‌ಶತಕದಲ್ಲೇ ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ : ಸಚಿನ್‌ ದಾಖಲೆ ಸರಿಗಟ್ಟುತ್ತಾರಾ ಕಿಂಗ್‌ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli ) 48 ನೇ ಶತಕ ಬಾರಿಸಿದ್ದಾರೆ. ‌48ನೇ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ (Sachin tendulkar) ಶತಕವನ್ನು (Most ODI Centuries ) ಸರಿಗಟ್ಟಲು ಇದೀಗ ಒಂದು ಶತಕದ ಅಗತ್ಯವಿದೆ.

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli ) 48 ನೇ ಶತಕ ಬಾರಿಸಿದ್ದಾರೆ. ಇದೀಗ ಏಕದಿನ ಕ್ರಿಕೆಟ್‌ನ (ODI Cricket) ಶತಕದ ಮ್ಯಾಜಿಕ್ ನಂಬರ್ 50 ಶತಕಗಳ ಸಮೀಪಕ್ಕೆ ಬಂದಿದ್ದಾರೆ. 48ನೇ ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ (Sachin tendulkar) ಶತಕವನ್ನು (Most ODI Centuries ) ಸರಿಗಟ್ಟಲು ಇದೀಗ ಒಂದು ಶತಕದ ಅಗತ್ಯವಿದೆ.

ವಿಶ್ವಕಪ್‌ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ (IND vs BAN ) ವಿರಾಟ್‌ ಕೊಹ್ಲಿ ಅವರು ಭರ್ಜರಿ ಶತಕ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟಿದ್ದಾರೆ. ಈ ಮೂಲಕ ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 48 ನೇ ಶತಕ ಪೂರ್ಣಗೊಳಿಸಿದ್ದಾರೆ.

Most ODI Centuries india vs Bangladesh Virat Kohli hits 48th ton Sachin Tendulkar 50 century in ODI Cricket
Image Credit : BCCI

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧನೆಯನ್ನು ಮಾಡಿದ್ದರು. ಸಚಿನ್‌ ತೆಂಡೂಲ್ಕರ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 49 ಶತಕಗಳನ್ನು ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಅವರು ಭಾರತ ಹಾಗೂ ಬಾಂಗ್ಲಾದೇಶ (IND vs BAN) ವಿರುದ್ದದ ಪಂದ್ಯದಲ್ಲಿ ತಮ್ಮ 48 ನೇ ODI ಶತಕವನ್ನು ಬಾರಿಸಿದ್ದಾರೆ. ಇದು ಕೊಹ್ಲಿ ಅವರ 78ನೇ ಅಂತಾರಾಷ್ಟ್ರೀಯ ಶತಕ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಭರ್ಜರಿ ಶತಕ: ವಿಶ್ವಕಪ್ 202ನಲ್ಲಿ ಭಾರತಕ್ಕೆ ಸತತ 4 ನೇ ಗೆಲುವು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟ್‌

ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ 49 ಶತಕಗಳನ್ನು ಗಳಿಸಿದ್ದರೆ ವಿರಾಟ್ ಕೊಹ್ಲಿ ಈಗ 48 ಶತಕ ಬಾರಿಸಿದ್ದಾರೆ. ಈ ಮೂಲಕ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಸರಿಗಟ್ಟುವ ಸನಿಹದಲ್ಲಿದ್ದಾರೆ. ವಿರಾಟ್‌ ಕೊಹ್ಲಿ ಅವರು ವಿಶ್ವಕಪ್‌ನಲ್ಲಿಯೇ ಈ ವಿಶ್ವದಾಖಲೆಯನ್ನು ಅಳಿಸಿ ಹಾಕುವ ಸಾಧ್ಯತೆಯಿದೆ. ವಿಶ್ವಕಪ್‌ನಲ್ಲಿ ಸದ್ಯ ವಿರಾಟ್‌ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರು :

1 ಸಚಿನ್ ತೆಂಡೂಲ್ಕರ್ ಭಾರತ 452 ಪಂದ್ಯ 49 ಶತಕ
2 ವಿರಾಟ್ ಕೊಹ್ಲಿ ಭಾರತ 273 ಪಂದ್ಯ 48 ಶತಕ
3 ರೋಹಿತ್ ಶರ್ಮಾ ಭಾರತ 247 ಪಂದ್ಯ 31 ಶತಕ
4 ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ 365 ಪಂದ್ಯ 30 ಶತಕ
5 ಸನತ್ ಜಯಸೂರ್ಯ ಶ್ರೀಲಂಕಾ 433 ಪಂದ್ಯ 28 ಶತಕ
6 ಹಾಸಿಮ್ ಆಮ್ಲಾ ದಕ್ಷಿಣ ಆಫ್ರಿಕಾ 178 ಪಂದ್ಯ 27 ಶತಕ
7 ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ 218 ಪಂದ್ಯ 25 ಶತಕ
8 ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ 294 ಪಂದ್ಯ 25 ಶತಕ
9 ಕುಮಾರ್ ಸಂಗಕ್ಕಾರ ಶ್ರೀಲಂಕಾ 380 ಪಂದ್ಯ 25 ಶತಕ
10 ಸೌರವ್ ಗಂಗೂಲಿ ಭಾರತ 300 ಪಂದ್ಯ 22 ಶತಕ
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !

ವಿರಾಟ್‌ ಕೊಹ್ಲಿ ಅವರು 48ನೇ ಏಕದಿನ ಶತಕವನ್ನು ಪೂರೈಸಿದ್ದಾರೆ. ಈ ಮೂಲಕ ಕೊಹ್ಲಿ ಮತ್ತೊಂದು ವಿಶ್ವದಾಖಲೆಯ ಸನಿಹದಲ್ಲಿದ್ದಾರೆ. ಈಗಾಗಲೇ ಕೊಹ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಹಲವು ದಾಖಲೆಗಳನ್ನು ಅಳಿಸಿ ಹಾಕಿದ್ದರು. ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸುವ ಮೂಲಕ ಶಿಖರ್‌ ಧವನ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

Most ODI Centuries india vs Bangladesh Virat Kohli hits 48th ton Sachin Tendulkar 50 century in ODI Cricket
Image Credit : BCCI

ವೇಗವಾಗಿ 26000 ರನ್‌ ಗಳಿಸಿದ ಕೊಹ್ಲಿ:
ವಿರಾಟ್‌ ಕೊಹ್ಲಿ ಅವರು ವೇಗದ ಶತಕದ ಜೊತೆಗೆ ಇದೀಗ ಏಕದಿನ ಕ್ರಿಕೆಟ್‌ನಲ್ಲಿ 26,000 ರನ್‌ಗಳನ್ನು ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಕೊಹ್ಲಿ ಅಳಿಸಿ ಹಾಕಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ !

ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕ
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಸದ್ಯ ವಿರಾಟ್‌ ಕೊಹ್ಲಿ 78 ಶತಕ ಸಿಡಿಸಿದ್ದಾರೆ. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ( ಎಲ್ಲಾ ಮಾದರಿ) ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಇದೀಗ ಸಚಿನ್ ತೆಂಡೂಲ್ಕರ್ (100) ಹೆಸರಿನಲ್ಲಿದೆ.

ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ :
ವಿರಾಟ್‌ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಮಾತ್ರವಲ್ಲ ಅತೀ ಹೆಚ್ಚು ರನ್‌ ಗಳಿಸಿದ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಅವರು ಶ್ರೀಲಂಕಾದ ಮಾಹೇಲ್‌ ಜಯವರ್ಧನೆ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಸಾಧನೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದೆ. ನಂತರದಲ್ಲಿ ಕುಮಾರ ಸಂಗಕ್ಕಾರ, ರಿಕಿಪಾಂಟಿಂಗ್‌ ಇದ್ದು, ಸದ್ಯ ವಿರಾಟ್‌ ಕೊಹ್ಲಿ ಅವರು 4ನೇ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು ವಿಶ್ವಕಪ್‌ನಲ್ಲಿ ಇನ್ನಷ್ಟು ದಾಖಲೆಗಳು ಅವರ ಬ್ಯಾಟ್‌ ನಿಂದ ಹೊರಹೊಮ್ಮುವ ಸಾಧ್ಯತೆಯಿದೆ.

Most ODI Centuries india vs Bangladesh Virat Kohli hits 48th ton Sachin Tendulkar 50 century in ODI Cricket

 

Comments are closed.