Virat Kohli’s successor in Team India: ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಇವನೇ..!

ಬೆಂಗಳೂರು: (Virat Kohli’s successor in Team India) ಟೀಮ್ ಇಂಡಿಯಾದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs New Zeeland ODI series) ಅಮೋಘ ದ್ವಿಶತಕ ಬಾರಿಸಿದ ಪಂಜಾಬ್’ನ ಶುಭಮನ್ ಗಿಲ್ (Shubhman Gill) ಅವರ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ.

ವಿರಾಟ್ ಕೊಹ್ಲಿ ಅವರ ಸ್ಥಾನ(Virat Kohli’s successor in Team India)ವನ್ನ ತುಂಬಬಲ್ಲ ಸಾಮರ್ಥ್ಯ ತನ್ನಲಿದೆ ಎಂಬುದನ್ನು ಶುಭಮನ್ ಗಿಲ್ ಸಾಬೀತು ಪಡಿಸಿದ್ದಾರೆ. ಕಳೆದ 16 ಏಕದಿನ ಪಂದ್ಯಗಳಲ್ಲಿ ಅಕ್ಷರಶಃ ಅಬ್ಬರಿಸಿರುವ ಗಿಲ್ 80.92ರ ಅಮೋಘ ಸರಾಸರಿಯಲ್ಲಿ 5 ಅರ್ಧಶತಕ, 3 ಶತಕ ಹಾಗೂ ಒಂದು ದ್ವಿಶತಕ ಸಹಿತ 1052 ರನ್ ಕಲೆ ಹಾಕಿದ್ದಾರೆ.

ಕಳೆದ 16 ಏಕದಿನ ಪಂದ್ಯಗಳಲ್ಲಿ ಶುಭಮನ್ ಗಿಲ್
64(53), 43(49), 98(98), 82(72), 33(34), 130(97), 3(7), 28(26), 49(57), 50(65), 45*(42), 12(22), 70(60), 21(12), 116(97), 208(149).

ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಶುಭಮನ್ ಗಿಲ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ 8ನೇ ಆಟಗಾರನೆಂಬ ಹಿರಿಮೆಗೆ ಗಿಲ್ ಪಾತ್ರರಾದರು.

  • ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ (23 ವರ್ಷ, 132 ದಿನ)
  • ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ 8ನೇ ಆಟಗಾರ
  • ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಭಾರತದ 5ನೇ ಆಟಗಾರ

23 ವರ್ಷದ ಪಂಜಾಬ್’ನ ಆಟಗಾರ ಶುಭಮನ್ ಗಿಲ್ 149 ಎಸೆತಗಳನ್ನೆದುರಿಸಿ 19 ಬೌಂಡರಿ ಹಾಗೂ 9 ಸಿಕ್ಸರ್’ಗಳ ಸಹಿತ 208 ರನ್ ಗಳಿಸಿ ಔಟಾದರು. ಕೊನೆಯ 3 ಓವರ್’ಗಳಲ್ಲಿ ತಾವು ಎದುರಿಸಿದ 11 ಎಸೆತಗಳಲ್ಲಿ ಗಿಲ್ ಆರು ಸಿಕ್ಸರ್’ಗಳನ್ನು ಬಾರಿಸಿದ್ದು ವಿಶೇಷ. 47ನೇ ಓವರ್ ಅಂತ್ಯಕ್ಕೆ 137 ಎಸೆತಗಳಲ್ಲಿ 169 ರನ್ ಗಳಿಸಿದ್ದ ಗಿಲ್, ಮುಂದಿನ 11 ಎಸೆತಗಳಲ್ಲಿ 39 ರನ್ ಬಾರಿಸಿದರು.

ವಿರಾಟ್ ಕೊಹ್ಲಿ ಉತ್ತರಾಧಿಕಾರಿ (Virat Kohli’s successor in Team India) ಎಂದೇ ಬಿಂಬಿತವಾಗಿರುವ ಶುಭಮನ್ ಗಿಲ್, ಏಕದಿನ ಕ್ರಿಕೆಟ್’ನಲ್ಲಿ ಭಾರತ ಪರ ಅತ್ಯಂತ ವೇಗವಾಗಿ ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾದ ಎಡಗೈ ಓಪನರ್ ಶಿಖರ್ ಧವನ್ ಅವರ ಹೆಸರಲ್ಲಿತ್ತು. ಗಿಲ್ 19 ಇನ್ನಿಂಗ್ಸ್’ಗಳಲ್ಲಿ ಸಾವಿರ ರನ್ ಕಲೆ ಹಾಕಿದರೆ, ವಿರಾಟ್ ಮತ್ತು ಧವನ್ 24 ಇನ್ನಿಂಗ್ಸ್’ಗಳಲ್ಲಿ ಸಾವಿರ ಏಕದಿನ ರನ್’ಗಳ ಗಡಿ ಮುಟ್ಟಿದ್ದರು.

ಇದನ್ನೂ ಓದಿ : Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ ಸಿಡಿಸಿದ ಪಂಜಾಬ್ ಕಾ ಪುತ್ತರ್

ಇದನ್ನೂ ಓದಿ : Veda Krishnamurthy captain: ಮದುವೆಯ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕೆ ವೇದಾ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ವೇದಾ ನಾಯಕಿ

ಇದನ್ನೂ ಓದಿ : Virat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ ಉಡುಗೊರೆ ಕೊಟ್ಟ ವಿರಾಟ್

ಏಕದಿನ ಕ್ರಿಕೆಟ್’ನಲ್ಲಿ ಭಾರತ ಪರ ಅತ್ಯಂತ ವೇಗವಾಗಿ ಸಾವಿರ ರನ್
ಶುಭಮನ್ ಗಿಲ್: 19 ಇನ್ನಿಂಗ್ಸ್
ವಿರಾಟ್ ಕೊಹ್ಲಿ: 24 ಇನ್ನಿಂಗ್ಸ್
ಶಿಖರ್ ಧವನ್: 24 ಇನ್ನಿಂಗ್ಸ್

Virat Kohli’s successor in Team India: He is the successor of Virat Kohli in Team India..!

Comments are closed.