ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಈ ಬಾರೀ ಕೂಡ ಮೇಲುಗೈ ಸಾಧಿಸಿದ ಬಾಲಕಿಯರು

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್‌ನಲ್ಲಿ ಪರೀಕ್ಷೆಗಳನ್ನು ನಡೆಸಿದೆ. ಇದೀಗ 2022-23ನೇ ಸಾಲಿನ ದ್ವಿತೀಯ ಪಿಯುಸಿ (Karnataka Second PUC Result) ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ ಶೇ. 74.67ರಷ್ಟು ಫಲಿತಾಂಶ ಬಂದಿದೆ. ಪ್ರತಿ ಸಲದಂತೆ ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿ ಮತ್ತೊಮ್ಮೆ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಬಾರಿ ದಕ್ಷಿಣ ಕನ್ನಡ ಶೇ. 95.34ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನು ಕರಾವಳಿ ಪ್ರದೇಶವಾದ ಉಡುಪಿ ಶೇ. 95.24ರಷ್ಟು ಗಳಿಸಿದ್ದು, ಎರಡನೇ ಸ್ಥಾನ ಪಡೆಕೊಂಡಿದೆ. ತೃತೀಯ ಸ್ಥಾನವನ್ನು ಶೇ.90.55ರಷ್ಟು ಗಳಿಸುವ ಮೂಲಕ ಕೊಡಗು ಪಡೆಕೊಂಡಿದೆ. ಕೊನೆಯ ಸ್ಥಾನದಲ್ಲಿ ಯಾದಗಿರಿ ಇರುತ್ತದೆ. ಇನ್ನು ಈ ಶೈಕ್ಷಣಿಕ ವರ್ಷದಲ್ಲಿ ಉತ್ತರ ಕನ್ನಡ ಶೇ. 90, ವಿಜಯಪುರ ಶೇ. 85, ಚಿಕ್ಕಮಗಳೂರು ಶೇ. 83ರಷ್ಟು ಫಲಿತಾಂಶ ಪಡೆದಿದೆ.

ಈ ವರ್ಷ ಮಾತ್ರ ನಿರೀಕ್ಷೆಗಿಂತ ಮೊದಲು ಅಂದರೆ ಎರಡು ವಾರದ ಮೊದಲೇ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯ ವೇಳೆಗೆ ವಿದ್ಯಾರ್ಥಿಗಳು https://karresults.nic.in/ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಮಾ.9ರಿಂದ 29ರವರೆಗೆ ಪರೀಕ್ಷೆ ನಡೆಸಲಾಗಿತ್ತು. ಏ.4ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು. ಕೇವಲ 15 ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಮಂಡಳಿಯು ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿತ್ತು. ಆದರೆ, ಅಂದುಕೊಂಡಿದ್ದ ಅವಧಿಗೂ ಮೊದಲೇ ಮೌಲ್ಯಮಾಪನ ಕಾರ್ಯ ಪೂರ್ಣವಾಗಿರುವುದರಿಂದ ಫಲಿತಾಂಶ ಪ್ರಕಟವಾಗುತ್ತಿದೆ.

ಈ ಬಾರಿ ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (ಫ್ರೆಷ​ರ್ಸ್) , 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಕಲಾ ವಿಭಾಗದಿಂದ 2,34,815, ವಾಣಿಜ್ಯ- 2,47,260 ಮತ್ತು ವಿಜ್ಞಾನದಿಂದ 2,44,120 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.

2023 ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸುವ ವಿಧಾನ :
ನಿಮಗೆ ತಿಳಿದಿರುವಂತೆ, ದ್ವಿತೀಯ ಪಿಯುಸಿ ಫಲಿತಾಂಶವನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಫಲಿತಾಂಶವನ್ನು ನೋಡಲು ಇಲ್ಲಿ ವಿವರಿಸಿರುವ ಸೂಚನೆಗಳನ್ನು ಅನುಸರಿಸಬಹುದು. ಕಾರ್ಯವಿಧಾನವು ಈ ಕೆಳಗಿನಂತಿರುತ್ತದೆ.

  • ಮೊದಲು ನೀವು ಅಧಿಕೃತ ಸೈಟ್‌ಗೆ ಹೋಗಬೇಕು.
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ನಿಮ್ಮ 2nd PUC 2023 ಫಲಿತಾಂಶವನ್ನು ನೀವು ಪರಿಶೀಲಿಸಬಹುದಾದ ವಿಭಾಗವನ್ನು ನೀವು ನೋಡುತ್ತೀರಿ. ಮೇಲೆ ಕ್ಲಿಕ್ ಮಾಡಿ
  • ಲಿಂಕ್. ಈ ಪುಟವು ನಿಮ್ಮನ್ನು ಹೊಸ ಟ್ಯಾಬ್‌ಗೆ ಮರುನಿರ್ದೇಶಿಸುತ್ತದೆ ಮತ್ತು ಲಾಗ್ ಇನ್ ಮಾಡಲು ನಿಮ್ಮ ನೋಂದಣಿ ಸಂಖ್ಯೆಯನ್ನು ಕೇಳುತ್ತದೆ.
  • ನಿಮ್ಮ ನೋಂದಣಿ ಸಂಖ್ಯೆಯು KAR 2nd PUC ಪರೀಕ್ಷೆಯ ಹಾಲ್ ಟಿಕೆಟ್ ಅನ್ನು ವೀಕ್ಷಿಸಬಹುದು
  • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಹಂತ Karnataka.puc ಎರಡನೇ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ PDF ಸ್ವರೂಪದಲ್ಲಿ ಫಲಿತಾಂಶವನ್ನು ಮುದ್ರಿಸಲು ಅಥವಾ ಉಳಿಸಲು ಶಿಫಾರಸು ಮಾಡಲಾಗಿದೆ.
  • ಕರ್ನಾಟಕ 2 ನೇ ಪಿಯುಸಿ 2023 ಫಲಿತಾಂಶ FAQ ಗಳು
  • II PUC ಕರ್ನಾಟಕ 2023 ರ ಫಲಿತಾಂಶವನ್ನು ಯಾವಾಗ ಘೋಷಿಸಲಾಗುತ್ತದೆ?
  • ಕರ್ನಾಟಕದ 2 ನೇ ಪಿಯುಸಿ ಫಲಿತಾಂಶವು ಜೂನ್ 2023 ರಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2023 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Karnataka Second PUC Result : 2nd PUC Result Announced: This time too girls have prevailed

Comments are closed.