Contacts of Covid patients :ಕೋವಿಡ್​ ಸೋಂಕಿತರ ಸಂಪರ್ಕಿತರ ಕೋವಿಡ್​ ಟೆಸ್ಟ್​ ನಿಯಮಾವಳಿಯಲ್ಲಿ ಬದಲಾವಣೆ

Contacts of Covid patients :ಇಲ್ಲಿಯವರೆಗೆ ದೇಶದಲ್ಲಿ ಯಾರೆಲ್ಲ ಕೋವಿಡ್​ ಸೋಂಕಿತರ ಜೊತೆಯಲ್ಲಿ ಸಂಪರ್ಕವನ್ನು ಹೊಂದಿದ್ದಾರೆಯೋ ಅವರು ಕಡ್ಡಾಯವಾಗಿ ಆರ್​ಟಿ ಪಿಸಿಆರ್​ ಟೆಸ್ಟ್​ಗೆ ಒಳಗಾಗಬೇಕು ಎಂಬ ನಿಯಮವಿತ್ತು. ಆದರೆ ಇದೀಗ ಈ ನಿಯಮಾವಳಿಗಳಲ್ಲಿ ಐಸಿಎಂಆರ್​ ಬದಲಾವಣೆಗಳನ್ನು ತಂದಿದ್ದು ಕೋವಿಡ್​ ರೋಗಿಗಳ ಸಂಪರ್ಕಕ್ಕೆ ಬಂದವರ ವಯಸ್ಸು ಹಾಗೂ ಕೊಮೊರ್ಬಿಡಿಟಿಗಳ ಆಧಾರದ ಮೇಲೆ ಅವರಿಗೆ ಅಪಾಯವಿದೆ ಎಂದು ಗುರುತಿಸದ ಹೊರತು ಪರೀಕ್ಷೆಗೆ ಒಳಗಾಗುವ ಅಗತ್ಯವಿರುವುದಿಲ್ಲ ಎಂದು ಹೇಳಿದೆ.


ಅಂತರಾಜ್ಯ ಪ್ರಯಾಣವನ್ನು ಕೈಗೊಳ್ಳುವವರೂ ಸಹ ಕೊರೊನಾ ಪರೀಕ್ಷೆಗೆ ಒಳಗಾಗುವ ಅಗತ್ಯವಿರೋದಿಲ್ಲ ಎಂದು ಐಸಿಎಂಆರ್​ ಹೇಳಿದೆ. ಹೋಮ್​ ಟೆಸ್ಟ್​​ ಕಿಟ್ ಅವಾ ಮೊಲಿಕ್ಯುಲಾರ್​ ಟೆಸ್ಟ್​ಗಳನ್ನು ಧೃಡೀಕರಿಸಬೇಕು ಎಂದೂ ಇದೇ ವೇಳೆಯಲ್ಲಿ ಹೇಳಲಾಗಿದೆ.

ಐದು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ರಾಜ್ಯಗಳಲ್ಲಿ ಕೃತಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಹಾಗೂ ವೈದ್ಯಕೀಲ ಸೌಲಭ್ಯಗಳು ಸೂಕ್ತವಾಗಿ ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.


ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ನಮ್ಮ ತಯಾರಿಯಲ್ಲಿ ಯಾವುದೇ ಲೋಪಗಳು ಉಂಟಾಗಬಾರದು. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸರಿಯಾದ ಸಮನ್ವಯತೆಯಿಂದ ಮಾತ್ರ ನಾವು ಪರಿಣಾಮಕಾರಿಯಾಗಿ ಕೋವಿಡ್​ ವಿರುದ್ಧ ಹೋರಾಡಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ಹೇಳಿದ್ದಾರೆ.


ವೈದ್ಯಕೀಯ ಸೌಕರ್ಯಗಳು ಹಾಗೂ ಆರೋಗ್ಯ ಮೂಲ ಸೌಕರ್ಯಗಳನ್ನು ಬಲವರ್ಧನೆಗೊಳಿಸಲು ಪ್ರತಿ ಜಿಲ್ಲೆಗಳಲ್ಲಿ ಟೆಲಿ ಕನ್ಸಲ್ಟೇಷನ್​ ಹಬ್​ಗಳನ್ನು ಸ್ಥಾಪನೆ ಮಾಡಬೇಕು. ಲಭ್ಯವಿರುವ ಮೂಲ ಸೌಕರ್ಯ ಹಾಗೂ ಆರೋಗ್ಯ ಸೇವೆಗಳ ಬಗ್ಗೆ ವ್ಯಾಪಕ ಜಾಗೃತಿಯನ್ನು ಕೇಂದ್ರೀಕರಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Contacts of Covid patients don’t need to be tested unless identified as high risk, says Centre

ಇದನ್ನು ಓದಿ : CM Bommai tests corona positive : ಕೊರೊನಾ ಸೋಂಕಿಗೊಳಗಾದ ಸಿಎಂ ಬೊಮ್ಮಾಯಿಯಿಂದ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ..?

ಇದನ್ನೂ ಓದಿ : BJP High Command : ರಾಜ್ಯ ಬಿಜೆಪಿಗೆ ವಲಸಿಗರೇ ಕಂಟಕ : ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನ ಪ್ರಕರಣದ ವರದಿ ಕೇಳಿದ ಹೈಕಮಾಂಡ್

Comments are closed.