ಉಡುಪಿ : ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು(hijab controversy) ಆರಂಭಗೊಂಡಿವೆ. ಈಗಾಗಲೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಉಡುಪಿಯಲ್ಲಿ ಮೊದಲು ಹಿಜಾಬ್ ವಿವಾದದ ಕಿಡಿ ಹೊತ್ತಿಸಿದ್ದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಕೂಡ ಪರೀಕ್ಷೆಯನ್ನು ಬರೆಯದೇ ಹಿಜಾಬ್ ಧರಿಸುವ ಬೇಡಿಕೆ ಇಟ್ಟಿದ್ದಾರೆ.
ಬುರ್ಖಾಗಳನ್ನು ತೆಗದಿಡಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಹೋರಟಗಾರ್ತಿ ರೇಷಂ ಇಂದು ಪರೀಕ್ಷೆ ಬರೆಯುವವರಿದ್ದಾರೆ. ಹಿಜಾಬ್ ಕಡ್ಡಾಯಗೊಳಿಸಬೇಕೆಂದು ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಂದು ರೇಷಂ ಹಾಗೂ ಆಲಿಯಾ ಆಸಾದಿಗೆ ಇಂದು ಪರೀಕ್ಷೆ ಇದೆ. ಹಾಲ್ ಟಿಕೆಟ್ ಸಮೇತ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಈ ಇಬ್ಬರೂ ಪರೀಕ್ಷಾ ಕೇಂದ್ರಗಳಲ್ಲಿಯೂ ತಮಗೆ ಹಿಜಾಬ್ ಧಿರಸಲು ಅವಕಾಶ ನೀಡಬೇಕೆಂದು ಕ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.
ಪರೀಕ್ಷೆಗಳು ಆರಂಭವಾಗಿದ್ದರೂ ಈ ಇಬ್ಬರೂ ವಿದ್ಯಾರ್ಥಿನಿಯರು ಪ್ರಾಚಾರ್ಯರ ಕಚೇರಿಯಲ್ಲೇ ಕುಳಿತು ಚರ್ಚೆ ನಡೆಸಿದ್ದಾರೆ. ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಸರ್ಕಾರ ಹೇಳಿದ್ದರೂ ಸಹ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅಲ್ಲೂ ಹಿನ್ನೆಡೆಯಾಗಿತ್ತು.
ಇದನ್ನು ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್
hijab controversy resham alia requests for permission to write exam withhijab