karnataka first puc 2022 result : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಪ್ರಥಮ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ result.dkpucpa.com ನಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಫಲಿತಾಂಶಗಳನ್ನು ವೀಕ್ಷಿಸಬಹುದು.
ಪ್ರಥಮ ಪಿಯುಸಿ ಫಲಿತಾಂಶಗಳನ್ನು ವೀಕ್ಷಿಸಲು ಇಲ್ಲಿದೆ ಮಾರ್ಗ :
ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ result.dkpucpa.com ಗೆ ಭೇಟಿ ನೀಡಿ .
ವೆಬ್ಸೈಟ್ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಅಲ್ಲಿ ಕೇಳಲಾಗುವ ಕಡೆಯಲ್ಲಿ ನಮೂದಿಸಿ ಗೋ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಈಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸಲಿದೆ. ಭವಿಷ್ಯದ ಬಳಕೆಗಾಗಿ ನೀವು ಫಲಿತಾಂಶದ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ಸುಮಾರು ಆರು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ
Karnataka 2nd PUC Result 2022 : ಜೂನ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ : 11,379 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಬೆಂಗಳೂರು : ಹಿಜಾಬ್ ವಿವಾದದ ನಡುವಲ್ಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಒಂದೊಂದೆ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮೌಲ್ಯ ಮಾಪನವನ್ನು ನಡೆಸಲಾಗುತ್ತಿದೆ. ಈ ಬಾರಿ ಅತೀ ಕಡಿಮೆ ಅವಧಿಯಲ್ಲಿ ಮೌಲ್ಯ ಮಾಪನ ಕಾರ್ಯವನ್ನು ಮುಗಿಸಿ ಜೂನ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು (Karnataka 2nd PUC Result 2022) ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ತಡವಾಗಿ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳ ಕಾಲ ಪರೀಕ್ಷೆ ಕೊರೊನಾ ಸೋಂಕಿಗೆ ಬಲಿಯಾಗಿತ್ತು. ಆದ್ರೆ ಈ ಬಾರಿ ಪರೀಕ್ಷೆ ವಿಳಂಭವಾದ್ರೂ ಕೂಡ ಮೌಲ್ಯ ಮಾಪನ ಕಾರ್ಯವನ್ನು ವೇಗವಾಗಿ ಮುಗಿಸಲು ಇಲಾಖೆ ಸಜ್ಜಾಗಿದೆ. ಮೇ 20 ರಿಂದ ಜೂನ್ 15 ರ ಒಳಗೆ ಸಂಪೂರ್ಣ ಮೌಲ್ಯ ಮಾಪನ ಕಾರ್ಯವನ್ನು ಮುಗಿಸುವ ಫ್ಲ್ಯಾನ್ ಹಾಕಿಕೊಳ್ಳಲಾಗಿದೆ.
ಬೇಸಿಗೆ ರಜೆಯ ಅವಧಿಯಲ್ಲಿಯೂ ಉಪನ್ಯಾಸಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ಬಳಿಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರನ್ನು ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಬರೋಬ್ಬರಿ ಹನ್ನೊಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಗೈರು ಹಾಜರಾಗಿದ್ದಾರೆ.
ಇದನ್ನು ಓದಿ : acid attack : ಆಸಿಡ್ ಪ್ರೇಮಿ ನಾಗೇಶ್ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ
ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು
karnataka first puc 2022 result released on karresult nic in