UK travel rule row: ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ : ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ, 10 ದಿನ ಕ್ವಾರಂಟೈನ್‌

ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಕಡಿಮೆಯಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಮೂರನೇ ಅಲೆಯ ಭೀತಿ ಭಾರತವನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ವಿದೇಶದಿಂದ ಭಾರತಕ್ಕೆ ಬರುವವರ ಮೇಲೆ ಹದ್ದಿನಕಣ್ಣಿಟ್ಟಿದೆ. ಇದೀಗ ಯುಕೆಯಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಿದ್ದು, ವಿಮಾನ ಪ್ರಯಾಣಕ್ಕೆ ಕೊರನಾ ನೆಗೆಟಿವ್‌ ವರದಿ ಕಡ್ಡಾಯವೆಂದಿದೆ. ಅಲ್ಲದೇ ಹತ್ತು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸುವಂತೆ ಸೂಚಿಸಿದೆ.

ಯುಕೆಯಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗೆಟವ್‌ ( RTPCR TEST) ವರದಿಯನ್ನು ಕಡ್ಡಾಯವಾಗಿ ಹೊಂದಿರಲೇ ಬೇಕು. ಅಲ್ಲದೇ ಭಾರತಕ್ಕೆ ಬಂದ ನಂತರದಲ್ಲಿ ಪ್ರಯಾಣಿಕರು ಕನಿಷ್ಠ 10 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ ನಿಯಮವನ್ನು ಪಾಲಿಸಲೇ ಬೇಕಾಗಿದೆ.

ಕೋವಿಶೀಲ್ಡ್ ಲಸಿಕೆಯನ್ನು ಕಾನೂನುಬದ್ಧವಾದ ಕೋವಿಡ್ ವಿರೋಧಿ ಲಸಿಕೆಯೆಂದು ಗುರುತಿಸಲು ಭಾರತ ಯುಕೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಕೆಲವು ದಿನಗಳ ನಂತರ ಕೇಂದ್ರ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಅಕ್ಟೋಬರ್‌ 4 ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತಿದ್ದು, ಯುಕೆ ಯಿಂದ ಬರುವ ಎಲ್ಲಾ ಯುಕೆ ಪ್ರಜೆಗಳಿಗೆ ಇದು ಅನ್ವಯವಾಗಲಿದೆ.

ಇದನ್ನೂ ಓದಿ : ಮಕ್ಕಳ ಮೇಲೆ ಲಸಿಕೆ ಪ್ರಯೋಗ : ಸೀರಮ್‌ ಸಂಸ್ಥೆಗೆ ಸರಕಾರದ ಅನುಮತಿ

ಹೊಸ ಮಾರ್ಗಸೂಚಿಯಲ್ಲಿ ಏನಿದೆ ?

ಅಕ್ಟೋಬರ್ 4 ರಿಂದ, ಯುಕೆ ಯಿಂದ ಭಾರತಕ್ಕೆ ಬರುವ ಎಲ್ಲಾ ಯುಕೆ ಪ್ರಜೆಗಳು, ಅವರ ಲಸಿಕೆ ಸ್ಥಿತಿಯನ್ನು ಲೆಕ್ಕಿಸದೆ, ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ :
ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕೋವಿಡ್ -19 ಆರ್‌ಟಿ-ಪಿಆರ್‌ಸಿ ಪರೀಕ್ಷೆಗೆ ಮುಂಚಿತವಾಗಿ ಮಾಡಿಸಿಕೊಂಡಿರಬೇಕು. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಕೋವಿಡ್ -19 ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ಭಾರತಕ್ಕೆ ಅಗಮಿಸಿದ ನಂತರ 8 ನೇ ದಿನದಂದು ಮತ್ತೆ ಕೋವಿಡ್ -19 ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಭಾರತಕ್ಕೆ ಬಂದ ನಂತರ 10 ದಿನಗಳವರೆಗೆ ಮನೆಯಲ್ಲಿ , ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಮಕ್ಕಳಿಗೆ ವ್ಯಾಕ್ಸಿನ್‌ : ಶಾಲೆಗಳಲ್ಲಿ ತುಂಬಾ ಎಚ್ಚರಿಕೆ ಅಗತ್ಯ : ಆರೋಗ್ಯ ಸಚಿವ ಸುಧಾಕರ್‌

( In counter measure, India makes quarantine must for UK citizens )

Comments are closed.