ನಿತ್ಯಭವಿಷ್ಯ : 19-09-2020

0

ಮೇಷರಾಶಿ
ವ್ಯವಸಾಯದಲ್ಲಿ ಉತ್ತಮ ಅಭಿವೃದ್ಧಿಯು ಕಂಡು ಬಂದೀತು. ತುಂಬು ಕುಟುಂಬದಲ್ಲಿ ಅಣ್ಣ ತಮ್ಮಂದಿರೊಳೆಗೆ ಭಿನ್ನಾಭಿಪ್ರಾಯ ಕಂಡು ಬಂದೀತು. ಸಾಲದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೋರೋಗಗಳು ಬಾಧಿಸುವುದು, ಕುಲದೇವರ ಭೇಟಿಯ ಕುರಿತು ಪ್ರಯಾಣವು ಕಂಡು ಬಂದೀತು.

ವೃಷಭರಾಶಿ
ಆಧುನೀಕರಣದ ಹುಚ್ಚಿಗೆ ಬಲಿಬೀಳದಿರಿ. ಮನೆಯ ವಾಸ್ತು ಎಂದೆಲ್ಲಾ ಕಂಡಕಂಡಲ್ಲಿ ಕೆಡವಿ ಬಿಟ್ಟಿàರಾ ಜೋಕೆ. ಸಾಲದ ಸಹಾಯ ಲಭಿಸುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುರ್ನಡತೆ ದುಶ್ಚಟಗಳಿಗೆ ಬಲಿಯಾಗುವಿರಿ. ಆರ್ಥಿಕವಾಗಿ ಮೊದಲೆ ಖರ್ಚುಗಳು ಕಂಡು ಬಂದಾವು. ಆರೋಗ್ಯದ ಕುರಿತು ವೈದರೊಡನೆ ಸಮಾಲೋಚಿಸಿರಿ.

ಮಿಥುನರಾಶಿ
ಕಾರ್ಮಿಕ ವೃತ್ತಿಯವರಿಗೆ ವೃತ್ತಿಯಲ್ಲಿ ಏಳಿಗೆ ಕಂಡು ಬಂದು ಸಮಾಧಾನ ತಂದೀತು. ಸ್ವಜನರಿಂದಲೇ ನಿಮಗೆ ಕಿರಿಕಿರಿ ಕಂಡು ಬರಲಿದೆ. ಸಂಬಂಧಗಳಿಂದ ನೋವು, ಮಾಟ ಮಂತ್ರ ತಂತ್ರದ ಆತಂಕ, ಹೆಣ್ಣು ಮಕ್ಕಳಿಂದ ಧನಾಗಮನ. ತಾಳ್ಮೆಯಿಂದ, ಉಪಾಯವಾಗಿ ಆಲೋಚಿಸಿ ಪರಿಹಾರ ಕಂಡು ಹಿಡಿಯುವುದು.

ಕಟಕರಾಶಿ
ಶೀತ, ಕಫ‌ ಬಾಧೆಯಿಂದ ನರಳುವಿರಿ. ಸ್ನೇಹಿತರೊಂದಿಗೆ ಸುಮ್ಮನೆ ಮಾತಿಗೆ ಮಾತು ಬೆಳೆದು ನಿಷ್ಠುರ ಕಂಡು ಬಂದೀತು. ಜೋಕೆ. ಊಹಾಪೋಹದ ಮಾತುಗಳಿಂದ ನೋವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ದೂರಾಲೋಚನೆ. ಹಿರಿಯರಿಗೆ ಅವರ ಅಭಿಪ್ರಾಯಕ್ಕೆ ಮುನ್ನಣೆ ನೀಡಿರಿ. ಮುಂದಿನ ಅಭಿವೃದ್ಧಿ ಪೂರಕವಾಗಲಿದೆ.

ಸಿಂಹರಾಶಿ
ಮನಸ್ಸಿನ ಉದ್ವೇಗ ಹಾಗೂ ತಳಮಳಗಳನ್ನು ಹತ್ತಿಕ್ಕಿರಿ. ಅನಗತ್ಯ ತಿರುಗಾಟಕ್ಕಾಗಿ ಅಧಿಕ ಖರ್ಚು, ಅಧಿಕ ನಷ್ಟ, ಕುಟುಂಬದಲ್ಲಿ ಆತಂಕದ ವಾತಾವರಣ. ಎಲ್ಲವೂ ಸರಿಯಾಗುವುದು ಎಂಬ ಧನಾತ್ಮಕ ಚಿಂತೆಯೊಂದಿಗೆ ಧೈರ್ಯದಿಂದಿರಿ. ಪತ್ನಿ, ಮಕ್ಕಳಿಂದ ಸಮಾಧಾನ ಹಾಗೂ ಧೈರ್ಯವು ಲಭಿಸಲಿದೆ. ಶುಭವಿದೆ.

ಕನ್ಯಾರಾಶಿ
ಒಡವೆ ವಸ್ತ್ರ ಖರೀದಿಗೆ ಅಧಿಕ ಖರ್ಚು, ಅಧಿಕ ಧನಾಗಮನ, ಸಹೋದರಿಯಿಂದ ಆರ್ಥಿಕ ಸಹಾಯ. ಭಡ್ತಿ ಸಿಗಲಿದೆ ಎಂದು ತುಂಬಾ ಹರುಷವಾದೀತು. ಸಂತೋಷ ಅನುಭವಿಸುವಿರಿ. ಕೆಟ್ಟ ಜನರ ಸಂಸರ್ಗದಿಂದ ದೂರವಿದ್ದಷ್ಟು ನಿಮಗೆ ಒಳ್ಳೆಯದು. ಅತೀ ಗೆಳೆತನ ಜೀವನವನ್ನು ಹಾಳು ಮಾಡೀತು. ಜಾಗ್ರತೆ ಇರಲಿ.

ತುಲಾರಾಶಿ
ಆರ್ಥಿಕ ರಂಗದಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಉದ್ಯೋಗ ಲಾಭ, ಕನಸಿನಲ್ಲಿ ಸರ್ಪಗಳು ಗೋಚರಿಸುತ್ತವೆ, ಮಿತ್ರರು ಭೇಟಿಯಾಗುವರು. ಗೃಹೋಪಕರಣಗಳ ಖರೀದಿಗಾಗಿ ಹತ್ತು ಹಲವು ಖರ್ಚು ಬಂದೊದಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ನೆಂಟರಿಷ್ಟರ ಆಗಮನದಿಂದ ಸಂತಸ.

ವೃಶ್ಚಿಕರಾಶಿ
ವೃತ್ತಿಯಲ್ಲಿ ಹೆಚ್ಚಿಗೆ ಏರುಪೇರು ಕಾಣಿಸದು. ದಿನಸು ವ್ಯಾಪಾರದವರಿಗೆ ಸ್ವಲ್ಪ ಅಭಿವೃದ್ಧಿ ಇದ್ದೀತು. ಧಾರ್ಮಿಕ ಆಚರಣೆಗಾಗಿ ಅಧಿಕ ಖರ್ಚು, ಆಸೆ ಆಕಾಂಕ್ಷೆಗಳಿಗೆ ಬಲಿ, ಪಾಲುದಾರಿಕೆಯಲ್ಲಿ ನಷ್ಟ ನೆಂಟರಿಷ್ಟರು ಬಂದು ಸಮಯವನ್ನು ಸಂತಸದಿಂದ ಕಳೆಯುವಿರಿ. ದಿನಾಂತ್ಯದಲ್ಲಿ ಶುಭವಾರ್ತೆ ಶ್ರವಣವಿದೆ.

ಧನುರಾಶಿ
ಪತ್ನಿಯ ವೃತ್ತಿಯ ಕುರಿತು ತುಂಬಾ ಚಿಂತಿಸುವಿರಿ. ಆಕಸ್ಮಿಕವಾಗಿ ಲಾಭ, ಮಾನ ಸನ್ಮಾನಗಳು, ಆಕಸ್ಮಿಕ ಅವಘಡಗಳಿಂದ ತೊಂದರೆ, ಸಾಲದ ಚಿಂತೆ. ಸ್ವಲ್ಪ ಕಾಲದ ನಂತರ ಸಿಕ್ಕಿದ ಉದ್ಯೋಗದಲ್ಲಿ ನೀವು ತೃಪ್ತಿ ಪಡಬೇಕಾದೀತು. ಸಮಯವು ಒಂದೇ ತರ ಇರುವುದಿಲ್ಲಾ. ಸದ್ಯದಲ್ಲೇ ಉತ್ತಮ ಅಭಿವೃದ್ಧಿ ಕಂಡು ಬಂದೀತು.

ಮಕರರಾಶಿ
ದಾಂಪತ್ಯದಲ್ಲಿ ಸಂಶಯಗಳು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಸೆಗಳಿಂದ ತೊಂದರೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ. ಮಿತ್ರರಿಂದ ಹಣಕ್ಕಾಗಿ ಕರೆ ಬಂದೀತು. ಜಾಗ್ರತೆಯಾಗಿರಿ. ಕೊಟ್ಟ ಸಾಲ ಮರಳಿ ಬಾರದೆ ಅದಕ್ಕಾಗಿ ಪೇಚಾಟ ಕಂಡು ಬಂದೀತು. ನಿಮ್ಮ ಸಮಯವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿರಿ.

ಕುಂಭರಾಶಿ
ಎಲ್ಲಾ ರೀತಿಯಲ್ಲಿ ಸಮಾಧಾನ, ಸಂತಸ ನಿಮಗಿದೆ. ಪತ್ನಿಯ ಆರೋಗ್ಯದಲ್ಲಿ ಒಳ್ಳೆಯ ಸುಧಾರಣೆ ಇದೆ. ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮೋಸಕ್ಕೊಳಗಾಗುವಿರಿ, ಆಸ್ತಿ ವಿಚಾರವಾಗಿ ಕೋರ್ಟಿಗೆ ಅಲೆದಾಟ, ಮನೆ ಮಂದಿ ಒಟ್ಟುಗೂಡಿ ಸಂಭ್ರಮಿಸುವಿರಿ. ದಿನಾಂತ್ಯದಲ್ಲಿ ಒಂದು ಸುತ್ತು ಪ್ರಯಾಣವು ಕಂಡು ಬರಲಿದೆ.

ಮೀನರಾಶಿ
ರಾಜಕೀಯದವರಿಗೆ ಒಳ್ಳೆಯ ಕಾಲವಿದು. ಖರ್ಚುನಲ್ಲಿ ನಿಗಾ ಇರಲಿ. ಮಕ್ಕಳಿಂದ ಅವಘಡಗಳು, ಹವಾಮಾನ ವ್ಯತ್ಯಾಸ ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಮಿಕರ ಕೊರತೆ ಬಗೆಹರಿಯುವುದು, ಬಂಧುಮಿತ್ರರು ನಿಮ್ಮನ್ನು ಹೊಗಳಿ ಅಟ್ಟಕ್ಕೆ ಏರಿಸಿಯಾರು. ಉಬ್ಬದಿರಿ. ಎಲ್ಲರೊಂದಿಗೆ ಜಾಗ್ರತೆಯಿಂದ ಇರಿ. ದಿನಾಂತ್ಯದಲ್ಲಿ ಶುಭವಿದೆ.

Leave A Reply

Your email address will not be published.