ಬೆಂಗಳೂರು : ರಾಜ್ಯದಲ್ಲಿ ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವ ಹಾಗೇ ಪಠ್ಯಕ್ರಮ ಪರಿಷ್ಕರಣೆ ವಿವಾದ (Karnataka textbook row) ಕೊನೆಗೊಳ್ಳುವ ಲಕ್ಷಣವೇ ಕಾಣುತ್ತಿಲ್ಲ. ಸದ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದ್ದರೂ ಪಠ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟ ಕೊನೆಗೊಳ್ಳುತ್ತಿಲ್ಲ. ನಾಡಿನ ಸಾಹಿತಿಗಳು, ಲೇಖಕರು, ಚಿಂತಕರು ಸೇರಿದಂತೆ ಹಲವರು ಸೇರಿ ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ಆಗ್ರಹಿಸಿ ಜೂನ್ ೧೮ ರಂದು ಬೃಹತ್ ಹೋರಾಟಕ್ಕೆ ಸಿದ್ಧವಾಗಿದ್ದಾರೆ.
ಮಾಜಿ ಸಚಿವೆ ಹಾಗೂ ಬರಹಗಾರ್ತಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವರು ಹೋರಾಟದ ನಾಯಕತ್ವ ವಹಿಸಿದ್ದಾರೆ. ಈ ಮಧ್ಯೆ ಜೂನ್ ೧೮ ರ ಹೋರಾಟಕ್ಕೂ ಮುನ್ನವೇ ಮತ್ತೊಂದು ಬೃಹತ ಟ್ವೀಟರ್ ಅಭಿಯಾನಕ್ಕೆ ಸಿದ್ಧತೆ ನಡೆದಿದೆ. ಪಠ್ಯ ಪರಿಷ್ಕರಣೆ (Karnataka textbook row) ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ನಾಡಿನ ಸಾಹಿತಿಗಳು, ಹೋರಾಟಗಾರರಿಂದ ಜೂನ್ ೧೭ ರಂದು ಮತ್ತೆ ಟ್ವಿಟರ್ ಅಭಿಯಾನ ನಡೆಸಲಿದ್ದಾರೆ. ಕುವೆಂಪು ವಿಶ್ವಮಾನವ ವೇದಿಕೆ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಅದಕ್ಕೂ ಮೊದಲೇ ನಾಳೆ ಸಂಜೆ 5 ಗಂಟೆಯಿಂದ ಟ್ವಿಟರ್ ಚಳವಳಿಗೆ ಚಾಲನೆ ನೀಡಲಾಗುತ್ತದೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ನಾಡದ್ರೋಹಿBJPಸರ್ಕಾರ & #BoycottRSStextbooks ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಕ್ಯಾಂಪೇನ್ ನಡೆಯಲಿದೆ.
ರೋಹಿತ್ ಚಕ್ರತೀರ್ಥ (Rohith Chakrathirtha) ಸಮಿತಿ ನಡೆಸಿದ ಪಠ್ಯ ಪರಿಷ್ಕರಣೆಯಿಂದ ನಾಡಿಗೆ ಕುತ್ತು ಬಂದಿದೆ. ಕನ್ನಡ ಅಸ್ಮಿತೆಗಳನ್ನು ಅಪಮಾನಿಸಲಾಗುತ್ತಿದೆ ಎಂದು ಆರೋಪಿಸಿ ಟ್ವಿಟರ್ ಕ್ಯಾಂಪೇನ್ ನಡೆಯಲಿದೆ. ಇನ್ನು ಎಡಪಂಥೀಯ ಹಾಗೂ ಇತರ ಹೋರಾಟಗಾರತ ಅಭಿಯಾನಕ್ಕೆ ನಾಳೆ ಭರ್ಜರಿ ಬೆಂಬಲ ಸಿಗುವ ನೀರಿಕ್ಷೆ ಇದೆ. ಈಗಾಗಲೇ ವ್ಯಕ್ತವಾದ ವಿರೋಧವನ್ನು ಗಮನಿಸಿದ ರಾಜ್ಯ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ವಿಸರ್ಜಸಿದೆ.
ಇದನ್ನೂ ಓದಿ :ರಸ್ತೆಗಿಳಿಯಲಿದೆ ವಿಶೇಷಚೇತನ ಸ್ನೇಹಿ ಬಸ್ : ಹೊಸ ಪ್ರಯೋಗಕ್ಕೆ ಸಜ್ಜಾದ ಬಿಎಂಟಿಸಿ
ಇದನ್ನೂ ಓದಿ :ಮರ್ಯಾದಾ ಹತ್ಯೆಗೆ ಬಲಿಯಾದ ನವ ಜೋಡಿ : ಅಣ್ಣನಿಂದಲೇ ತಂಗಿ – ಭಾವನ ಬರ್ಬರ ಕೊಲೆ
ಈಗಾಗಲೇ ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದಿದೆ. ಆದರೆ ಹೋರಾಟಗಾರರು ಪಠ್ಯಕ್ರಮ ಪರಿಷ್ಕರಣೆ (Karnataka textbook row) ಹಿಂಪಡೆಯಲೇ ಬೇಕೆಂದು ಒತ್ತಡ ಹೇರಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಸಿದ್ಧಗಂಗಾ ಶ್ರೀಗಳ ಬಗ್ಗೆ ಪಠ್ಯವನ್ನು ಕೈಬಿಡಲಾಗಿದೆ. ಬಸವಣ್ಣನವರ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಪಾಠದಲ್ಲಿ ಸಂವಿಧಾನ ಶಿಲ್ಪಿ ಎಂಬ ಹೆಗ್ಗಳಿಕೆಯನ್ನು ಕೈಬಿಡಲಾಗಿದೆ ಎಂಬುದನ್ನು ಸೇರಿದಂತೆ ಹಲವು ಆರೋಪ ರೋಹಿತ್ ಚಕ್ರತೀರ್ಥ (Rohith Chakrathirtha) ನೇತೃತ್ವದ ಸಮಿತಿಯ ಪರಿಷ್ಕರಣೆಯ ವಿರುದ್ಧ ಕೇಳಿಬಂದಿದೆ.