ಭಾನುವಾರ, ಏಪ್ರಿಲ್ 27, 2025
Homeeducationದಸರಾ ರಜೆ ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ವಿಸ್ತರಣೆ !

ದಸರಾ ರಜೆ ಕರ್ನಾಟಕದಲ್ಲಿ ಅಕ್ಟೋಬರ್ 31ರವರೆಗೆ ವಿಸ್ತರಣೆ !

- Advertisement -

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು (Karnataka Education Department) ಈ ಬಾರಿ 15 ದಿನಗಳ ಕಾಲ ದಸರಾ ರಜೆ ಘೋಷಣೆ ಮಾಡಿದೆ. ಆದರೆ ಈ ಹಿಂದೆ ನೀಡಲಾಗುತ್ತಿರುವ ರಜೆಗೆ ಹೋಲಿಕೆ ಮಾಡಿದ್ರೆ ಈ ಬಾರಿಯೂ ರಜೆ ಕಡಿತವಾಗಿದೆ. ಇದು ರಾಜ್ಯದ ಶಿಕ್ಷಕರ ಅತೃಪ್ತಿಗೆ ಕಾರಣವಾಗಿದ್ದು, ಇದೀಗ ದಸರಾ ವಿಸ್ತರಣೆ ಮಾಡುವಂತೆ ಶಿಕ್ಷಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, (CM Siddaramaiah) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದೆ.

ಕರ್ನಾಟಕದ ಶಾಲೆಗಳಿಗೆ ಈಗಾಗಲೇ ದಸರಾ ರಜೆಯನ್ನು ನೀಡಲಾಗಿದೆ. ನವರಾತ್ರಿಯ ಆಚರಣೆ ನಡೆಯುತ್ತಿದೆ. ಅಕ್ಟೋಬರ್ 24 ರಂದು ವಿಜಯದಶಮಿ (Dussehra) ಆಚರಿಸಲಾಗುತ್ತಿದೆ. ಹಬ್ಬದ ಮರುದಿನ ಅಕ್ಟೋಬರ್ 25 ರಂದು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಹಬ್ಬದ ಮರುದಿನ ಶಾಲಾರಂಭ ಮಾಡುವುದು ಮಕ್ಕಳ ಮೇಲೆ ಒತ್ತಡ ಹೆಚ್ಚಲಿದೆ ಅನ್ನೋ ಆತಂಕ ವ್ಯಕ್ತವಾಗಿದೆ.

Karnataka Dasara holiday may extend till October 31
Image Credit To Original Source

ಇದನ್ನೂ ಓದಿ : ಶಾಲೆಗಳಿಗೆ 15 ದಿನಗಳ ಮಧ್ಯಂತರ ರಜೆ ರದ್ದು : ರಾಜ್ಯ ಸರಕಾರದ ಮಹತ್ವದ ಆದೇಶ

ಸದ್ಯ ಮಕ್ಕಳು ಶಾಲಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಜೊತೆಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಬ್ಬದ ಮರು ದಿನ ಶಾಲಾರಂಭ ಮಾಡುವ ಬದಲು ದಸರಾ ರಜೆಯನ್ನು ಅಕ್ಟೋಬರ್ 30ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಿದ್ದಾರೆ.

ಕೊರೊನಾ ಬೆನ್ನಲ್ಲೇ ಶಾಲೆಗಳ ದಸರಾ ರಜೆಗಳಿಗೆ ಕತ್ತರಿ ಬಿದ್ದಿತ್ತು. ಆದರೆ ಈ ಬಾರಿಯೂ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಮೊಟಕುಗೊಳಿಸಿದೆ. ಈ ಹಿಂದೆ ದಸರಾ ರಜೆ ಒಂದು ತಿಂಗಳು ಇದ್ದು, ಈಗ ಕೇವಲ 15 ದಿನಕ್ಕೆ ಇಳಿಕೆಯಾಗಿದೆ. ಶಾಲೆಗಳಿಗೆ ದಸರಾ ರಜೆಯನ್ನು ಕಡಿತ ಮಾಡುವುದು ಸರಿಯಲ್ಲ ಅನ್ನೋದು ಶಿಕ್ಷಕರ ವಾದ.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ

Karnataka Dasara holiday may extend till October 31
Image Credit to Original Source

ಇದೀಗದಸರಾ ಹಬ್ಬದ ಮರುದಿನವೇ ಶಾಲೆ ಆರಂಭವಾಗುವುದರಿಂದ ಮಕ್ಕಳಿಗೆ ಒತ್ತಡವಾಗುತ್ತದೆ. ಹೀಗಾಗಿ ದಸರಾ ರಜೆಯನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಕಳೆದ ವರ್ಷ ರಜೆ ವಿಸ್ತರಣೆ ಕುರಿತು ಶಿಕ್ಷಣ ಇಲಾಖೆ ಶಿಕ್ಷಕರ ಸಂಘಕ್ಕೆ ಮೌಖಿಕವಾಗಿ ತಿಳಿಸಿದ್ದರೂ ಈ ವರ್ಷ ರಜೆ ಅವಧಿ ವಿಸ್ತರಣೆ ಮಾಡಿಲ್ಲ. ಜೊತೆಗೆ ಶಿಕ್ಷಕರ ರಜೆಯನ್ನು ಮೊಟಕುಗೊಳಿಸಲಾಗಿದೆ ಅನೋ ಆರೋಪವೂ ಇದೆ. ಇದೇ ಕಾರಣಕ್ಕೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿಯೂ ಮನವಿ ಮಾಡಿದ್ದಾರೆ.

ಈಗಾಗಲೇ ರಜೆ ವಿಸ್ತರಣೆಯ ಬಗ್ಗೆ ಶಿಕ್ಷಕರ ಸಂಘ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರನ್ನು ಆಗ್ರಹಿಸೆ. 25ರಂದು ಶಾಲೆ ಆರಂಭವಾಗಲಿದೆ ಆದರೆ, ಮಕ್ಕಳಿಗೆ ಹಬ್ಬ ಆಚರಿಸಲು ಸಾಧ್ಯವಾಗುವುದಿಲ್ಲ ಅನ್ನೋದು ಶಿಕ್ಷಕರ ಸಂಘದ ವಾದ. ಇನ್ನು ಇತರ ಇಲಾಖೆ ನೌಕರರಿಗೆ 30 ದಿನಗಳ ಗಳಿಕೆ ರಜೆ ಸಿಗುತ್ತದೆ, ಆದರೆ ಶಿಕ್ಷಕರಿಗೆ ಕೇವಲ 10 ಗಳಿಕೆ ದಿನಗಳ ರಜೆ ಸಿಗುತ್ತದೆ. ದಸರಾ ಹಾಗೂ ಬೇಸಿಗೆ ರಜೆ ಕಾರಣದಿಂದಲೇ ಗಳಿಕೆ ರಜೆ ಕಡಿಮೆ ಇದೆ. ಹೀಗಾಗಿ ದಸರಾ ರಜೆ ಕಡಿತ ಮಾಡದಂತೆ ಸರಕಾರಕ್ಕೆ ಒತ್ತಡ ಹೇರಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular