Google Lens : ಡೆಸ್ಕ್‌ಟಾಪ್‌ ಕ್ರೋಮ್‌ನಲ್ಲಿಯ ಗೂಗಲ್‌ ಲೆನ್ಸ್‌ ಹೇಗೆಲ್ಲಾ ಕೆಲಸ ಮಾಡುತ್ತದೆ ಗೊತ್ತೇ?

ಡೆಸ್ಕ್‌ಟಾಪ್‌ ಕ್ರೋಮ್‌ನಲ್ಲೂ ಸೇರಿಸಿಲಾದ ಗೂಗಲ್‌ ಲೆನ್ಸ್‌ನ(Google Lens) ವರ್ಷನ್‌ ಕೂಡಾ ಇದೀಗ ಇಮೇಜ್‌ಗಳನ್ನು ಹುಡುಕುವುದಕ್ಕಿಂತಲೂ ಹೆಚ್ಚಿನದನ್ನು ಮಾಡಲು ನವೀಕರಸಲಾಗಿದೆ.

ಇಮೇಜ್‌ನ ಮೇಲೆ ರೈಟ್‌ ಕ್ಲಿಕ್‌ ಮಾಡಿ ಮತ್ತು ಲಾಂಚ್‌ ಆದ ನಂತರ, ಲೆನ್ಸ್‌ ಫಲಿತಾಂಶಗಳ ಪುಟವು ಈಗ ಸ್ಕ್ರೀನ್‌ನ ಕೆಳಗಡೆ ಟ್ಯಾಬ್‌ಗಳಲ್ಲಿ ಕಾಣಬಹುದಾಗಿದೆ. ಸರ್ಚ್‌ ಒಂದು ಡಿಫಾಲ್ಟ್‌ ಟೂಲ್‌ ಆಗಿದೆ, ಆದರೆ ಅದು ಈಗ ಟೆಕ್ಸ್ಟ್‌ ಫಿಲ್ಟರ್‌ನ ಜೊತೆ ಸೇರಿದೆ. ಅದು ದೀರ್ಘಕಾಲಿನಿಂದ ವೆಬ್‌ನಲ್ಲಿನ ಮೊಬೈಲ್‌ ಮತ್ತು ಗೂಗಲ್‌ ಫೋಟೋಗಳುಲ್ಲಿ ಕಾಣಬಹುದಾಗಿದೆ. ಯಾವುದೇ ಟೆಕ್ಸ್ಟ್‌ ಅನ್ನು ನೀವು ಕ್ಲಿಕ್‌ ಮತ್ತು ಡ್ರಾಗ್‌ ಮಾಡುವುದರ ಮೂಲಕ ಕಾಪಿ ಮಾಡಬಹುದಾಗಿದೆ, ಪ್ರಶ್ನಿಸಬಹುದಾಗಿದೆ, ಅನುವಾದ ಅಥವಾ ಹುಡುಕ ಬಹುದಾಗಿದೆ. ಅದಲ್ಲದೇ ಎಲ್ಲವನ್ನೂ ಸೆಲೆಕ್ಟ್‌ ಮಾಡಬಹುದಾಗಿದೆ.

ಬೌಸರ್‌ನಲ್ಲಿಯ ಒಸಿಆರ್‌(ಆಪ್ಟಿಕಲ್‌ ಕಾರೆಕ್ಟರ್‌ ರೆಕಗ್ನೈಸೇಷನ್‌) ತ್ವರಿತ ಪ್ರವೇಶದ ಸಾಮರ್ಥ್ಯ ಹೊಂದಿದ್ದು ಅದು ಈಗ macOS ನಲ್ಲೂ ಇದ್ದು ಬಹಳ ಪ್ರಯೋಜನಕಾರಿಯಾಗಿದೆ. ಈ ಮೊದಲೇ ಅಪ್‌ಲೋಡ್‌ ಮಾಡಿದ ಇಮೇಜ್‌ಗಳಲ್ಲಿಯೂ ಸಹ ಈ ಟೂಲ್‌ ಉಪಯೋಗಿಸಬಹುದಾಗಿದೆ.

ಮೊಬೈಲ್‌ ಅಪ್ಲಿಕೇಷನ್‌ ಹೋಲುವ ಯುಐ ಟ್ರಾನ್ಸಲೇಟ್‌ನಲ್ಲಿಯೂ ಇದೆ. ಗೂಗಲ್‌ ಲೆನ್ಸ್‌ ಸ್ವಯುಂಚಾಲಿತವಾಗಿಯೇ ಭಾಷೆಯನ್ನು ಹುಡುಕುವುದು ಆದರೆ ನಿಮಗೆ ಯಾವಾಗ ಬೇಕೊ ಆಗ ಭಾಷೆ ಬದಲಿಸಿಕೊಳ್ಳಬಹುದು. ಇದರ ಇನ್ನೊಂದು ಸಾಮರ್ಥ್ಯವೆಂದರೆ ಗುರುತಿಸಿದ ಟೆಕ್ಸ್ಟ್‌ ಅನ್ನು translate.google.com ನಲ್ಲಿಯೂ ತೆರೆಯಬಹುದಾಗಿದೆ.

ಕೊನೆಯದಾಗಿ ಇಮೇಜ್‌ನ ಮೂಲ ಹುಡುಕುವುದು (ಫೈಂಡ್‌ ಇಮೆಜ್‌ ಸೋರ್ಸ್‌) ಗೂಗಲ್‌ ಇಮೇಜ್‌ನ ಪೂರ್ವನಿಯೋಜಿತ ಶಾರ್ಟಕಟ್‌ ಗೂಗಲ್‌ ಇಮೇಜ್‌ನಲ್ಲಿ ತೆರದುಕೊಳ್ಳುವುದು. ಈಗ ಸುಲಭವಾಗಿ ಇಮೇಜ್‌ ಅನ್ನು ಗೂಗಲ್‌ ಇಮೇಜ್‌ಗಳಿಗೆ ಅಪ್‌ಲೋಡ್‌ ಮಾಡಿ, ಫಲಿತಾಂಶಗಳನ್ನು ನೋಡಬಹುದಾಗಿದೆ.

ಈ ಎಲ್ಲಾ ಬದಲಾವಣೆಗಳನ್ನು ಯಾವಾಗ ಹೊರತರಲಾಯಿತು ಎಂದು ಸ್ಪಷ್ಟವಾಗಿಲ್ಲ. ಆದರೆ Mac, Windows ಮತ್ತು Chrome Os ಸಾಧನಗಳಲ್ಲಿ Chrome ನಲ್ಲಿ ವ್ಯಾಪಕವಾಗಿ ಲಭ್ಯವಿದೆ ಎಂದು ಪರಿಶೀಲಿಸಲ್ಪಟ್ಟಿದೆ.

ಇದನ್ನೂ ಓದಿ : WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್‌ ಮಾಡುವುದು ಹೇಗೆ ಗೊತ್ತೇ?

ಇದನ್ನೂ ಓದಿ : WhatsApp Web ನಿಮ್ಮ ಮೆಸ್ಸೇಜ್‌ ಡಿಲೀಟ್‌ ಆಗಿದೆಯೇ? ಅದನ್ನು ಪುನಃ ಪಡೆಯಬಹುದು! ಹೇಗೆ ಅಂತೀರಾ?

(Google Lens many ways to use google lens desktop images)

Comments are closed.