ಬೆಂಗಳೂರು: Karnataka SSLC Final Exam : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEEB) ಈಗಾಗಲೇ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೀಗ ಮಹಾವೀರ ಜಯಂತಿ ಎಪ್ರಿಲ್ 4 ರಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಇದೀಗ ವೇಳಾಪಟ್ಟಿ ಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 31 ರಿಂದ ಎಪ್ರಿಲ್ 15ರ ವರೆಗೆ ನಡೆಯಲಿದೆ.
ಈ ಹಿಂದೆ ಎಪ್ರಿಲ್ 4 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಇದೀಗ ಎಪ್ರಿಲ್ 3 ರಂದು ನಡೆಸಲು ನಿರ್ಧರಿಸಲಾಗಿದೆ. ಏಪ್ರಿಲ್ 4 ರಂದು ಮಹಾವೀರ ಜಯಂತಿಯ ಹಿನ್ನೆಲೆಯಲ್ಲಿ ಸರಕಾರಿ ರಜೆಯ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ನೀಡಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು 31-03-2023 ರಿಂದ 15-04-2023 ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆಯೂ ಎಪ್ರಿಲ್ 15ರಂದು ಅಂತಿಮ ಪರೀಕ್ಷೆ ನಡೆಯಲಿದ್ದು, ಆ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Karnataka SSLC Final Exam : ಎಸ್‌ಎಸ್‌ಎಲ್‌ಸಿ ಪರಿಷ್ಕೃತ ವೇಳಾಪಟ್ಟಿ :
ಮಾರ್ಚ್ 31- ಪ್ರಥಮ ಭಾಷೆ ( ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ )
ಏಪ್ರಿಲ್ 3 – ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 6- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಏಪ್ರಿಲ್ ೮ – ಅರ್ಥಶಾಸ್ತ್ರ ( ಕೋರ್ ವಿಷಯ)
ಏಪ್ರಿಲ್ 10 – ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
ಏಪ್ರಿಲ್ 12- ತೃತೀಯ ಭಾಷೆ ( ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ )
ಏಪ್ರಿಲ್ 15 – ಸಮಾಜ ವಿಜ್ಞಾನ
ಇದನ್ನೂ ಓದಿ : Age limit for 1st class enrollment: ಶಿಕ್ಷಣ ಇಲಾಖೆಯಿಂದ ಹೊಸ ರೂಲ್ಸ್ : 1ನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿ
ಇದನ್ನೂ ಓದಿ : Revival of govt school: ಮುಚ್ಚುತ್ತಿದ್ದ ಸರಕಾರಿ ಶಾಲೆಗೆ ಮರುಜೀವ: ವಾತಾವರಣವನ್ನೇ ಬದಲಾಯಿಸಿದ ಹಳೆ ವಿದ್ಯಾರ್ಥಿಗಳು
Karnataka SSLC Final Exam time table change Revised scheduled announced