
ಬೆಂಗಳೂರು : ಸಿಇಟಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳನ್ನು ಸಲ್ಲಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಎಇ) ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 27ರ ವರೆಗೆ ಪಡೆದಿರುವ ರಾಂಕ್ ಆಧಾರದಲ್ಲಿ ದಾಖಲೆಯನ್ನು ಅಪ್ ಲೋಡ್ ಮಾಡಲು ಸೂಚಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕವೇ ದಾಖಲಾತಿ ಗಳನ್ನು ಪರಿಶೀಲನೆ ಮಾಡಲು ಅವಕಾಶವನ್ನು ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳನ್ನು ಪಿಡಿಎಫ್ ರೂಪದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಸಲ್ಲಿಕೆ ಮಾಡಬಹುದಾಗಿದೆ.

ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಯಾವ ರೀತಿಯಲ್ಲಿ ಅಪ್ ಲೋಡ್ ಮಾಡಬೇಕೆಂಬ ಕುರಿತು ಕೆಇಎ ಶೀಘ್ರದಲ್ಲಿ ವಿಧಾನವನ್ನು ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗೆ ಕೆಇಎ website : http://kea.kar.nic.in ಗೆಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಸಿಇಟಿ ದಾಖಲೆ ಸಲ್ಲಿಸಲು ವೇಳಾಪಟ್ಟಿ :
ಸೆಪ್ಟೆಂಬರ್ 2 ಮತ್ತು 3 : 1ರಿಂದ 2,000 ರಾಂಕ್
ಸೆಪ್ಟೆಂಬರ್ 4 ರಿಂದ 6 : 2,001- 7,000 ರಾಂಕ್
ಸೆಪ್ಟೆಂಬರ್ 7 ರಿಂದ 9 : 7001ರಿಂದ 15,000 ರಾಂಕ್
ಸೆಪ್ಟೆಂಬರ್ 10ರಿಂದ 12- 15,001ರಿಂದ 25,000 ರಾಂಕ್
ಸೆಪ್ಟೆಂಬರ್ 13ರಿಂದ 15- 25,001ರಿಂದ 40,000 ರಾಂಕ್
ಸೆಪ್ಟೆಂಬರ್ 16ರಿಂದ 19- 40,001ರಿಂದ 70,000 ರಾಂಕ್
ಸೆಪ್ಟೆಂಬರ್ 20ರಿಂದ 23- 70,001ರಿಂದ 1,00,000 ರಾಂಕ್
ಸೆಪ್ಟೆಂಬರ್ 24ರಿಂದ 27 ರವರೆಗೆ ಅಂತಿಮ ರಾಂಕ್ ಪಡೆದವರು ದಾಖಲಾತಿ ಸಲ್ಲಿಸಬಹುದಾಗಿದೆ.