ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ಸಂಕಷ್ಟ ದಿಂದ ಬಾಗಿಲು ಮುಚ್ಚಿರುವ ಕಾಲೇಜ್ ಗಳ ಉಪನ್ಯಾಸಕರಿಗೆ ಸರ್ಕಾರ ಸಂಕ್ರಾಂತಿ ಹೊತ್ತಿನಲ್ಲಿ ಸಿಹಿಸುದ್ದಿ (doubles salary guest lecturers) ನೀಡಿದೆ. ರಾಜ್ಯದ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಘೋಷಿಸಿರುವ ಸರ್ಕಾರ ಈ ಹೆಚ್ಚಳವನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಬದ್ಧ ಎಂದು ಹೇಳಿದೆ. ಆ ಮೂಲಕ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದೆ.
ರಾಜ್ಯದ ಅತಿಥಿ ಉಪನ್ಯಾಸಕರಿಗೆ ೧೧ ಸಾವಿರವಿದ್ದ ವೇತನವನ್ನು ೨೮ ಸಾವಿರ ರೂಪಾಯಿಗೆ ಏರಿಸುವುದಾಗಿ ಸರ್ಕಾರ ಘೋಷಿಸಿದೆ. ಸರ್ಕಾರದ ಪರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್ ಘೋಷಣೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ್, ಅತಿಥಿ ಉಪನ್ಯಾಸಕರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿ ಎಲ್ಲವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿ ಆಧರಿಸಿ ಸರ್ಕಾರ ಅತಿಥಿ ಉಪನ್ಯಾಸಕರ ವೇತನ ಏರಿಕೆ ಹಾಗೂ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಅಶ್ವತ್ಥ ನಾರಾಯಣ್ ಭರವಸೆ ನೀಡಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೫ ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದ , ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು ಸರ್ಕಾರ 32 ಸಾವಿರಕ್ಕೆ ಏರಿಸಿದೆ. ಇನ್ನು ಐದು ವರ್ಷಕ್ಕೆ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದದವರ ವೇತನ 30 ಸಾವಿರಕ್ಕೆ , 5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ್ದರೂ ಯುಜಿಸಿ ನಿಗದಿ ಪಡಿಸಿದ ಅರ್ಹತೆ ಇಲ್ಲದವರಿಗೆ ವೇತನ 28 ಸಾವಿರಕ್ಕೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಂಬಳದ ಜೊತೆಗೆ ಅತಿಥಿ ಉಪನ್ಯಾಸಕರ ಕಾರ್ಯಭಾರ ಅವಧಿಯನ್ನು 10 ಗಂಟೆಗಳಿಂದ 15 ಕ್ಕೆ ಏರಿಸಲಾಗಿದ್ದು, ಉಪನ್ಯಾಸಕರ ಅವಧಿಯನ್ನು ಒಂದು ಸೆಮಿಸ್ಟರ್ ಬದಲು ಸಂಪೂರ್ಣ ಶೈಕ್ಷಣಿಕ ವರ್ಷಕ್ಕೆ ವಿಸ್ತರಿಸಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ಮುಷ್ಕರ ನಿರತ ಉಪನ್ಯಾಸಕರಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಅಶ್ವತ್ಥನಾರಾಯಣ್ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಉಪನ್ಯಾಸಕ ರನ್ನು ಖಾಯಂಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅಶ್ವತ್ಥ ನಾರಾಯಣ್ ಈ ಸಂಬಳ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಮೂರು ಪಟ್ಟು ಹೊರೆಯಾಗಲಿದೆ ಎಂಬ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ : ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ: ಒಬಿಸಿ, ಇಡಬ್ಲ್ಯೂಎಸ್ ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್
ಇದನ್ನೂ ಓದಿ : ಕೊರೊನಾರ್ಭಟಕ್ಕೆ 3 ಜಿಲ್ಲೆಗಳಲ್ಲಿ ಶಾಲೆ ಬಂದ್ : ಉಡುಪಿ, ದ.ಕ., ಮಂಡ್ಯದಲ್ಲೂ ಶಾಲೆ ಮುಚ್ಚುವ ಸಾಧ್ಯತೆ
( Karnataka Government doubles salary of guest lecturers)