Whats App Update:ಇನ್ನು ಮುಂದೆ ಬೇರೆ ಬೇರೆ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ವಾಟ್ಸ್ ಆ್ಯಪ್ ಖಾತೆಯನ್ನು ಬಳಸಲು ಸಾದ್ಯ?

ಈಗ ಒಂದು ಖಾತೆಯನ್ನು ಒಂದು ಸ್ಮಾರ್ಟ್‌ಫೋನ್‌(smartphone)ಗೆ ಮಾತ್ರ ಲಿಂಕ್ ಮಾಡಬಹುದು. ಆದರೆ  ಮುಂಬರುವ ದಿನಗಲ್ಲಿ ಬಹು-ಬೆಂಬಲವನ್ನು ಮೊಬೈಲ್ ಫೋನ್‌ಗಳಿಗೂ ವಿಸ್ತರಿಸುವುದಾಗಿ ಅಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ.(WhatsApp update)ಇದರರ್ಥ ನೀವು ಒಂದು ಫೋನ್‌ನಲ್ಲಿ ವಾಟ್ಸ್ ಆ್ಯಪ್ (WhatsApp) ಅನ್ನು ಬಳಸುತ್ತಿದ್ದರೆ, ನೀವು ಅದನ್ನು ಬೇರೆ ಮೊಬೈಲ್ ಫೋನ್‌ನಲ್ಲಿ ಅದೇ ಸಂಖ್ಯೆಯೊಂದಿಗೆ ಉಪಯೋಗಿಸಲು ಸಾಧ್ಯವಿಲ್ಲ. ವಾಟ್ಸ್ ಆ್ಯಪ್ (WhatsApp)ವೆಬ್‌ಗಾಗಿ ಲ್ಯಾಪ್‌ಟಾಪ್‌(Laptop)ಗಳು ಅಥವಾ ಡೆಸ್ಕ್‌ಟಾಪ್‌(Desktop)ಗಳನ್ನು ಬಳಸುವ ಆಯ್ಕೆಯನ್ನು ಕೆವವೊಬ್ಬರು ಹೊಂದಿದ್ದಾರೆ. ಆದರೆ ವಾಟ್ಸ್ ಆ್ಯಪ್(WhatsApp) ವೆಬ್ ಮೊಬೈಲ್ ಬ್ರೌಸರ್‌ಗಳು ಅಥವಾ ಟ್ಯಾಬ್ಲೆಟ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ, ಇದು PC ಗಳಿಗೆ ಸೀಮಿತವಾಗಿರುತ್ತದೆ. ಆದಾಗ್ಯೂ, ಇದು ಶೀಘ್ರದಲ್ಲೇ ಬದಲಾಗಬಹುದು.

WABetaInfo updated news: WABetaInfo  ಪ್ರಕಾರ, ವಾಟ್ಸ್ ಆ್ಯಪ್ (WhatsApp)ನ ಬೀಟಾ ಅಪ್‌ಡೇಟ್ (ಆವೃತ್ತಿ 2.22.10.13), ಇದಕ್ಕಾಗಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವು ತರಲಿದೆ ಎಂದು ಮಾಹಿತಿ ನೀಡಿದೆ. ವಾಟ್ಸ್ ಆ್ಯಪ್ (WhatsApp)ನ ಭವಿಷ್ಯದ ನವೀಕರಣದಲ್ಲಿ ಮೊಬೈಲ್ ಸಾಧನಗಳನ್ನು ಲಿಂಕ್ ಮಾಡುವ ಸಾಮರ್ಥ್ಯವನ್ನು ತರುವಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ವರದಿ ಮಾಡಿದೆ. ಆದ್ದರಿಂದ, ಅಗತ್ಯವಿದ್ದರೆ ನೀವು ಶೀಘ್ರದಲ್ಲೇ ವಾಟ್ಸ್ ಆ್ಯಪ್(WhatsApp) ಅನ್ನು ಒಂದು ಮುಖ್ಯ ಫೋನ್‌ನಿಂದ ಇತರ ಮೊಬೈಲ್ ಸಾಧನಗಳಿಗೆ ಲಿಂಕ್ ಮಾಡಬಹುದು. ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಮತ್ತು ಪ್ರತಿಯೊಬ್ಬ ಬೀಟಾ ಬಳಕೆದಾರರು ಅದನ್ನು ನೋಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಇದು ಕಳೆದ ವರ್ಷ ಬಿಡುಗಡೆಯಾದ ಬಹು-ಸಾಧನ ಬೆಂಬಲದ ಎರಡನೇ ಆವೃತ್ತಿಯಾಗಿದೆ ಎಂದು ವರದಿ ತಿಳಿಸಿದೆ. ವಾಟ್ಸ್ ಆ್ಯಪ್ (WhatsApp)ವೆಬ್‌ನ ಬಹು-ಸಾಧನ ಬೆಂಬಲ, ಉದಾಹರಣೆಗೆ, ಖಾತೆಯನ್ನು ಲಿಂಕ್ ಮಾಡಿರುವ ಮುಖ್ಯ ಸ್ಮಾರ್ಟ್‌ಫೋನ್‌ನಿಂದ ಸ್ವತಂತ್ರವಾಗಿ ನಾಲ್ಕು ಸಾಧನಗಳಿಗೆ ಸೀಮಿತವಾಗಿದೆ

ಹೊಸ ಮುಂಬರುವ ವೈಶಿಷ್ಟ್ಯವು “ಸಾಧನವನ್ನು ಒಡನಾಡಿಯಾಗಿ ನೋಂದಾಯಿಸಿ” (“Register Device as Companion) ಎಂಬ ವಿಭಾಗದೊಂದಿಗೆ ಸೆಟ್ಟಿಂಗ್‌ಗಳಲ್ಲಿ ತೋರಿಸಬಹುದು. ಬಳಕೆದಾರರು ದ್ವಿತೀಯ ಮೊಬೈಲ್ ಸಾಧನದಲ್ಲಿ ವಾಟ್ಸ್ ಆ್ಯಪ್ (WhatsApp) ಅನ್ನು ತೆರೆಯಲು ಪ್ರಯತ್ನಿಸಿದಾಗ ಇದು ತೋರಿಸುತ್ತದೆ. ಈ ಸಮಯದಲ್ಲಿ ವಾಟ್ಸ್ ಆ್ಯಪ್ (WhatsApp) ವೆಬ್ ಮಾಡುವಂತೆಯೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಭವಿಷ್ಯದಲ್ಲಿ ಬಳಕೆದಾರರು Android ಟ್ಯಾಬ್ಲೆಟ್ ಅನ್ನು ದ್ವಿತೀಯ ಸಾಧನವಾಗಿ ಲಿಂಕ್ ಮಾಡಲು ಸಾಧ್ಯವಾಗುತ್ತದೆ ಎಂದು ವರದಿ ಸೇರಿಸುತ್ತದೆ.

(WhatsApp could soon let users access the same account on multiple smartphones)

Comments are closed.