Winter Beauty Tips : ಚಳಿಗಾಲದಲ್ಲಿ ಕೂದಲು ಹಾಗೂ ತ್ವಚೆಯ ಆರೈಕೆಗೆ ಇಲ್ಲಿದೆ ಮನೆಮದ್ದು

Winter Beauty Tips :ಸಿನಿಮಾಗಳಲ್ಲಿ ನಟಿಯರನ್ನು ನೋಡಿದಾಗ ನಮಗೂ ಕೂಡ ಅವರಂತೆಯೆ ಕಾಂತಿಯುತ ತ್ವಚೆ ಹಾಗೂ ರೇಷ್ಮೆಯಂತಹ ಕೂದಲೂ ಇರಬೇಕಿತ್ತು ಎಂದೆನಿಸದೇ ಇರದು. ಚಳಿಗಾಲ ಬಂತು ಅಂದರಂತೂ ತ್ವಚೆಯ ಆರೋಗ್ಯ ಸಂಪೂರ್ಣವಾಗಿ ಹಾಳಾಗಿಬಿಡುತ್ತದೆ. ಜೊತೆಯಲ್ಲಿ ಕೂದಲು ಉದುರುವ ಸಮಸ್ಯೆ ಕೂಡ ಉಂಟಾಗುತ್ತದೆ. ಆದರೆ ನೀವು ಈ ಸಮಯದಲ್ಲಿ ಕೆಲವು ಮನೆ ಮದ್ದುಗಳನ್ನು ಬಳಕೆ ಮಾಡುವುದರಿಂದ ಈ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.

ಮೊಸರು ಮತ್ತು ಅರಿಶಿಣದ ಫೇಸ್​ ಪ್ಯಾಕ್​ – ನೀವು ಚಳಿಗಾಲದಲ್ಲಿ ಮೃದುವಾದ ಚರ್ಮವನ್ನು ಪಡೆಯಲು ಬಯಸಿದರೆ, ನೀವು ಮುಖದ ಮೇಲೆ ಮೊಸರು ಮತ್ತು ಅರಿಶಿನ ಪ್ಯಾಕ್ ಅನ್ನು ಹಚ್ಚಬಹುದು. ತ್ವಚೆಯು ಶುಷ್ಕವಾಗಿದೆ ಎಂದು ಕಂಡುಬಂದಾಗ ನೀವು ಈ ಪ್ಯಾಕ್ ಅನ್ನು ಹಚ್ಚಬಹುದು. ಇದು ನಿಮ್ಮ ಮೈಬಣ್ಣವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.


ಮಲಗುವ ಮುನ್ನ ತೆಂಗಿನೆಣ್ಣೆ ಬಳಕೆ- ನೀವು ಮೇಕಪ್ ಮಾಡಿ ಅದನ್ನು ತೆಗೆಯದೆ ಮಲಗಿದರೆ ಅದು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಮೇಕಪ್ ತೆಗೆಯಲು ತೆಂಗಿನೆಣ್ಣೆ ಬಳಸಿ. ಮಲಗುವಾಗ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮುಖವನ್ನು ಸ್ವಚ್ಛಗೊಳಿಸಬಹುದು. ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೆಲವು ನಿಮಿಷಗಳ ಕಾಲ ಬಿಟ್ಟು ನಂತರ ಒದ್ದೆಯಾದ ಟವೆಲ್ ನಿಂದ ಮುಖವನ್ನು ಲಘುವಾಗಿ ಒರೆಸಿ. ಇದು ನಿಮ್ಮ ತ್ವಚೆಯನ್ನು ಸ್ವಚ್ಛವಾಗಿ ಮತ್ತು ಹೈಡ್ರೇಟೆಡ್ ಆಗಿರಿಸುತ್ತದೆ.


ತೆಂಗಿನಕಾಯಿ ಮತ್ತು ಔಡಲಕಾಯಿ ಎಣ್ಣೆಯಿಂದ ಕೂದಲಿನ ಮಸಾಜ್ – ಚಳಿಗಾಲದಲ್ಲಿ ಸುಂದರವಾದ ಕೂದಲಿನ ರಹಸ್ಯವೆಂದರೆ ಉಗುರು ಬೆಚ್ಚಗಿನ ತೆಂಗಿನಕಾಯಿ ಮತ್ತು ಔಡಲ ಕಾಯಿ ಎಣ್ಣೆಯ ಮಸಾಜ್.ಮಸಾಜ್​ ಮಾಡಿಕೊಂಡು ಒಂದು ಗಂಟೆಗಳ ಬಳಿಕ ಬೆಚ್ಚನೆಯ ನೀರಿನಿಂದ ತಲೆ ಸ್ನಾನ ಮಾಡಿ . ಈ ವೇಳೆಯಲ್ಲಿ ಕಂಡಿಷನರ್​ ಬಳಕೆಯನ್ನು ಮರೆಯಬೇಡಿ. ಇದರಿಂದ ಕೂದಲು ಮೃದು ಹಾಗೂ ದಪ್ಪವಾಗುತ್ತದೆ .


ಸ್ನಾನದ ಬಳಿಕ ಅರ್ಗಾನ್​ ಎಣ್ಣೆಯನ್ನು ಹಚ್ಚಿ – ತ್ವಚೆಯನ್ನು ನೀವು ಚಳಿ ಗಾಳಿಯಿಂದ ಕಾಪಾಡಿಕೊಳ್ಳಬೇಕು ಅಂದರೆ ಸ್ನಾನದ ಬಳಿಕ ಬಾಡಿ ಲೋಷನ್​ ಹಚ್ಚುವ ವೇಳೆಯಲ್ಲಿ ಅದರೊಂದಿಗೆ ಅರ್ಗಾನ್​ ಎಣ್ಣೆಯನ್ನು ಮಿಕ್ಸ್​ ಮಾಡಿ. ಇದು ನಿಮ್ಮ ತ್ವಚೆಯನ್ನು ಹೈಡ್ರೇಟ್​ ಆಗಿ ಇಡುತ್ತದೆ. ಈ ರೀತಿಯ ನೈಸರ್ಗಿಕ ಉಪಾಯಗಳನ್ನು ಬಳಕೆ ಮಾಡುವ ಮೂಲಕ ನೀವು ಚಳಿಗಾಲದಲ್ಲಿಯೂ ತ್ವಚೆ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ .

Winter Beauty Tips for women to get silky hair and glowing face

ಇದನ್ನು ಓದಿ : MakaraJyoti :ಶಬರಿ ಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಇದನ್ನೂ ಓದಿ : Coronavirus pandemic Updates : ದೇಶದಲ್ಲಿ ಒಂದೇ ದಿನ 2.47 ಲಕ್ಷ ಹೊಸ ಕೋವಿಡ್​ ಪ್ರಕರಣ ವರದಿ

Comments are closed.