Scary tourist spots : ಭಾರತದ ಮೊಸ್ಟ್‌ ವಾಂಟೆಡ್‌ ಭಯಾನಕ ತಾಣಗಳು ಯಾವುದೆಂದು ಗೊತ್ತಾ

ಪ್ರಪಂಚದಲ್ಲಿ ಹಲವು ಸುಂದರ ಪ್ರವಾಸಿ ತಾಣಗಳ ಜೊತೆಗೆ ಭಯಾನಕ ಜಾಗಗಳು ಇದ್ದಾವೆ. 21 ಶತಮಾನದಲ್ಲೂ ಜನರು ಅಂತ ಜಾಗಗಳಿಗೆ ಹೊಗಲು ಭಯಪಡುತ್ತಾರೆ. ಇಂತ ಭಯಾನಕ ಜಾಗಗಳ ಬಗ್ಗೆ ತಿಳಿದುಕೊಳ್ಳೊಣ. ಭೂತ, ಪಿಶಾಚಿಗಳನ್ನುಕೆಲವರು ನಂಬುವುದಿಲ್ಲ, ಇನ್ನೂ ಕೆಲವರು ನಂಬುತ್ತಾರೆ. ಆದ್ರೆ ಪ್ರಪಂಚದಲ್ಲಿ ಗೋಚರ ಶಕ್ತಿಗಳೇ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಭಾರತದಲ್ಲಿ ಅಗೋಚರ ಶಕ್ತಿಗಳ ಗೂಡಾಗಿರುವ 7 ಸ್ಥಳಗಳ ವಿವರ ಇಲ್ಲಿದೆ.

ಜೈಸಲ್ಮೇರ್‌ನ ಕುಲಧಾರ ಗ್ರಾಮ : ಒಂದು ಕಾಲದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಿಂದ 18 ಕಿಮೀ ದೂರದಲ್ಲಿರುವ ಕುಲ್ದಾರ ಗ್ರಾಮದಲ್ಲಿ 600 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಇದು ಕಳೆದ ಇನ್ನೂರು ವರ್ಷಗಳಿಂದ ಪಾಳುಬಿದ್ದಿದೆ. ಮಾಹಿತಿಯ ಪ್ರಕಾರ, 1825 ರಿಂದ ಈ ಗ್ರಾಮದಲ್ಲಿ ಯಾರೂ ವಾಸಿಸುತ್ತಿಲ್ಲ. ಇಲ್ಲಿನ ನಿವಾಸಿಗಳು ರಾತ್ರೋರಾತ್ರಿ ಗ್ರಾಮವನ್ನು ಬಿಟ್ಟು ಹೋಗಿದ್ದಾರೆ. ಅಲ್ಲದೇ ಇಲ್ಲಿ ಹಲವು ಜನರು ಈಗಲೂ ಭೂತ ಚೇಸ್ಟೆಯನ್ನು ಕಣ್ಣಾರೆ ಕಂಡವರು ಇದ್ದಾರೆ.

ಇದನ್ನೂ ಓದಿ: ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

ಡಾರ್ಜಿಲಿಂಗ್‌ನ ಡೌ ಹಿಲ್ ಕುರ್ಸಿಯಾಂಗ್ : ಪ್ರಾಕೃತಿಕ ಸೌಂದರ್ಯದ ಹೊರತಾಗಿ, ಡಾರ್ಜಿಲಿಂಗ್‌ನ ಡೌ ಹಿಲ್ ಕುರ್ಸಿಯಾಂಗ್ ಪ್ರದೇಶವು ವಿಚಿತ್ರ ಅನುಭವಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಮರವನ್ನು ಕಡಿಯಲು ಹೋಗುವ ಜನರು ಕಾಡಿನಲ್ಲಿ ತಲೆ ಇಲ್ಲದ ಹುಡುಗನನ್ನು ನೋಡಿದ್ದೇವೆ ಎಂದು ಹೇಳುತ್ತಾರೆ.

ಬ್ರಿಜರಾಜ್ ಭವನ ಅರಮನೆ, ರಾಜಸ್ಥಾನ : ರಾಜಸ್ಥಾನದ ಕೋಟದಲ್ಲಿರುವ ಬ್ರಿಜ್ ರಾಜ್ ಭವನ ಅರಮನೆಯು ಸುಮಾರು 180 ವರ್ಷಗಳಷ್ಟು ಹಳೆಯದಾಗಿದೆ. ಇದನ್ನು 1980 ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು. 1857 ರಲ್ಲಿ ಭಾರತೀಯ ಸೈನಿಕರಿಂದ ಕೊಲ್ಲಲ್ಪಟ್ಟ ಹೋಟೆಲ್‌ನಲ್ಲಿ ಬ್ರಿಟಿಷ್ ಮೇಜರ್ ಬರ್ಟನ್ ಅವರ ಭೂತ ವಾಸಿಸುತ್ತಿದೆ ಎಂದು ಇಲ್ಲಿನ ಜನರು ಹೇಳುತ್ತಾರೆ.

ರಾಜಸ್ಥಾನದ ಭಾನಗಢ ಕೋಟೆ : ರಾಜಸ್ಥಾನದ ಅಲ್ವಾರ್ ನಲ್ಲಿರುವ ಭಂಗರ್ ಕೋಟೆ ವಿಶ್ವದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು. ಈ ಕೋಟೆಯನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಸಂಜೆಯ ಸೂರ್ಯಾಸ್ತದ ನಂತರ ಕೋಟೆಗೆ ಜನರ ಪ್ರವೇಶವಿಲ್ಲ. ಇದಕ್ಕೆ ಕಾರಣ ಅಲ್ಲಿರುವ ಪ್ರೇತವಂತೆ.

ಪುಣೆಯ ಶನಿವಾರವಾಡ : ಪುಣೆಯ ಶನಿವಾರವಾಡ ಕೋಟೆ ಹಾಗೂ ಬಾಜಿರಾವ್ ಪೇಶ್ವೆಗೆ ಒಂದು ಕನೆಕ್ಷನ್ ಇದೆ. ಇದು ಭಾರತದ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದು. ಯಾವಾಗಲೂ ಪ್ರವಾಸಿಗರಿಂದ ತುಂಬಿರೋ ಈ ಕೋಟೆಯಲ್ಲಿ ಪ್ರೇತಗಳು ಕಾಣಿಸಿಕೊಂಡಿವೆ ಅಂತ ಹೇಳಲಾಗುತ್ತೆ. ಇದೇ ಕಾರಣಕ್ಕೆ ಸೂರ್ಯಾಸ್ತದ ನಂತರ ಇಲ್ಲಿ ಯಾರಿಗೂ ಪ್ರವೇಶ ಇಲ್ಲ.

ಇದನ್ನೂ ಓದಿ: ಕೈಲಾಸ ಪರ್ವತವನ್ನೇರಿದ್ರೆ ಹೆಚ್ಚುತ್ತಂತೆ ವಯಸ್ಸು : ಕೈಲಾಸ ರಹಸ್ಯ ನಿಮಗೆ ಗೊತ್ತಾ

ಹೈದರಾಬಾದ್‌ನ ಗೋಲ್ಕೊಂಡ ಕೋಟೆ : ಈ ಗೋಲ್ಕೊಂಡ ಕೋಟೆಯನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ರಾಣಿ ತಾರಾಮತಿಯ ಆತ್ಮವು ಈ ಕೋಟೆಯಲ್ಲಿ ನೆಲೆಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ರಾಣಿ ತಾರಾಮತಿಯ ಮರಣದ ನಂತರ ಆಕೆಯ ಪತಿಯೊಂದಿಗೆ, ಇದೇ ಕೋಟೆಯಲ್ಲಿ ಸಮಾಧಿ ಮಾಡಲಾಗಿದೆ. ರಾಣಿಯು ಇಲ್ಲಿ ನಡೆಯುತ್ತಾ ನೃತ್ಯ ಮಾಡುವ ಶಬ್ದವು ರಾತ್ರಿಯಲ್ಲಿ ಕೇಳಿಸುತ್ತೆ ಎಂದು ಹೇಳಲಾಗುತ್ತೆ.

(Do you know India’s Most Wanted Horror Sites?)

Comments are closed.