Karnataka SSLC Result 2024 : ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಅಥವಾ kseab.karnataka.gov.in ನಲ್ಲಿ KSEABನಲ್ಲಿ ಪರಿಶೀಲಿಸಬಹುದು.

ಕರ್ನಾಟಕದಲ್ಲಿ ಈ ಬಾರಿ 8 ಲಕ್ಷ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ತರಗತಿ ಪರೀಕ್ಷೆ ಬರೆದಿದ್ದಾರೆ.ಮಾರ್ಚ್ 25 ಮತ್ತು ಏಪ್ರಿಲ್ 6 ರವರೆಗೆ SSLC ಪರೀಕ್ಷೆಯನ್ನು ನಡೆದಿದೆ. ಇದೀಗ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಈ ಬಾರಿ ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಪರೀಕ್ಷೆ ಈಗಾಗಲೇ ಮುಕ್ತಾಯಗೊಂಡಿದ್ದು, ಫಲಿತಾಂಶ ಪ್ರಕಟವಾಗುವುದು ಮಾತ್ರವೇ ಬಾಕಿ ಉಳಿದಿದೆ. ಉಳಿದಂತೆ ಎಸ್‌ಎಸ್‌ಎಲ್‌ಸಿ 2ನೇ ಹಂತದ ಪರೀಕ್ಷೆಗಳು ಜೂನ್ 12 – 19ರ ವರೆಗೆ ನಡೆಯಲಿದ್ದು, ಜೂನ್ 29ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಅಷ್ಟೇ ಅಲ್ಲದೇ ಜುಲೈ 10ಕ್ಕೆ ಮರು ಮೌಲ್ಯಮಾಪನದ ಫಲಿತಾಂಶವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 : ಇಲ್ಲಿದೆ ಮಹತ್ವದ ಸುದ್ದಿ, ಫಲಿತಾಂಶ ಪರಿಶೀಲಿಸುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ
ಎಸ್‌ಎಸ್‌ಎಲ್‌ಸಿ 3ನೇ ಹಂತದ ಪರೀಕ್ಷೆಗಳು ಜೂನ್ 29 ರಿಂದ ಅಗಸ್ಟ್ 5ರ ವರೆಗೆ ನಡೆಯಲಿದ್ದು, ಅಗಸ್ಟ್ 19 ರಂದು ಫಲಿತಾಂಶ ಪ್ರಕಟವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನಕ್ಕೆ ಅವಕಾಶವಿದ್ದು, ಮರುಮೌಲ್ಯಮಾಪನದ ಫಲಿತಾಂಶ ಅಗಸ್ಟ್ ೨೬ರಂದು ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ :
1) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – karresults.nic.in
2) ಮುಖಪುಟದಲ್ಲಿ, ಕರ್ನಾಟಕ SSLC ಫಲಿತಾಂಶಗಳನ್ನು ಪರಿಶೀಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ
3) ವಿನಂತಿಸಿದ ವಿವರಗಳನ್ನು ಭರ್ತಿ ಮಾಡಿ (ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ)
4) ನಿಮ್ಮ ವಿವರಗಳನ್ನು ಸಲ್ಲಿಸಿ
5) ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಈ ವೆಬ್‌ಸೈಟ್‌ಗಳ ಮೂಲಕ ವೀಕ್ಷಿಸಿ :
1) https://kseab.karnataka.gov.in
3) https://sslc.karnataka.gov.in
Karnataka SSLC Result 2024 : SSLC Result announced Click Here to Check Result