ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಶಾಲಾರಂಭಗೊಂಡಿದ್ದು, ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ನಡುವಲ್ಲೇ ಇಡೀ ದಿನ ಶಾಲೆಗನ್ನು ತೆರೆಯಲು ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಶಿಕ್ಷಣ ಸಚಿವರು ಈ ಕುರಿತು ಮೌಖಿಕ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸದ್ಯ 6 ರಿಂದ 12ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದೆ. ಕಡ್ಡಾಯ ಹಾಜರಾತಿಯಿಂದ ವಿನಾಯಿತಿಯನ್ನು ನೀಡಿದ್ದರೂ ಕೂಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಇದೀಗ ಪಾಳಿ ಪದ್ದತಿಯಲ್ಲಿ ತರಗತಿಗಳು ನಡೆಯುತ್ತಿದ್ದು, ಇಡೀ ದಿನ ತರಗತಿಯನ್ನು ನಡೆಸಲು ಇಲಾಖೆ ಮುಂದಾಗಿದೆ. ಅದರೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಡೀ ದಿನ ಶಾಲೆಯಲ್ಲಿ ಇರಬೇಕೆಂದು ನಿಯಮವಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಇನ್ನೊಂದೆಡೆ ಶಾಲಾರಂಭದ ಬೆನ್ನಲ್ಲೇ ಕೊರೊನಾ ಸೋಂಕು ಏರಿಕೆಯಾಗದ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿ ಪ್ರಾರಂಭಿಸುವ ಕುರಿತು ಚಿಂತನೆ ನಡೆದಿದೆ.
1 ರಿಂದ 5 ನೇ ತರಗತಿ ಪ್ರಾರಂಭಿಸುವ ಕುರಿತು ದಸರಾ ಕಳೆಯುತ್ತಿದ್ದಂತೆ ಸರಕಾರದಿಂದ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆಗಳಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಕೋವಿಡ್ ತಾಂತ್ರಿಕ ಸಮಿತಿಯ ಜೊತೆಗೆ ಸಭೆಯನ್ನು ನಡೆಸಲಿದ್ದಾರೆ. ನಂತರದಲ್ಲಿ ಪರಿಷ್ಕೃತವಾದ ಆದೇಶ ಹೊರಬೀಳುವ ಸಾಧ್ಯತೆಯಿದೆ.ದಸರಾ ನಂತರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ ಅಂದಿದ್ದಾರೆ. ಜೊತೆಗೆ 6 ರಿಂದ 12ನೇ ತರಗತಿತನಕ ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿ ನಡೆಸುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : UGC- NET : ಯುಜಿಸಿ ನೆಟ್ ಪರೀಕ್ಷೆ ಮರು ನಿಗದಿ : ದಿನಾಂಕ ಪ್ರಕಟ
ಹಾಗಂತ ಕಡ್ಡಾಯವಾಗಿ ವಿದ್ಯಾರ್ಥಿ ತರಗತಿಗೆ ಹಾಜರಾಗಬೇಕು ಎಂದು ಬಲವಂತ ಮಾಡಬಾರದು ಎಂದು ಸೂಚಿಸಿರುವ ಸಚಿವರು ಹಲವು ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಈ ಪ್ರಮಾಣ ಶೂನ್ಯಕ್ಕೆ ಬಂದಿದೆ. ಹೀಗಾಗಿ ತರಗತಿ ನಡೆಸಲು ತೊಂದರೆ ಇಲ್ಲ ಅಂದಿದ್ದಾರೆ.
ಇದನ್ನೂ ಓದಿ : ಪೋಷಕರಿಗೆ ಗುಡ್ ನ್ಯೂಸ್ ಕೊಡಲಿದೆ ರಾಜ್ಯ ಸರ್ಕಾರ : ಶೇ.30ರಷ್ಟು ಶಾಲಾ ಶುಲ್ಕ ವಿನಾಯ್ತಿ !
( 6th-12th Std Full Day Class: Beginning 1-5th class after Dussehra )