ಭಾನುವಾರ, ಏಪ್ರಿಲ್ 27, 2025
Homeeducationschools future in confusion : ಸಿಎಂ, ಶಿಕ್ಷಣ ಸಚಿವರಿಗೆ ಸ್ಪಷ್ಟತೆಯ ಕೊರತೆ : ಗೊಂದಲದಲ್ಲಿದೆ...

schools future in confusion : ಸಿಎಂ, ಶಿಕ್ಷಣ ಸಚಿವರಿಗೆ ಸ್ಪಷ್ಟತೆಯ ಕೊರತೆ : ಗೊಂದಲದಲ್ಲಿದೆ ರಾಜ್ಯದ ಶಾಲಾ ಭವಿಷ್ಯ

- Advertisement -

ಬೆಂಗಳೂರು : ರಾಜ್ಯದಲ್ಲಿ ಕರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಪ್ರತಿನಿತ್ಯ ಹೆಚ್ಚುತ್ತಲೇ ಇದೆ. ವೀಕೆಂಡ್ ಕರ್ಪ್ಯೂ ಹಾಗೂ ನೈಟ್ ‌ಕರ್ಪ್ಯೂ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಸ್ ನಡೆಸಿರುವ ಸರ್ಕಾರ ಮಕ್ಕಳ ವಿಚಾರದಲ್ಲಿ ಮಾತ್ರ ಸ್ಪಷ್ಟ ನಿರ್ಧಾರಕೈಗೊಳ್ಳುವಲ್ಲಿ ಎಡವುತ್ತಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಐದನ್ನು ದಾಟಿದ್ದರೂ ಇನ್ನೂ ಶಾಲೆಗಳನ್ನು ನಡೆಸಬೇಕಾ ಬೇಡವಾ ಎಂಬುದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಶಿಕ್ಷಣ ಸಚಿವರು ( schools future in confusion ) ವಿಫಲವಾಗುತ್ತಿದ್ದು, ಅತ್ಯಂತ ಸೂಕ್ಷ್ಮವಾದ ಮಕ್ಕಳ ವಿಚಾರಕ್ಕೆ ಸಿಎಂ ಕೂಡ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲಿ ಜನವರಿ ೧೯ ರವರೆಗೆ ಒಂದರಿಂದ ಒಂಬತ್ತನೆ ತರಗತಿ ಮಕ್ಕಳಿಗೆ ರಜೆ‌ನೀಡಲಾಗಿದೆ. ಆದರೆ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ವಸತಿ ಶಾಲೆಯ ಮಕ್ಕಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ನೂರಾರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೆಬ್ರವರಿ ವೇಳೆಗೆ ಕೊರೋನಾ ಪ್ರತಿನಿತ್ಯ ೧ ಲಕ್ಷ ಪ್ರಕರಣಗಳು ವರದಿಯಾಗಬಹುದೆಂದು ತಜ್ಞರು ಅಂದಾಜಿಸುತ್ತಿದ್ದಾರೆ. ಈ ವೇಳೆ ಮಕ್ಕಳು ಸೂಪರ್ ಸ್ಪ್ರೆಡರ್ ಆಗಬಹುದೆಂಬ ಆತಂಕವೂ ಇದೆ. ಹೀಗಿದ್ದರೂ ಸರ್ಕಾರ ಮಕ್ಕಳ ವಿಚಾರದಲ್ಲಿ ಸೂಕ್ತ ನಿರ್ಧಾರಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಶಿಕ್ಷಣ ಕ್ಷೇತ್ರದ ಸೂಕ್ಷ್ಮತೆ ಗಳನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದರು. ಈಗ ಸಚಿವ ಬಿ.ಸಿ.ಪಾಟೀಲ್ ಕೂಡ ಸೂಕ್ತವಾಗಿ ನಿರ್ಣಯ ಕೈಗೊಳ್ಳುವಲ್ಲಿ ಸೋಲುತ್ತಿದ್ದಾರೆ.

ಸದ್ಯ ರಾಜ್ಯದಾದ್ಯಂತ ಶಾಲಾ‌ ಕಾಲೇಜುಗಳನ್ನು ಬಂದ್ ಮಾಡುವುದಿಲ್ಲ. ಪಾಸಿಟಿವಿಟಿ ದರದ ಆಧಾರದ ಮೇಲೆ ಅಗತ್ಯವಿದ್ದಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳಿ ಅಧಿಕಾರ ನೀಡಲಾಗಿದೆ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಸರ್ಕಾರದ ಈ ನಿರ್ಣಯ ಪೋಷಕರ ಹಾಗೂ ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಪಾಸಿಟಿವಿಟಿ ದರ ಹೆಚ್ಚಿರುವಲ್ಲಿ ಶಾಲೆ ಬಂದ್ ಮಾಡುವ ಮಾತನಾಡುತ್ತಿರುವ ಸರ್ಕಾರ ಇನ್ನೊಂದೆಡೆ ಶಿಕ್ಷಣ ಪ್ರಕ್ರಿಯೆಯನ್ನು ನಿರಂತರವಾಗಿಡಲು ವಿದ್ಯಾಗಮವನ್ನು ಜಾರಿಗೊಳಿಸಲು‌ ನಿರ್ಧರಿಸುತ್ತಿದೆ.

ವಿದ್ಯಾಗಮದ ಅನ್ವಯ ಶಿಕ್ಷಕರೂ ಆಫ್ ಲೈನ್ ತರಗತಿಯನ್ನು ನಡೆಸಬೇಕು. ಶಾಲೆಯ ಆವರಣದಲ್ಲಿ ಮಕ್ಕಳ ಗುಂಪುಗಳನ್ನು ಮಾಡಿ ಕಲಿಕೆಯನ್ನು ಜಾರಿಯಲ್ಲಿಡಬೇಕು ಎಂದಿದೆ. ಇದರಿಂದ ಕೊರೋನಾ ಹರಡೋದಿಲ್ಲವೇ ? ತರಗತಿ ಒಳಗಿನ ಕಲಿಕೆಯಿಂದ ಮಾತ್ರ ಕೊರೋನಾ ಹರಡುತ್ತಾ ಅನ್ನೋದು ಪೋಷಕರ ಪ್ರಶ್ನೆ. ಶಾಲಾ ಮಕ್ಕಳು ಈಗಾಗಲೇ ಎರಡು ವರ್ಷಗಳ ಕಾಲ ಕೊರೋನಾ ಹಾಗೂ ಶಿಕ್ಷಣ ಇಲಾಖೆಯ ದ್ವಂದ್ವ ನೀತಿಯಿಂದ ಕಂಗೆಟ್ಟಿದ್ದಾರೆ.‌ಮಾನಸಿಕವಾಗಿಯೂ ಶಿಕ್ಷಣದ ಕೊರತೆ ಮಕ್ಕಳನ್ನು ಕಾಡುತ್ತಿದೆ. ಅದರೆ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ತಜ್ಞರ ಅನುಮತಿ ಪಡೆದು ಸಮರ್ಪಕವಾದ ಶಿಕ್ಷಣ ನೀತಿ ರೂಪಿಸಬೇಕಾದ ಸರ್ಕಾರ ಮಾತ್ರ ಶಿಕ್ಷಣ ಕ್ಷೇತ್ರವನ್ನು ಉಳಿದ ಉದ್ಯಮಗಳಂತೆ ಪರಿಗಣಿಸಿ ಒತ್ತಡಕ್ಕೆ ಮಣಿದು ನೀತಿ ರೂಪಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ವೀಕೆಂಡ್‌ ಕರ್ಪ್ಯೂ : ರಾಜ್ಯದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ

ಇದನ್ನೂ ಓದಿ : ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ: ಒಬಿಸಿ, ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

(CM Basavarj Bommai and education minister Nagesh lack of clarity : Karnataka state schools future in confusion)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular