ನವದೆಹಲಿ : ಮುಂದೂಡಲಾಗಿದ್ದ ಯುಜಿಸಿ ನೀಟ್ (National Eligibility Test ) ಪರೀಕ್ಷೆಯನ್ನು ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ. ಯೂನಿವರ್ಸಿಟಿ ಗ್ರಾಂಟ್ ಕಮಿಷನ್-ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (UGC-NET) ದಿನಾಂಕವನ್ನು ಘೋಷಣೆಯನ್ನು ಮಾಡಿದ್ದು, ಅಕ್ಟೋಬರ್ 17 ರಿಂದ 25 ರವರೆಗೆ ನಡೆಯಲಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ ನೀಟ್ ಪರೀಕ್ಷೆಯನ್ನು ನಡೆಸುತ್ತದೆ. ಈ ಹಿಂದೆ ಪ್ರಸಕ್ತ ಸಾಲಿನ ಯುಜಿಸಿ ನೀಟ್ ಪರೀಕ್ಷೆಗಳನ್ನುಈ ಹಿಂದೆ 6 ರಿಂದ 8 ಅಕ್ಟೋಬರ್ ಮತ್ತು 17 ರಿಂದ 19 ಅಕ್ಟೋಬರ್ 2021 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇತರ ಪರೀಕ್ಷೆಗಳ ದಿನಾಂಕ ಘರ್ಷಣೆಯ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಆದ್ರೆ ಇದೀಗ ಯುಜಿಸಿ ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಅಧಿಕೃತ ಸೂಚನೆ ಮತ್ತು ಪರಿಷ್ಕೃತ ವೇಳಾಪಟ್ಟಿ ಯನ್ನು ಯುಜಿಸಿ-ನೆಟ್ ನ ಅಧಿಕೃತ ವೆಬ್ ಸೈಟ್: ugcnet.nta.nic.in ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ : ಕನ್ನಡ ಮಾಧ್ಯಮದಲ್ಲಿ ಕಲಿಯ ಬಹುದು ಇಂಜಿನಿಯರಿಂಗ್ ಶಿಕ್ಷಣ
ಇದನ್ನೂ ಓದಿ : ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
( UGC NET exam rescheduled, New exam date announced )