- ವಂದನಾ ಕೊಮ್ಮಂಜೆ
ಕೊರೊನಾ ವೈರಸ್ ಕಾಣಿಸಿಕೊಂಡ ನಂತರವಂತೂ ಭಯದ ಜೊತೆಯಲ್ಲಿ ನಮ್ಮ ಬದುಕುವ ರೀತಿಯನ್ನೇ ಬದಲಾಯಿಸಿದೆ ಅಲ್ವಾ? ದಿನಾ ಆಫೀಸ್ ಗೆ ಹೋಗೋರು ಮನೆಯಲ್ಲೇ ಕುಳಿತುಕೊಂಡು ಕೆಲಸ ಮಾಡ್ತಿದ್ದಾರೆ. ಅನಿವಾರ್ಯವಾಗಿ ಮಾಸ್ಕ್, ಸಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿಸಿಕೊಳ್ಳುತ್ತಿದ್ದಾರೆ. ಈ ಕಷ್ಟ ಮಕ್ಕಳಿಗೂ ತಪ್ಪಿಲ್ಲ.

ಆನ್ ಲೈನ್ ಕ್ಲಾಸ್ ಗಳು ಈಗಾಗಲೇ ಸ್ಟಾರ್ಟ್ ಆಗಿದೆ. ಸ್ಕೂಲ್ ನವರಿಗೆ ಸಿಲೆಬಸ್ ಮುಗಿಸುವ ಧಾವಂತ. ಆದ್ರೆ ಮಕ್ಕಳನ್ನು ಮೊಬೈಲ್ ಲಾಪ್ ಟಾಪ್ ಮುಂದೆ ನಿಲ್ಲಿಸೋದೆ ದೊಡ್ಡ ಕೆಲಸ. ಅದು ತಂದೆ ತಾಯಿ ಕೆಲಸದಲ್ಲಿದ್ರಂತು ಹೇಳೋದೇ ಬೇಡ ಅದರ ಕಷ್ಟ. ತಮ್ಮ ಕೆಲಸನೂ ಆಗ್ಬೇಕು ಮಕ್ಕಳ ಸ್ಕೂಲ್ ವರ್ಕ್ ಕೂಡಾ ಆಗ ಬೇಕು. ಆದ್ರೆ ಇಲ್ಲೊಬ್ಬ ತಂದೆ ಮಾಡಿರೋ ಐಡಿಯಾ ನೋಡಿದ್ರೆ ನೀವೂ ಅದನ್ನೇ ಫೋಲೋ ಮಾಡ್ತಿರಿ.
ಮಕ್ಕಳಿಗೆ ಮನೆಯಲ್ಲಿ ಕಲಿಸೋದೆ ಕಷ್ಟ. ಶಾಲೆಯ ವಾತಾವರಣದಲ್ಲಿ ಇದ್ರೆ ಮಕ್ಕಳು ಅಟೋಮೆಟಿಕ್ ಆಗಿ ಕಲಿತಾರೆ. ಆದ್ರೆ ಇಂತಹ ಪರಿಸ್ಥಿತಿಯಲ್ಲಿ ಅದನ್ನೆಲ್ಲಾ ಮಾಡೋಕೆ ಆಗುತ್ತಾ ಹೇಳಿ. ಇಲ್ಲ ಅಂತ ಹೇಳ್ತಿರಾ ಅಂತಗೊತ್ತು. ಆದ್ರೆ ಇಲ್ಲೊಬ್ಬ ತಂದೆ ಶಾಲೆಯನ್ನೇ ಮನೆಗೆ ತಂದಿದ್ದಾನೆ. ಅಯ್ಯೋ ಹೇಗಪ್ಪ ಅಂತ ಗಾಬರಿಯಾಗಬೇಡಿ. ಅಂದರೆ ಸ್ಕೂಲ್ ವಾತಾವರಣನ ಮನೆಯಲ್ಲಿ ಕ್ರಿಯೇಟ್ ಮಾಡಿದ್ದಾನೆ. ತನ್ನ ಪುಟ್ಟ ಮಗಳಿಗಾಗಿ ತನ್ನ ಗ್ಯಾರೇಜನ್ನು ಸ್ಕೂಲ್ ಆಗಿ ಬದಲಿಸಿದ್ದಾನೆ.

ಗ್ಯಾರೇಜನ್ನು ಸ್ಕೂಲ್ ತರಹ ಕಾಣಿಸೋಕೆ ಅಂತ ಸ್ಕೂಲ್ ನಲ್ಲಿ ಕಾಣುವ ಬ್ಯಾಕ್ ಬೋರ್ಡ್, ಸ್ಕೂಲ್ ಬೆಂಚ್ , ಟೈಮ್ ಟೇಬಲ್ ಹಾಗೂ ಉಳಿದ ವಸ್ತುಗಳನ್ನು ತರಿಸಿ ಗ್ಯಾರೇಜ್ ನಲ್ಲಿ ಸೆಟ್ ಮಾಡಿದ್ದಾನೆ. ಇಷ್ಟು ಮಾತ್ರ ಅಲ್ಲ ಟೀಚರ್ ಕೂಡಾ ಗ್ಯಾರೇಜ್ ನಲ್ಲಿ ಇರುವ ರೀತಿ ಫೀಲ್ ಮಾಡೋ ತರಹ ಮಾಡಿದ್ದಾನೆ ಈತ.

ಅದ್ಹೇಂಗೆ ಅಂತಾ ಆಶ್ಚರ್ಯ ಪಡಬೇಡಿ. ಟೀಚರ್ ಚಿತ್ರವಿರುವ ಕಾರ್ಡ್ ಬೋರ್ಡ್ ಬಳಸಿ ಈತ ಅದರ ಮುಖಕ್ಕೆ ಐ ಪ್ಯಾಡ್ ಫಿಕ್ಸ್ ಮಾಡಿದ್ದಾನೆ. ಇದನ್ನು ನೋಡಿದ್ರೆ ಯಾರಿಗಾದ್ರೂ ಟೀಚರ್ ನಿಂತಂತೆ ಭಾಸವಾಗುತ್ತೆ. ಇದೀಗ ಈ ವಿಡಿಯೋವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು. ಎಲ್ಲೆಡೆ ವೈರಲ್ ಆಗ್ತಿದೆ.

ಮಕ್ಕಳಿಗೆ ಕಲಿಸೋಕೆ ಕ್ರಿಯೇಟಿವಿಟಿ ಬೇಕು ಅಂತಾರೆ. ಆದ್ರೆ ಮಗಳಿಗೋಸ್ಕರ ತನ್ನ ಕ್ರಿಯೇಟಿವಿಟಿನೇ ಬಳಸಿದ್ದಾನೆ. ನೀವೂ ಕೂಡಾ ಈ ರೀತಿ ಮಾಡಿ ಮಕ್ಕಳನ್ನೂ ಸ್ಕೂಲ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಸದ್ಯದ ಪರಿಸ್ಥಿತಿಯಲ್ಲಿ ಇದೇ ಸೇಫ್ ಅಲ್ವಾ?