Actor Kiccha Sudeep :ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ನಟ ಕಿಚ್ಚ ಸುದೀಪ್

ಮೈಸೂರು : Actor Kiccha Sudeep : ವಿಶ್ವ ವಿಖ್ಯಾತ ಮೈಸೂರು ಯುವ ದಸರಾ ಮಹೋತ್ಸವ ಅಂಗವಾಗಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮಕ್ಕೆ ಇನ್ನು ನಾಲ್ಕು ದಿನ‌ವಷ್ಟೇ ಬಾಕಿಯಿದೆ. ಸೆಪ್ಟೆಂಬರ್ 27 ರಿಂದ 3 ರವರೆಗೆ ಯುವದಸರಾ ಕಾರ್ಯಕ್ರಮ ನಡೆಯಲಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರತಿ ದಿನ ಸಂಜೆ 6.30 ರಿಂದ 10 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಈ ಯುವ ದಸರಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಯುವ ದಸರಾ ವಿಶೇಷ ಅತಿಥಿಯಾಗಿ ನಟ ಸುದೀಪ್ ಭಾಗಿಯಾಗಲಿದ್ದಾರೆ. ಯುವ ದಸರಾದ ಮೊದಲನೇ ದಿನ ಅಂದ್ರೆ 27 ರಂದು ರಘು ದೀಷಿತ್ ಹಾಗೂ‌ ಮಂಗ್ಲೀ‌ ಕಾರ್ಯಕ್ರಮ ನಡೆಯಲಿದೆ. 28ಕ್ಕೆ ಪುನೀತ್ ರಾಜ್ ಕುಮಾರ್ ನೆನಪಿಗಾಗಿ ಅಪ್ಪು ನಮನ ಕಾರ್ಯಕ್ರಮ ಜರುಗಲಿದೆ. ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ್ ರಿಂದ ಈ ಕಾರ್ಯಕ್ರಮ ಮೂಡಿ‌ಬರಲಿದೆ.
ಇನ್ನು 29ರಂದು ಕನಿಕ ಕಪೂರ್ ಅಸೆಂಟ್ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 30ಕ್ಕೆ ಸ್ಯಾಂಡಲ್ ವುಡ್ ನೈಟ್ ಕಾರ್ಯಕ್ರಮ ನಡೆಯಲಿದ್ದು ಕನ್ನಡ ಚಿತ್ರರಂಗದ ಬಹುತೇಕ ನಟ ನಟಿಯರು ಆಗಮಿಸುವ ಸಾಧ್ಯತೆಯಿದೆ. 1ತಾರೀಖಿನಂದು ಶಮಿತಾ ಮಲ್ನಾಡ್ ಸಂಗೀತ ಕಾರ್ಯಕ್ರಮ ನಡೆಯಲಿದ್ದು, 2‌ರಂದು ಹರ್ಷಿಕಾ ಪೂಣ್ಣಚ್ಚ ಮತ್ತು ವಿಜಯ ರಾಘವೇಂದ್ರ ಭಾಗವಹಿಸಲಿದ್ದಾರೆ. ಅಮಿತ್ ತ್ರಿವೇದಿರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

3ರಂದು 6.30ಕ್ಕೆ ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್ ತಂಡ. ಖ್ಯಾತ ಸುನಿಧಿ ಚೌಹನ್ ರಿಂದ ಕಾರ್ಯಕ್ರಮ ಜರುಗಲಿದೆ‌. ಇನ್ನೊಂದು ಯುವ ದಸರಾ ಕಾರ್ಯಕ್ರಮದ ವಿಶೇಷ ಅಂದ್ರೆ
ನಟ ಸುದೀಪ್ ಯಾವುದೇ ಸಂಭಾವನೆ ಪಡೆಯದೆ ಯುವ ದಸರಾ ಕಾರ್ಯಕ್ಕೆ ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ. ಹೀಗಾಗಿ ಯುವ ದಸರಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ.

ಇನ್ನು ಯುವ ದಸರಾ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಯುವ ಜನರೇ ಹೆಚ್ಚಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಹೆಚ್ಚುವರಿ ಪೊಲೀಸರನ್ನು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಿಯೋಜಿಸುವ ನಿರ್ಧಾರವನ್ನು ಪೊಲೀಸ್ ಇಲಾಖೆ ಮಾಡಿದೆ. ಈ ಬಗ್ಗೆಯೂ ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿ ಆರ್.ಚೇತನ್ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಬೇಕಾದ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : school bag weight : ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಇದನ್ನೂ ಓದಿ : KL Rahul Athiya Shetty: ಪ್ರಿಯಕರನ ಫಿಫ್ಟಿಗೆ ಪ್ರೇಯಸಿಯ ಹೃದಯ ಮುದ್ರೆ; ರಾಹುಲ್ ಅರ್ಧಶತಕವನ್ನುಆಥಿಯಾ ಶೆಟ್ಟಿ ಸಂಭ್ರಮಿಸಿದ್ದು ಹೀಗೆ

Actor Kiccha Sudeep will be the special guest at the Mysore Yuva Dussehra event

Comments are closed.