T20 World Cup 2021 : 1 ಗಂಟೆಯಲ್ಲಿ ಸೋಲ್ಡೌಟ್‌ ಆಯ್ತು ಭಾರತ – ಪಾಕ್‌ ಪಂದ್ಯದ ಟಿಕೆಟ್‌

ದುಬೈ : ಐಸಿಸಿ ಟಿ20 (T 20) ವಿಶ್ವಕಪ್‌ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ. ಅದ್ರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ. ಬಹುನಿರೀಕ್ಷಿತ ಪಂದ್ಯದ ಟಿಕೆಟ್ ಕೇವಲ ಒಂದೇ ಒಂದು ಗಂಟೆಯಲ್ಲಿ ಮಾರಾಟವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಬಾರಿ ಐಸಿಸಿ ಟಿ20 (T 20) ವಿಶ್ವಕಪ್‌ ಪಂದ್ಯಾವಳಿ ಯುಎಇನಲ್ಲಿ ನಡೆಯಲಿದೆ, ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಾವಳಿ ಕೇವಲ ಭಾರತ – ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಿಗೆ ಮಾತ್ರವಲ್ಲ ವಿಶ್ವದ ಕ್ರಿಕೆಟ್‌ ಪ್ರಿಯರಿಗೂ ಕುತೂಹಲ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಪಂದ್ಯದ ಟಿಕೆಟ್‌ ಆನ್‌ಲೈನ್‌ನಲ್ಲಿ ಸೋಲ್ಡ್‌ಔಟ್‌ ಆಗಿದೆ.

ಪ್ರೀಮಿಯಂ, ಪೆವಿಲಿಯನ್ ಈಸ್ಟ್, ಪ್ಲಾಟಿನಂ, ಜನರಲ್ ಮತ್ತು ಜನರಲ್ ಈಸ್ಟ್ ಸೇರಿದಂತೆ ಕ್ರೀಡಾಂಗಣದ ಎಲ್ಲಾ ವಿಭಾಗಗಳಲ್ಲಿನ ಆಸನಗಳು ಮಾರಾಟವಾಗಿವೆ. ಅಂತಿಮ ಟಿ20 ಈವೆಂಟ್ ಗಾಗಿ ಟಿಕೆಟ್ ಗಳನ್ನು ಮಾರಾಟ ಮಾಡುವ ಪ್ಲಾಟಿನಂಲಿಸ್ಟ್ ವೆಬ್ ಸೈಟ್ ನಲ್ಲಿ ಲಭ್ಯವಿಲ್ಲ.

ಇನ್ನು ರೋಚಕ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಟಿಕೆಟ್ ಮಾರಾಟವಾಗಿದೆ. ಟಿಕೆಟ್‌ ಮಾರಾಟ ಆರಂಭವಾದ ತಕ್ಷಣ ನೂರಾರು ಅಭಿಮಾನಿಗಳು ಟಿಕೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಹಲವರು ಟಿಕೆಟ್‌ ಖರೀದಿಸಲು ಒಂದು ಗಂಟೆಗೂ ಅಧಿಕ ಕಾಲ ಆನ್‌ಲೈನ್‌ ಸರದಿಯಲ್ಲಿ ಕಾದಿದ್ದಾರೆ. ಇನ್ನು ಪ್ರೀಮಿಯಿಂ ವಿಭಾಗದ ಟಿಕೆಟ್‌ ಭಾನುವಾರ ರಾತ್ರಿಯೇ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

ಇದನ್ನೂ ಓದಿ : ಪಂತ್‌ ಪಡೆಯ ಎದುರು ಮುಗ್ಗರಿಸಿದ ಧೋನಿ ಬಾಯ್ಸ್‌ : ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

(T20 World Cup 2021: India Vs Pakistan Match Tickets Sold Out )

Comments are closed.