5,8.9ನೇ ತರಗತಿಗೆ ಬೋರ್ಡ್‌ ಪರೀಕ್ಷೆ ರದ್ದು : ಆದ್ರೆ ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್‌ ಜಾರಿ

Board exam canceled for 5th 8th and 9th class  : ಬೆಂಗಳೂರು : ಕರ್ನಾಟಕದಲ್ಲಿ ಕಳೆದ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾತ್ರವಲ್ಲದೇ 5,8 ಮತ್ತು 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸಲಾಗಿತ್ತು. ಕಳೆದ ಸಾಲಿನಲ್ಲಿ ಬೋರ್ಡ್‌ ಪರೀಕ್ಷೆಗೆ ಸಾಕಷ್ಟು ಪರ- ವಿರೋಧ ವ್ಯಕ್ತವಾಗಿತ್ತು.

Board exam canceled for 5th 8th and 9th class  : ಬೆಂಗಳೂರು : ಕರ್ನಾಟಕದಲ್ಲಿ ಕಳೆದ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾತ್ರವಲ್ಲದೇ 5,8 ಮತ್ತು 9ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸಲಾಗಿತ್ತು. ಕಳೆದ ಸಾಲಿನಲ್ಲಿ ಬೋರ್ಡ್‌ ಪರೀಕ್ಷೆ (Board Exams) ಗೆ ಸಾಕಷ್ಟು ಪರ- ವಿರೋಧ ವ್ಯಕ್ತವಾಗಿತ್ತು. ಕೊನೆಗೂ ಶಿಕ್ಷಣ ಇಲಾಖೆ (Education Department) ಪ್ರಸಕ್ತ ಸಾಲಿನಲ್ಲಿ ಬೋರ್ಡ್‌ ಪರೀಕ್ಷೆ ರದ್ದುಗೊಳಿಸಿದ್ದು, ಪರೀಕ್ಷಾ ನಿಯಮದಲ್ಲಿ ಬದಲಾವಣೆ ತಂದಿದೆ.

Karnataka Board exam canceled for 5th 8th and 9th class New rules
Image Credit to Original Source

ಕರ್ನಾಟಕದಲ್ಲಿ ಮೊದಲ ಬಾರಿಗೆ 5,8 ಮತ್ತು 9 ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವ ಮಹತ್ವದ ನಿರ್ಧಾರವನ್ನ ರಾಜ್ಯ ಶಿಕ್ಷಣ ಇಲಾಖೆ (Karnataka Education Department) ಕೈಗೊಂಡಿತ್ತು. ಪರೀಕ್ಷೆ ನಡೆಸುವವರೆಗೂ ಖಾಸಗಿ ಶಾಲೆಗಳ ಒಕ್ಕೂಟ ಬೋರ್ಡ್‌ ಪರೀಕ್ಷೆಯನ್ನು ವಿರೋಧಿಸಿತ್ತು. ಅಲ್ಲದೇ ಹೈಕೋರ್ಟ್‌ ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್‌ ತಡೆ ನೀಡಿದ್ರು, ಶಿಕ್ಷಣ ಇಲಾಖೆ ನ್ಯಾಯಾಲಯದಿಂದ ತಡೆಯಾಜ್ಞೆ ತೆರವು ಮಾಡಿತ್ತು.

ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ

ಪರ – ವಿರೋಧದ ನಡುವಲ್ಲೇ ಕರ್ನಾಟಕದಲ್ಲಿ ಬೋರ್ಡ್‌ ಪರೀಕ್ಷೆ ನಡೆದಿತ್ತು. ವಿದ್ಯಾರ್ಥಿಗಳು, ಪೋಷಕರಿಂದಲೂ ಶಿಕ್ಷಣ ಇಲಾಖೆ ವಿರೋಧ ಎದುರಿಸಿತ್ತು. ಕೊನೆಗೂ ಬೋರ್ಡ ಪರೀಕ್ಷೆ ರದ್ದಾಗಿದೆ. ಆದರೆ ಪರೀಕ್ಷಾ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಬೋರ್ಡ್‌ ಪರೀಕ್ಷೆ ಇಲ್ಲವಾದ್ರೂ ಮೌಲ್ಯ ಮಾಪನ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಎದುರಿಸಬೇಕಾಗಿದೆ.

Karnataka Board exam canceled for 5th 8th and 9th class New rules
Image Credit to Original Source

ಇದನ್ನೂ ಓದಿ : ಕನ್ನಡದಲ್ಲೇ ಐಎಎಸ್ ಬರೆಯಬೇಕಾ ? ಇಲ್ಲಿದೆ ಸರಳವಾದ ಟಿಪ್ಸ್

೨೦೨೪-೨೫ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಬೋರ್ಡ್‌ ಪರೀಕ್ಷೆ ಯನ್ನು ರಾಜ್ಯ ಮಟ್ಟದಲ್ಲಿ ನಡೆಸಲಾಗಿದ್ರೆ, ಇನ್ಮುಂದೆ ಆಯಾಯ ಶಾಲೆಗಳಲ್ಲಿಯೇ ಮೌಲ್ಯ ಮಾಪನ ನಡೆಯಲಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ

Karnataka Board exam canceled for 5th, 8th and 9th class, New rules have been implemented by the education department

Comments are closed.