CBSE Class 10 12 :ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಸಿಂಗಲ್ ಎಕ್ಸಾಂ ಮಾದರಿಯಲ್ಲಿಯೇ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಮಂಡಳಿಯು 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು 2 ಭಾಗಗಳಾಗಿ ವಿಂಗಡಿಸಿದೆ. ಸಿಬಿಎಸ್ಇ ಟರ್ಮ್ 1 ಪರೀಕ್ಷೆಗಳನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗಿತ್ತು. ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26ರಿಂದ ಜೂನ್ 15ರವರೆಗೆ ನಡೆಸಲಾಗುತ್ತದೆ.
ಮುಂದಿನ ಶೈಕ್ಷಣಿಕ ಅವಧಿಯಿಂದ 10ನೇ ತರಗತಿ ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಒಂದೇ ಬಾರಿಗೆ ನಡೆಸಲಾಗುತ್ತದೆ. ಈ ಹಿಂದೆ ಕೂಡ ಇದೇ ರೀತಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಕೊರೊನಾ ಕಾರಣದಿಂದಾಗಿ 2 ಟರ್ಮ್ಗಳ ರೂಪದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಟರ್ಮ್ ಆಧಾರದಲ್ಲಿ ಅಥವಾ ವಾರ್ಷಿಕ ಪರೀಕ್ಷೆ ಇದರಲ್ಲಿ ಯಾವುದು ಇರಲಿದೆ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಧೃಢೀಕರಣ ನೀಡಿಲ್ಲ. ಇನ್ಮುಂದೆ ಟರ್ಮ್ ಮಾದರಿಯಲ್ಲಿಯೇ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್ಇ ಎಲ್ಲಿಯೂ ಘೋಷಣೆ ಮಾಡಿಲ್ಲ. ಈಗ ಶಾಲೆಗಳು ಪೂರ್ಣ ಸಾಮರ್ಥ್ಯದಲ್ಲಿ ನಡೆಯುತ್ತಿದೆ. ಹೀಗಾಗಿ ಮೊದಲ ಮಾದರಿಯಲ್ಲಿಯೇ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್ಇ ಚಿಂತನೆ ನಡೆಸಿದೆ ಎನ್ನಲಾಗಿದೆ.
ಪಠ್ಯಕ್ರಮದ ತರ್ಕಬದ್ಧತೆಯ ಬಗ್ಗೆ ಮಾತನಾಡುತ್ತಾ, ಅಧಿಕಾರಿ ಹೇಳಿದರು: “ಎನ್‌ಸಿಇಆರ್‌ಟಿ ನಮಗೆ ತರ್ಕಬದ್ಧತೆಯ ವಿವರಗಳನ್ನು ಕಳುಹಿಸುತ್ತದೆ, ಅದರ ಆಧಾರದ ಮೇಲೆ ಪ್ರಕಟಣೆಯನ್ನು ಮಾಡಲಾಗುತ್ತದೆ. ಶಾಲೆಗಳು ಅಸ್ತಿತ್ವದಲ್ಲಿರುವ ಪುಸ್ತಕಗಳನ್ನು ಬಳಸಿಕೊಂಡು ಕಡಿಮೆ ಪಠ್ಯಕ್ರಮವನ್ನು ಕಲಿಸಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ :KS Eshwarappa : ಕಾರ್ಯಕರ್ತನಿಂದ ಉಪಮುಖ್ಯಮಂತ್ರಿ , ರಾಜೀನಾಮೆಯೊಂದಿಗೆ ಅಂತ್ಯವಾಗುತ್ತಾ ಈಶ್ವರಪ್ಪ ರಾಜಕೀಯ ಭವಿಷ್ಯ ?
ಇದನ್ನೂ ಓದಿ : CBSE Term 2 Exams : ಸಿಬಿಎಸ್ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ
BIG News For CBSE Class 10, 12 Board Students. Details Here