ಬೆಂಗಳೂರು : ರಾಜ್ಯದಲ್ಲಿ ಖಾಲಿಯಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ(ಸಿಆರ್‌ಪಿ), ಕ್ಷೇತ್ರ ಸಂಪನ್ಮೂಲ ಅಧಿಕಾರಿ(ಬಿಆರ್‌ಪಿ), ಶಿಕ್ಷಣ ಸಂಯೋಜಕ ಹುದ್ದೆ ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಸಲು ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸೆ.19ರಿಂದ ಆರಂಭವಾಗುವ ಕೌನ್ಸಿಲಿಂಗ್ ಪ್ರಕ್ರಿಯೆಯು ಸೆಪ್ಟೆಂಬರ್ 23ರವರೆಗೆ ನಡೆಯಲಿದೆ. ಈಗಾಗಲೇ ಈ ಎಲ್ಲ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ಅಯೋಜಿಸಲಾಗಿತ್ತು. ಇದೀಗ ಜಿಲ್ಲಾ ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ವಿಧಾನದ ಮೂಲಕ ಆಯ್ಕೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಕೌನ್ಸೆಲಿಂಗ್ ಪ್ರಕ್ರಿಯೆಗೆ ಹಾಜರಾಗದ ಅಥವಾ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳದ ಶಿಕ್ಷಕರಿಗೆ ಪ್ರಸ್ತುತ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.

ಅ.31ರಲ್ಲಿದ್ದಂತೆ ಬಡ್ತಿ, ಮರಣ ಮತ್ತು ಇನ್ನಿತರೆ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳ ತಂತ್ರಾಂಶದಲ್ಲಿ ಇಂದೀಕರಿಸಬೇಕು. ಈಗಾಗಲೇ ಇಂದೀಕರಿಸಿರುವ ಖಾಲಿ ಹುದ್ದೆಗಳನ್ನು ತಿದ್ದುಪಡಿ ಮಾಡಲು, ತೆಗೆದು ಹಾಕಲು, ಸೂಕ್ತ ಕಾರಣಗಳನ್ನು ನೀಡಿದ್ದಲ್ಲಿ ಮಾತ್ರ ಅಂತಹ ಮನವಿಗಳನ್ನು ಪರಿಗಣಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ತಿಳಿಸಿದ್ದಾರೆ.
ಇ- ಆಡಳಿತ ವಿಭಾಗದ ಸಹಯೋಗದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರು ಸೆ.19 ರಂದು ಖಾಲಿ ಹುದ್ದೆಗಳ ಮಾಹಿತಿ ಮತ್ತು ಕೌನ್ಸೆಲಿಂಗ್ ಅರ್ಹ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟಣೆಯನ್ನು ಪ್ರಕಟಿಸಬೇಕು.

ಸೆ.21 ಮತ್ತು 22ರಂದು ಉಳಿಕೆ ಖಾಳಿ ಇರುವ ಹುದ್ದೆಗಳ ಒಳಬರುವ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಸಬೇಕು. ಸೆ.23ರಂದು ಆಯಾ ಜಿಲ್ಲಾ ಉಪನಿರ್ದೇಶಕರು ರಾಜ್ಯ ಕಚೇರಿಗೆ ಕೌನ್ಸೆಲಿಂಗ್ ಮಾಡಿರುವ ಬಗ್ಗೆ ವರದಿ ನೀಡಬೇಕೆಂದು ಸೂಚನೆ ನೀಡಲಾಗಿದೆ.
