ಚೆನ್ನೈ : ಗುರುಗಳನ್ನು ದೇವರಂತೆ ನೋಡಲಾಗುತ್ತೆ. ವಿದ್ಯೆ ಹೇಳಿ ಕೊಡುವ ಶಿಕ್ಷಕರಿಗೆ ಜೀವನ ಪರ್ಯಂತೆ ವಿಧೇಯರಾಗಿರುತ್ತೇವೆ. ಆದ್ರಲ್ಲಿ ವಿದ್ಯಾರ್ಥಿಗಳು ಅಂಧ ಶಿಕ್ಷಕರೋರ್ವರಿಗೆ ಅವಮಾನ ಮಾಡಿದ್ದು. ಕಣ್ಣು ಕಾಣದೇ ಇದ್ರೂ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿದ್ದ ಶಿಕ್ಷಕರ ಜೊತೆಗೆ ಕ್ರೂರವಾಗಿ ವರ್ತಿಸಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತಿರೋ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲನ ಶಾಲೆಯಲ್ಲಿ ರಾಸಿಪುರಂ ತಾಲೂಕಿನ ಪುದುಚೆಟ್ಟಿರಾಂ ಊರಿನ ಸರ್ಕಾರಿ ಶಾಲೆಯ ಹತ್ತನೇ ತರಗತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಶಿಕ್ಷಕರು ಸಮಾಜಶಾಸ್ತ್ರ ಪಾಠದ ಬೋಧನೆಯನ್ನು ಮಾಡುತ್ತಿದ್ದರು. ಈ ವೇಳೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಎದುರಲ್ಲೇ ನೃತ್ಯವನ್ನು ಮಾಡಿ ವಿಕೃತಿ ಮೆರೆದಿದ್ದಾರೆ.
ಅಷ್ಟೇ ಅಲ್ಲಾ ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಡುತ್ತಿದ್ದ ಕುಚೇಷ್ಟೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಮಾತ್ರವಲ್ಲ ವಿದ್ಯಾರ್ಥಿಗಳ ವರ್ತನೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಘಟನೆಯ ಬೆನ್ನಲ್ಲೇ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಅಲ್ಲದೇ ವಿಡಿಯೋ ಪರಿಶೀಲನೆಯ ವೇಳೆ ಘಟನೆ ನಾಮಕ್ಕಲ್ ಜಿಲ್ಲೆಯ ಶಾಲೆಯಲ್ಲಿ ನಡೆದಿರುವುದು ಗೊತ್ತಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದ್ದು, ಪೊಲೀಸರಿಗೆ ಈ ಕುರಿತು ದೂರು ನೀಡಿದೆ.
ಇದನ್ನೂ ಓದಿ : ಪೋಷಕರಿಗೆ ಗುಡ್ ನ್ಯೂಸ್ ಕೊಡಲಿದೆ ರಾಜ್ಯ ಸರ್ಕಾರ : ಶೇ.30ರಷ್ಟು ಶಾಲಾ ಶುಲ್ಕ ವಿನಾಯ್ತಿ !
ಇದನ್ನೂ ಓದಿ : ಉಪನ್ಯಾಸಕರ ನೇಮಕಕ್ಕೆ Ph.D ಕಡ್ಡಾಯವಲ್ಲ : ಸ್ಪಷ್ಟನೆ ನೀಡಿದ ಕೇಂದ್ರ ಶಿಕ್ಷಣ ಸಚಿವಾಲಯ
(4 Students of Tamil Nadu School Dismissed for Mocking Visually Impaired Teacher )