ವಿವಾದಕ್ಕೆ ಸಿಲುಕಿದ ಚಂದನ್ ಶೆಟ್ಟಿ ಕೋಲು ಮಂಡೆ ಸಾಂಗ್ : ಅಷ್ಟಕ್ಕೂ ರಾಪರ್ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದೇಕೆ ?

0

ಬೆಂಗಳೂರು : ರಾಪರ್ ಚಂದನ್ ಶೆಟ್ಟಿ ಅವರ “ಕೋಲು ಮಂಡೆ ಜಂಗಮ ದೇವರು” ರಾಪ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಬಾರೀ ಹಿಟ್ ಆಗಿದೆ. ಆದರೆ ಇದೇ ಸಾಂಗ್ ಇದೀಗ ವಿವಾದದ ಕಿಡಿ ಹೊತ್ತಿಸಿದ್ದು, ಆಲ್ಬಮ್ ನಲ್ಲಿ ಮಹಾಪತಿವ್ರತೆ ಶಿವಶರಣೆ ಸಂಕಮ್ಮನನ್ನ ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವಲ್ಲೇ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದಾರೆ.

https://youtu.be/Lm3OOsqTlKs

ಕಳೆದೆಡರು ದಿನಗಳ ಹಿಂದೆಯಷ್ಟೇ ಚಂದನ್ ಶೆಟ್ಟಿ ಹೊಸ ರಾಪ್ ಸಾಂಗ್ ಬಿಡುಗಡೆ ಮಾಡಿದ್ದರು. ಜಾನಪದ ಹಾಡಿಗೆ ರಾಪ್ ಟಚ್ ಕೊಟ್ಟು ಕೋಲು ಮಂಡೆ ಜಂಗಮ ದೇವರು ಹಾಡನ್ನು ವಿಭಿನ್ನವಾಗಿ ತೋರಿಸೋ ಪ್ರಯತ್ನ ಮಾಡಲಾಗಿತ್ತು.

ಚಂದನ್ ಶೆಟ್ಟಿ ಹಾಡನ್ನು ಹಾಡುವ ಮೂಲಕ ನಟಿಸಿದ್ದರು. ಆದರೆ ಹಾಡಿನಲ್ಲಿ ಶಿವಶರಣೆ ಸಂಕಮ್ಮನ ಅವರನ್ನು ಅಶ್ಲೀಲವಾಗಿ ತಿರುಚಲಾಗಿದ್ದು, ಗೀತೆಯ ಸಾಹಿತ್ಯವನ್ನೇ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಮೂಲಕ ಮಹಾದೇವ ಹಾಗೂ ಸಂಕಮ್ಮನನ್ನು ಅವಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಲ್ಬಮ್ ಸಾಂಗ್ ಇದೀಗ ಮಾದಪ್ಪನ ಭಕ್ತರನ್ನು ಕೆರಳಿಸಿತ್ತು.

ಆಲ್ಬಮ್ ಸಾಂಗ್ ಇದೀಗ ವಿವಾದ ಕಿಡಿ ಹೊತ್ತಿಸುತ್ತಿದ್ದಂತೆಯೇ ತಪ್ಪಿನ ಅರಿವಾಗಿ ಚಂದನ್ ಶೆಟ್ಟಿ ಮಾದಪ್ಪನ ಭಕ್ತರಿಗೆ ಕ್ಷಮೆ ಕೇಳಿದ್ದಾರೆ. ಮಾತ್ರವಲ್ಲ ಇಡೀ ಹಾಡನ್ನು ರೀ ಶೂಟ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.

Leave A Reply

Your email address will not be published.