Summer Holiday 2025 : ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಸಮೀಪಿಸುತ್ತಿದೆ. ಮುಂದಿನ ತಿಂಗಳಲ್ಲಿ ಬಹುತೇಕ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಪರೀಕ್ಷೆಗಳು ಮುಕ್ತಾಯವಾದ ಬೆನ್ನಲ್ಲೇ ರಜೆ ಘೋಷಣೆಯಾಗಲಿದೆ. ಅದ್ರಲ್ಲೂ ಈ ಬಾರಿ ಬೇಸಿಗೆ ರಜೆಯ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ.
ಈ ಬಾರಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳಿಗೆ ಎಪ್ರೀಲ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಇದಕ್ಕಾಗಿ ಸರಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಅವಧಿಗೂ ಮೊದಲೇ ಅಂತಿಮ ಪರೀಕ್ಷೆಯನ್ನು ನಡೆಸುವ ಕುರಿತು ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾರ್ಚ್ 25ರಂದು ಆರಂಭಗೊಂಡು, ಎಪ್ರಿಲ್ 6ರ ವರೆಗೆ ನಡೆದಿತ್ತು. ಆದರೆ ಈ ಬಾರಿ ಮಾರ್ಚ್ 21ರಂದು ಪರೀಕ್ಷೆ ಆರಂಭಗೊಂಡು ಎರಡು ದಿನಗಳ ಮೊದಲು ಅಂದ್ರೆ ಎಪ್ರಿಲ್ 4ಕ್ಕೆ ಅಂತಿಮ ಪರೀಕ್ಷೆ ನಡೆಯಲಿದೆ. ಇನ್ನು ಪಿಯುಸಿ ವೇಳಾಪಟ್ಟಿಯಲ್ಲಿಯೂ ಬದಲಾವಣೆಯನ್ನು ತರಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಕಳೆದ ಬಾರಿಯಂತೆ ಈ ಬಾರಿಯೂ ಮಾರ್ಚ್ 1ರಂದು ಅಂತಿಮ ಪರೀಕ್ಷೆಯನ್ನು ಆರಂಭಿಸುತ್ತಿದೆ. ಕಳೆದ ಬಾರಿ ಮಾರ್ಚ್22 ರಂದು ಅಂತಿಮ ಪರೀಕ್ಷೆ ನಡೆದಿದ್ದರೆ, ಈ ಬಾರಿ ಮಾರ್ಚ್ 20ರಂದು ಅಂತಿಮ ಪರೀಕ್ಷೆ ನಡೆಯಲಿದೆ. ಈ ಕುರಿತು ಈಗಾಗಲೇ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುವ ಹೊತ್ತಲ್ಲೇ 1ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯು ನಡೆಯಲಿದೆ. ಪರೀಕ್ಷೆ ಮುಕ್ತಾಯವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಈ ಬಾರಿ ಬೇಸಿಗೆ ರಜೆ ಘೋಷಣೆಯಾಗಲಿದೆ. ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಬೇಸಿಗೆ ರಜೆ ಹಾಗೂ ದಸರಾ ರಜೆಯಲ್ಲಿ ಕಡಿತ ಮಾಡಲಾಗಿತ್ತು.
ಆದರೆ ಈ ಬಾರಿ ಎಪ್ರಿಲ್ 10 ರಿಂದ ಮೇ 30ರ ವರೆಗೆ ಬೇಸಿಗೆ ರಜೆಯನ್ನು ಸರಕಾರ ಈಗಾಗಲೇ ಘೋಷಣೆ ಮಾಡಿದೆ. ಒಂದೊಮ್ಮೆ ಸ್ಥಳೀಯಾಡಳಿತ ಚುನಾವಣೆಗಳು ಘೋಷಣೆಯಾಗಿದ್ದೇ ಆದ್ರೆ ಮಕ್ಕಳ ಬೇಸಿಗೆ ರಜೆಯಲ್ಲಿಯೂ ಬದಲಾವಣೆ ಆಗುವ ಸಾಧ್ಯತೆಯಿದೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಮಾರ್ಚ್ ಅಂತಿಮ ವಾರದಲ್ಲೇ ಬೇಸಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು.

2025-26ನೇ ಸಾಲಿನ ರಜಾದಿನಗಳ ಪಟ್ಟಿ ಇಲ್ಲಿದೆ.
ಫೆಬ್ರವರಿ 26-ಮಹಾ ಶಿವರಾತ್ರಿ
ಮಾರ್ಚ್ 30-ಅಗೀ ಉತ್ಸವ
ಮಾರ್ಚ್ 31-ಖುತುಬ್ ಎ ರಂಜಾನ್
ಏಪ್ರಿಲ್ 10 ರಿಂದ ಮೇ 30: ಶೈಕ್ಷಣಿಕ ರಜೆ (ಬೇಸಿಗೆ ರಜೆ)
ಏಪ್ರಿಲ್ 18 – ಶುಭ ಶುಕ್ರವಾರ
ಏಪ್ರಿಲ್ 30-ಬಸವ ಜಯಂತಿ
ಮೇ 1 – ಕಾರ್ಮಿಕರ ದಿನ
Also Read : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ
ಜೂನ್ 7-ಬಕ್ರೀದ್
ಜೂನ್ 27-ಮೊಹರಂ ಕೊನೆಯ ದಿನ
ಆಗಸ್ಟ್ 15 – ಸ್ವಾತಂತ್ರ್ಯ ದಿನ
ಆಗಸ್ಟ್ 27-ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 5-ಈದ್ ಮಿಲಾದ್
ಸೆಪ್ಟೆಂಬರ್-ದಸರಾ ರಜೆ
ಅಕ್ಟೋಬರ್ 1-ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
ಅಕ್ಟೋಬರ್ 2-ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 7-ವಾಲ್ಮೀಕಿ ಜಯಂತಿ
ಅಕ್ಟೋಬರ್ 22-ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1-ಕನ್ನಡ ರಾಜ್ಯೋತ್ಸವ
ನವೆಂಬರ್ 8-ಕನಕದಾಸ ಜಯಂತಿ
ಡಿಸೆಂಬರ್ 5-ಮೂವತ್ತು ಹಬ್ಬ
Also Read : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ
ಡಿಸೆಂಬರ್ 25-ಕ್ರಿಸ್‌ಮಸ್. ಸರ್ಕಾರಿ ಆದೇಶದಲ್ಲಿ ಹೇಳಿರುವಂತೆ ಕಳೆದ ವರ್ಷ ಅಕ್ಟೋಬರ್ 3 ರಿಂದ ಅಕ್ಟೋಬರ್ 20 ರವರೆಗೆ ದಸರಾ ರಜೆ ಘೋಷಿಸಲಾಗಿತ್ತು. ಒಟ್ಟು 17 ದಿನಗಳ ವಿದ್ಯಾರ್ಥಿಗಳು ದಸರಾ ರಜೆ ಪಡೆದಿದ್ದಾರೆ. ಕರ್ನಾಟಕ ಸರ್ಕಾರವು 2025-26 ರಲ್ಲಿ ರಾಜ್ಯ ಶಾಲಾ ರಜಾದಿನಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
Karnataka Summer Holiday 2025 Major Changes