ಬೌಂಡರಿ ನೆರವಿನಿಂದ 83ರನ್‌ ಸಿಡಿಸಿದ್ದಾರೆ.

2007 ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್‌ ಎಸೆದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಆರು ಸಿಕ್ಸರ್‌ ಬಾರಿಸುವ ಮೂಲಕ ವಿಶ್ವದಾಖಲೆ ಯನ್ನು ಬರೆದಿದ್ದರು. ಅಲ್ಲದೇ ಟೀಂ ಇಂಡಿಯಾ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದರು. ಮಾರ್ಚ್ 2021 ರಲ್ಲಿ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಕೀರನ್‌ ಪೊಲಾರ್ಡ್‌ ಅವರು ಅಖಿಲಾ ದನಂಜಯ ಅವರ ಎಸೆತದಲ್ಲಿ ಆರು ಸಿಕ್ಸರ್‌ ಬಾರಿಸುವ ಮೂಲಕ ಯುವರಾಜ್‌ ಸಿಂಗ್‌ ದಾಖಲೆಯನ್ನು ಸರಿಗಟ್ಟಿದ್ದರು. ಆದ್ರೆ ಇದೇ ಪಂದ್ಯದಲ್ಲಿ ಅಖಿಲಾ ಧನಂಜಯ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ.

ಆದರೆ ಯುವರಾಜ್‌ ಸಿಂಗ್‌ ಹಾಗೂ ಪೊಲಾರ್ಡ್‌ಗಿಂತಲೂ ಮೊದಲೇ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಹರ್ಷಲ್‌ ಗಿಬ್ಸ್‌ 2007 ರ ವಿಶ್ವಕಪ್‌ ನಲ್ಲಿ ನೆದರ್‌ಲ್ಯಾಂಡ್ ವಿರುದ್ಧದ 50 ಓವರ್‌ಗಳ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದರು. ಇನ್ನು ವೆಸ್ಟ್ ಇಂಡೀಸ್ ದಂತಕಥೆ ಸರ್ ಗಾರ್ಫೀಲ್ಡ್ ಸೋಬರ್ಸ್ ಅವರು 1968 ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗನ್ ವಿರುದ್ಧ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವ ಮೂಲಕ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಬಾರಿಸಿದ ಮೊದಲ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನುಭಾರತದ ಮಾಜಿ ಆಲ್‌ರೌಂಡರ್ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಬರೋಡಾ ವಿರುದ್ಧ ಮುಂಬೈ (ಆಗಿನ ಬಾಂಬೆ) ಪರವಾಗಿ ಒಂದು ಓವರ್‌ನಲ್ಲಿ 36 ರನ್ ಗಳಿಸಿದ್ದರು.

krishna pandey ಬ್ಯಾಟಿಂಗ್‌ ಆರ್ಭಟ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : T20 World Cup Squad: ಟಿ20 ವಿಶ್ವಕಪ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಔಟ್

ಇದನ್ನೂ ಓದಿ : India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

krishna pandey hits 6 six in one over puduchery t10 league

Comments are closed.