ಭಾನುವಾರ, ಏಪ್ರಿಲ್ 27, 2025
Homeeducationschool bag weight : ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ...

school bag weight : ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

- Advertisement -

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಶಾಲಾ ಬ್ಯಾಗ್‌ ತೂಕ (school bag weight) ವಿಪರೀತವಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಮಕ್ಕಳ ವಯಸ್ಸಿಗೂ ಮೀರಿ ಬ್ಯಾಗ್‌ ತೂಕವಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿಯೂ ಬ್ಯಾಗ್‌ ತೂಕ ಇಳಿಸುವಂತೆ ಆಗ್ರಹ ಕೇಳಿಬರುತ್ತಿದೆ. ಈ ನಡುವಲ್ಲೇ ಪ್ರಾಥಮಿಕ ಶಾಲಾ ಮಕ್ಕಳ (school students) ಬ್ಯಾಗ್ ತೂಕ ಇಳಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ (High Court Karnataka) ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ತುಮಕೂರಿನ ವಕೀಲ ಎಲ್.ರಮೇಶ್ ನಾಯ್ಕ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಇನ್ನಷ್ಟೇ ಬರಬೇಕಿದೆ. ರಾಜ್ಯ ಸರಕಾರ ಶಾಲಾ ಆಡಳಿತ, ಶಿಕ್ಷಣ ಸುಧಾರಣೆಗೆ ಸಂಬಂಧಿಸಿದಂತೆ ನಿಯಮ ಮತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಆಗಾಗ ಅಧಿಸೂಚನೆಗಳನ್ನು ಹೊರಡಿಸುತ್ತಿವೆ. ಆದರೆ ಮಕ್ಕಳ ಬ್ಯಾಗ್‌ ತೂಕಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮವನ್ನೂ ರೂಪಿಸುತ್ತಿಲ್ಲ. 2006 ರಲ್ಲಿ, ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡಲು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಯಿತು. ಆದರೆ ಅದನ್ನು ಅಲ್ಲಿಯೇ ಕೈ ಬಿಡಲಾಯಿತು.

ಇನ್ನು ಮಕ್ಕಳ ಬ್ಯಾಗ್‌ನ ತೂಕದ ಮಿತಿ ಇಷ್ಟೇ ಇರಬೇಕು ಅನ್ನೋ ಕುರಿತು ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ನೀತಿ 2020 ರಲ್ಲಿ ನಿಯಮವನ್ನು ಹೊರಡಿಸಿದ್ದರೂ ಶಾಲೆಗಳು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪಟ್ಟಣ ಮತ್ತು ನಗರಗಳ ಪ್ರಾಥಮಿಕ ಶಾಲೆಗಳಿಗೆ ಹೋಗುವ ಮಕ್ಕಳು ಪ್ರತಿದಿನ ಶಾಲೆಗೆ ಭಾರವಾದ ಚೀಲಗಳನ್ನು ಹೊತ್ತು ಶಾಲೆಗೆ ತೆರಳುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ಮೇಳೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ರಾಜ್ಯ ಸರಕಾರ ಮಕ್ಕಳ ಬ್ಯಾಗ್‌ ತೂಗ ಇಳಿಕೆ ಮಾಡುವ ಕುರಿತು ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಶಾಲಾ ಮಕ್ಕಳ ಬ್ಯಾಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರು ಶಾಲೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ, ಶಿಕ್ಷಣ ಇಲಾಖೆ ಸಚಿವರಿಗೆ ಈಗಾಗಲೇ ಸಾಕಷ್ಟು ಬಾರಿ ಮನವಿಯನ್ನು ಮಾಡಲಾಗಿದೆ. ಆದರೆ ರಾಜ್ಯ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಮನಸ್ಸು ಮಾಡುತ್ತಿಲ್ಲ. ನಿತ್ಯವೂ ಪುಟಾಣಿ ಮಕ್ಕಳು ಶಾಲಾ ಬ್ಯಾಗ್‌ ಹೊತ್ತು ಶಾಲೆಗೆ ಬರುತ್ತಿದ್ದರೆ, ಕೆಲವೊಮ್ಮೆ ಪೋಷಕರೇ ಮಕ್ಕಳ ಬ್ಯಾಗ್‌ ಶಾಲೆಗ ತರುತ್ತಿದ್ದಾರೆ. ಇನ್ನು ಕೆಲವೊಂದು ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳೇ ಭಾರವಾದ ಬ್ಯಾಗ್‌ ಹೊತ್ತು ಬರಬೇಕು ಅನ್ನೋ ನಿಯಮವೂ ಇದೆ. ಮಕ್ಕಳ ಆರೋಗ್ಯದ ಬಗ್ಗೆ ಸರಕಾರವಾಗಲೀ, ಶಾಲಾ ಆಡಳಿತ ಮಂಡಳಿಯಾಗಲಿ ಗಮನ ಹರಿಸುತ್ತಿಲ್ಲ.

ಇದನ್ನೂ ಓದಿ : Teachers relief fund : ಮತ್ತೊಮ್ಮೆ ಶಿಕ್ಷಕರ ಆಕ್ರೋಶಕ್ಕೆ ಗುರಿಯಾದ ಸಚಿವರು: ಶಿಕ್ಷಕರ ಪರಿಹಾರ ನಿಧಿ ಹಣವೂ RTE ಶುಲ್ಕ ಪಾವತಿಗೆ ಬಳಕೆ

ಇದನ್ನೂ ಓದಿ : ಶಾಲೆಗಳಿಗೆ ದಸರಾ ರಜೆ ಅವಧಿ ಬದಲಾವಣೆ : ಮಹತ್ವದ ಆದೇಶ

Good news school students: PIL in High Court Karnataka to reduce school bag weight

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular