ಬೆಂಗಳೂರು : ದ್ವಿತೀಯ ಪಿಯುಸಿ ವೇಳಾಪಟ್ಟಿಯನ್ನು ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದ್ದು, ದ್ವಿತೀಯ ಪಿಯುಸಿ ಅಂಕಪಟ್ಟಿ (PUC Marks Card) ತಿದ್ದುಪಡಿಗೆ ೧೬೦೦ ರೂಪಾಯಿ ಶುಲ್ಕ ವಿಧಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ಆದೇಶ ಹೊರಡಿಸಿದೆ.
ದ್ವಿತೀಯ ಪಿಯುಸಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶವನ್ನು ಕಲ್ಪಿಸಿದೆ. ಈ ಕುರಿತು ಈಗಾಗಲೇ ಜ್ಞಾಪಕ ಪತ್ರವನ್ನು ಹೊರಡಿಇದ್ದು, ಪ್ರಸ್ತುತ ಸಾಲಿನ ಮತ್ತು ಹಿಂದಿನ ಸಾಲಿನ ಅಂಕಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂಕಪಟ್ಟಿಯಲ್ಲಿನ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ವಿಚಾರಕ್ಕೆ ಸಂಬಂಧಿಸಿದಂತೆ ತಿದ್ದುಪಡಿಗೆ ಅವಕಾಶವಿದೆ.

ಆಯಾಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಅಂಕಪಟ್ಟಿಯ ಮೂಲ ಪ್ರತಿಯೊಂದಿಗೆ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಸದರಿ ಅಂಕಪಟ್ಟಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಅಭ್ಯರ್ಥಿಗಳು ಸಲ್ಲಿಕೆ ಮಾಡಿರುವ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿದಂದ ದೃಢೀಕರಣ ಮಾಡಲಾಗುತ್ತದೆ.
ಇದನ್ನೂ ಓದಿ : 5,8.9ನೇ ತರಗತಿಗೆ ಬೋರ್ಡ್ ಪರೀಕ್ಷೆ ರದ್ದು : ಆದ್ರೆ ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್ ಜಾರಿ
ಇನ್ನು ಪ್ರಸ್ತುತ ಸಾಲಿನ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಲ್ಲಿ ಇರುವ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ ಮತ್ತು ಜನ್ಮ ದಿನಾಂಕ ತಿದ್ದುಪಡಿ ಸಂಬಂಧ ಉಲ್ಲೇಖ-1ರ ಸರ್ಕಾರಿ ಆದೇಶದಲ್ಲಿ ನಿಗದಿಯಾಗಿರುವಂತೆ ಹಾಗೂ ಉಲ್ಲೇಖ-3 ರಲ್ಲಿ ಮಂಡಲಿಯ ಇ-ಕಛೇರಿಯ ಕಡತದಲ್ಲಿ ಅನುಮೋದಿಸಿರುವಂತೆ ರೂಪಾಯಿ 1600 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.
ಅಭ್ಯರ್ಥಿಗಳು https://k2.karnataka.gov.inನಲ್ಲಿ ಲಾಗಿನ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗುದೆ. ಅಲ್ಲದೇ ನಿಗದಿ ಪಡಿಸಿರುವ ಬ್ಯಾಂಕ್‌ನಲ್ಲಿ ಚಲನ್ ತೆಗೆಯುವ ಜೊತೆಗೆ, ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿಯನ್ನು ಮಂಡಳಿಗೆ ಸಲ್ಲಿಕೆ ಮಾಡಬಹುದಾಗಿದೆ.
ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ
Karnataka School Examination and Assessment Board has issued a circular regarding PUC Marks Card